HEALTH TIPS

ಮಾರ್ಚ್ 4,5,6 ರಂದು ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರದಲ್ಲಿ ವಾರ್ಷಿಕ ನಡೋದಿ ಮಹೋತ್ಸವ

     

         ಬದಿಯಡ್ಕ: ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರದಲ್ಲಿ ವಾರ್ಷಿಕ ನಡೋದಿ ಮಹೋತ್ಸವವು ಮಾರ್ಚ್ 4, 5,6 ದಿನಗಳಲ್ಲಿ ಜರಗಲಿದೆ. ಮಾರ್ಚ್ 2 ರಂದು ನಡೋದಿ ಮಹೋತ್ಸವದ ಅಂಗವಾಗಿ ಅಂಗಳ ಶುದ್ದೀಕರಣ ನಡೆಯಲಿದೆ. 

          ಮಾರ್ಚ್ 4 ಬೆಳಗ್ಗೆ 8 ಕ್ಕೆ ಆಯತ್ತಾರ್ ಕಲ್ಲಿನಲ್ಲಿ ದೀಪ ಬೆಳಗಿಸಿ ಪ್ರಾರ್ಥನೆ, 9 ರಿಂದ ಕ್ಷೇತ್ರದಲ್ಲಿ ಗಣಪತಿ ಹೋಮ, ರಾತ್ರಿ 7.30 ರಿಂದ ಮರು ದಿವಸ ಸೂಯೋದಯದ ವರೆಗೆ ಶ್ರೀ ಭಂಡಾರ ಮನೆಯಲ್ಲಿ ಶ್ರೀ ದೇವಿಯ ಸ್ಥುತಿ ಹಾಡುವುದು, ಮಾರ್ಚ್ 5 ರಂದು ಬೆಳಗ್ಗೆ 9 ಕ್ಕೆ ಭಂಡಾರ ಮನೆಯಿಂದ ಶ್ರೀ ಕ್ಷೇತ್ರಕ್ಕೆ ಭಂಡಾರ ಆಗಮನ, 11 ಕ್ಕೆ ಶುದ್ದಿ, ಕೊಡಿ ಎಲೆ ಇಡುವುದು, 12 ರಿಂದ ಅನ್ನ ಸಂತರ್ಪಣೆ, ಸಂಜೆ 6 ಕ್ಕೆ ದೀಪಾರಾಧನೆ, 6.30 ಕ್ಕೆ ಪಾಲಕುನ್ನು ಶ್ರೀ ಭಗವತಿ ಕ್ಷೇತ್ರದ ಆಚಾರ ಸ್ಥಾನಿಕರಾಗಿ 50  ಸಂವತ್ಸರ ಪೂರೈಸಿದ ಕಪ್ಪಣಕ್ಕಾಲ್ ಕುಞÂಕಣ್ಣ ಆಯತ್ತಾರ್ ಅವರಿಗೆ ಕ್ಷೇತ್ರ ಆಡಳಿತ ಸಮಿತಿ, ಪ್ರವಾಸಿ ಸಮಿತಿ, ಯುವಜನ ಸಮಿತಿಯ ಆಶ್ರಯದಲ್ಲಿ ಅಭಿನಂದನೆ, 7 ರಿಂದ ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಭಜನಾ ಸಂಘದ ವತಿಯಿಂದ ಭಜನೆ, 10.30 ಕ್ಕೆ ಹೂವಿನ ಪೂಜೆ, ನಡೋದಿ ಮಹೋತ್ಸವ, ಆಯಿರತ್ತಿರಿ, ತುಲಾಭಾರ,  ಮಾರ್ಚ್ 6 ರಂದು ಬೆಳಗ್ಗೆ 3 ಕ್ಕೆ ಬಲಿ ಉತ್ಸವ, 5 ಕ್ಕೆ ಪ್ರಸಾದ ವಿತರಣೆ, 6 ಕ್ಕೆ ಭಂಡಾರ ನಿರ್ಗಮನ ಎಂಬೀ ಕಾರ್ಯಕ್ರಮಗಳು ನಡೆಯಲಿವೆ.

               ನಡೋದಿಯ ಅಂಗವಾಗಿ ಗೊನೆ ಕಡಿಯುವ ಕಾರ್ಯಕ್ರಮ ನಡೆಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries