HEALTH TIPS

ರಾಜ್ಯದಲ್ಲಿ ಇಂದು 4505 ಮಂದಿಗೆ ಕೊರೊನಾ ಸೋಂಕು- ಕಾಸರಗೋಡಲ್ಲಿ 73 ಮಂದಿಗೆ ಸೋಂಕು ದೃಢ

            

          ತಿರುವನಂತಪುರ: ರಾಜ್ಯದಲ್ಲಿ ಇಂದು 4505 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಎರ್ನಾಕುಳಂ 535, ಕೋಝಿಕೋಡ್ 509, ಮಲಪ್ಪುರಂ 476, ಆಲಪ್ಪುಳ 440, ಕೊಲ್ಲಂ 416, ಪತ್ತನಂತಿಟ್ಟು 412, ಕೊಟ್ಟಾಯಂ 407, ತ್ರಿಶೂರ್ 336, ತಿರುವನಂತಪುರ 333, ಕಣ್ಣೂರು 196, ಪಾಲಕ್ಕಾಡ್ 160, ವಯನಾಡ್ 115, ಇಡುಕ್ಕಿ 97, ಕಾಸರಗೋಡು 73 ಎಂಬಂತೆ ಸೋಂಕು ಬಾಧಿಸಿದೆ. 


 

          ಕಳೆದ 24 ಗಂಟೆಗಳಲ್ಲಿ ಯುಕೆ ಯಿಂದ ಬಂದ ಯಾರಲ್ಲೂ ಕೋವಿಡ್ ದೃಢಪಟ್ಟಿಲ್ಲ. ಇತ್ತೀಚೆಗೆ ಯುಕೆಯಿಂದ ಬಂದ 86 ಜನರಿಗೆ ಸೋಂಕು ಖಚಿತಪಡಿಸಲಾಗಿತ್ತು.  ಈ ಪೈಕಿ 72 ಮಂದಿಗೆ ನೆಗೆಟಿವ್ ಆಗಿದೆ. ಒಟ್ಟು 10 ಜನರಿಗೆ ರೂಪಾಂತರಿ ಸೋಂಕು ಇರುವುದು ಪತ್ತೆಯಾಗಿದೆ.

         ಕಳೆದ 24 ಗಂಟೆಗಳಲ್ಲಿ 67,574 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ. 6.67 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್ ಎ ಎಂ ಪಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,09,06,927 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

          ಕಳೆದ 24 ಗಂಟೆಗಳಲ್ಲಿ ಸೋಂಕು ಬಾಧಿಸಿ  15 ಮಂದಿ ಮೃತಪಟ್ಟಿದ್ದಾರೆ.  ಒಟ್ಟು ಸಾವಿನ ಸಂಖ್ಯೆ 4,061 ಕ್ಕೆ ಏರಿಕೆಯಾಗಿದೆ. 

       ಇಂದು ಸೋಂಕು ಪತ್ತೆಯಾದವರಲ್ಲಿ 74 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 4110 ಮಂದಿ ಜನರಿಗೆ ಸೋಂಕು ತಗಲಿತು. ಸಂಪರ್ಕದ ಮೂಲ 288 ಸ್ಪಷ್ಟವಾಗಿಲ್ಲ. ಎರ್ನಾಕುಳಂ 493, ಕೋಝಿಕೋಡ್ 483, ಮಲಪ್ಪುರಂ 461, ಆಲಪ್ಪುಳ 435, ಕೊಲ್ಲಂ 408, ಪತ್ತನಂತಿಟ್ಟು 365, ಕೊಟ್ಟಾಯಂ 378, ತ್ರಿಶೂರ್ 328, ತಿರುವನಂತಪುರ 257, ಕಣ್ಣೂರು 148, ಪಾಲಕ್ಕಾಡ್ 82, ವಯನಾಡ್ 115, ಇಡುಕ್ಕಿ 92, ಕಾಸರಗೋಡು 65 ಮಂದಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ. 

      ಮೂವತ್ತಮೂರು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.  ಕಣ್ಣೂರು 11, ಪತ್ತನಂತಿಟ್ಟು, ಎರ್ನಾಕುಳಂ, ಕೋಝಿಕೋಡ್ ತಲಾ 4, ಪಾಲಕ್ಕಾಡ್ 3, ತ್ರಿಶೂರ್, ಕಾಸರಗೋಡು ತಲಾ 2, ತಿರುವನಂತಪುರ, ಕೊಲ್ಲಂ ಮತ್ತು ಇಡುಕಿ ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ಕಂಡುಬಂದಿದೆ.

          ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 4854 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 387, ಕೊಲ್ಲಂ 427, ಪತ್ತನಂತಿಟ್ಟು 566, ಆಲಪ್ಪುಳ 305, ಕೊಟ್ಟಾಯಂ 378, ಇಡಕ್ಕಿ 93, ಎರ್ನಾಕುಳಂ 537, ತ್ರಿಶೂರ್ 430, ಪಾಲಕ್ಕಾಡ್ 107, ಮಲಪ್ಪುರಂ 578, ಕೊಝಿಕೋಡ್ 590, ವಯನಾಡ್ 142, ಕಣ್ಣೂರು 202, ಕಾಸರಗೋಡು 112 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 59,814 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 9,61,789 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

        ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,54,520 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,45,239 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 9191 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಒಟ್ಟು 1,093 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

          ಇಂದು 4 ಹೊಸ ಹಾಟ್‍ಸ್ಪಾಟ್‍ಗಳಿವೆ. 67 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 368 ಹಾಟ್‍ಸ್ಪಾಟ್‍ಗಳಿವೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries