ಕಾಸರಗೋಡು: ರೋಡ್ ಸೈಕ್ಲಿಂಗ್‍ನಲ್ಲಿ ಜಿಲ್ಲೆಗೆ ಅಭಿಮಾನವಾಗಿ ನಿವೃತ್ತ ಸೈನಿಕ ಅಧಿಕಾರಿ ಸೂಪರ್ ರೋಡರ್ ಸಾಧನೆಗೈದಿದ್ದಾರೆ. ಪಳ್ಳಿಕ್ಕೆರೆ ಪಾಕ್ಕಂ ನಿವಾಸಿ ವಿ.ಎನ್.ಶ್ರೀಕಾಂತ್ ಅವರು ಅಪೂರ್ವ ಸಾಧನೆ ಮಾಡಿ ಗಮನಸೆಳೆದಿದ್ದಾರೆ.
ಫ್ರಾನ್ಸ್ ನ ಓಡಕ್ಸ್ ಕ್ಲಬ್ ಪ್ಯಾರಿಸಿನ್ ಎಂಬ ಅಂತಾರಾಷ್ಟ್ರೀಯ ಸೈಕ್ಲಿಂಗ್ ಮಂಡಳಿ ಸಮರ್ಪಕ ನಿಬಂಧನೆಗಳೊಂದಿಗೆ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದಾರೆ. ಭಾರತದಲ್ಲಿ ಓಡಾಕ್ಸ್ ಇಂಡಿಯಾ ರೋಡರ್ಸ್ ಏಜೆನ್ಸಿಯು ಸ್ಪರ್ಧೆ ನಡೆಸುತ್ತಿದೆ.
39-40 ಗಂಟೆಗಳಲ್ಲಿ 600 ಕಿಲೋಮೀಟರ್ ಸಂಚರಿಸಿ ಶ್ರೀಕಾಂತ್ ಸೂಪರ್ ರೋಡರ್ ಸಾಧನೆ ಮಾಡಿದ್ದಾರೆ. ಹದಿಮೂರೂವರೆ ಗಂಟೆಯಲ್ಲಿ 200 ಕಿಲೋಮೀಟರ್, 20 ಗಂಟೆಯಲ್ಲಿ 300 ಕಿಲೋಮೀಟರ್, 27 ಗಂಟೆಯಲ್ಲಿ 400 ಕಿಲೋಮೀಟರ್, 40 ಗಂಟೆಯಲ್ಲಿ 600 ಕಿಲೋಮೀಟರ್ ಹೀಗೆ ಬ್ರೆವೇಗಳಾಗಿ ಸ್ಪರ್ಧೆ ನಡೆಯಿತು. ನವೆಂಬರ್‍ನಲ್ಲಿ ಆರಂಭಗೊಂಡು ಅಕ್ಟೋಬರ್‍ನಲ್ಲಿ ಕೊನೆಗೊಳ್ಳುವ ಸೈಕ್ಲಿಂಗ್ ಹಬ್ಬದಲ್ಲಿ ನಾಲ್ಕು ಬ್ರೆವೇಗಳನ್ನು ಪೂರ್ತಿಗೊಳಿಸುವವರಿಗೆ ಸೂಪರ್ ರೋಡರ್ ಪದವಿ ಲಭಿಸಲಿದೆ.
ಈ ಪದವಿ ಲಭಿಸುವುದರೊಂದಿಗೆ ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿದೆ ಎಂದು 39 ರ ಹರೆಯದ ಶ್ರೀಕಾಂತ್ ಹೇಳಿದ್ದಾರೆ. ಕಾಸರಗೋಡು ಫೆಡರಲ್ಸ್ ಎಕ್ಸಿಕ್ಯೂಟಿವ್ ಸದಸ್ಯರಾದ ಶ್ರೀಕಾಂತ್ 2010 ರಿಂದ ಸೈಕ್ಲಿಂಗ್‍ನಲ್ಲಿ ಸಕ್ರಿಯರಾಗಿದ್ದಾರೆ. ನಾವಿಕ ಪಡೆಯಿಂದ ನಿವೃತ್ತರಾದ ಬಳಿಕ ಪೆರಿಯದಲ್ಲಿ ಸೆಲೋಟೇಪ್ ಎಂಬ ಸಂಸ್ಥೆ ನಡೆಸುತ್ತಿದ್ದಾರೆ.