ಕಳೆದ 24 ಗಂಟೆಗಳಲ್ಲಿ ಯು .ಕೆ ಯಿಂದ ಆಗಮಿಸಿದ ಇಬ್ಬರಲ್ಲಿ ಸೋಂಕು ದೃಢ ಪಡಿಸಲಾಗಿದೆ. ಇತ್ತೀಚೆಗೆ ಯುಕೆಯಿಂದ ಬಂದ 86 ಜನರಲ್ಲಿ ಸೋಂಕು ಖಚಿತಪಡಿಸಲಾಗಿತ್ತು. ಈ ಪೈಕಿ 71 ಮಂದಿಗೆ ಋಣಾತ್ಮಕವಾಗಿದೆ. ಒಟ್ಟು 10 ಜನರಿಗೆ ರೂಪಾಂತರಿ ವೈರಸ್ ಇರುವುದು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 67,506 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು 6.79 ಶೇ. ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎನ್ಎಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ LAMP ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,08,39,353 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 14 ಮಂದಿ ಕೋವಿಡ್ ಕಾರಣ ಮೃತಪಟ್ಟಿದ್ದು ಒಟ್ಟು ಸಾವಿನ ಸಂಖ್ಯೆ 4,046 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 95 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 4184 ಜನರಿಗೆ ಸೋಂಕು ತಗಲಿತು. 279 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೋಝಿಕೋಡ್ 618, ಎರ್ನಾಕುಳಂ 568, ಮಲಪ್ಪುರಂ 466, ಪತ್ತನಂತಿಟ್ಟು 433, ಕೊಲ್ಲಂ 361, ಕೊಟ್ಟಾಯಂ 345, ತ್ರಿಶೂರ್ 338, ತಿರುವನಂತಪುರ 215, ಆಲಪ್ಪುಳ 243, ಕಣ್ಣೂರು 170, ಕಾಸರಗೋಡು 163, ವಯನಾಡ್ 125, ಪಾಲಕ್ಕಾಡ್ 67, ಇಡುಕ್ಕಿ 72 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು 26 ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ತಿರುವನಂತಪುರ, ಕೋಝಿಕೋಡ್ ತಲಾ 5, ಕಣ್ಣೂರು, ಕಾಸರಗೋಡು ತಲಾ 4, ಕೊಲ್ಲಂ, ಪತ್ತನಂತಿಟ್ಟು ತಲಾ 2, ಆಲಪ್ಪುಳ, ಎರ್ನಾಕುಳಂ, ಪಾಲಕ್ಕಾಡ್ ಮತ್ತು ವಯನಾಡ್ ತಲಾ 1.
ಸೋಂಕು ಪತ್ತೆಯಾದ 5193 ರೋಗಿಗಳ ಪರೀಕ್ಷಾ ಫಲಿತಾಂಶಗಳು ಋಣಾತ್ಮಕವಾಗಿವೆ. ತಿರುವನಂತಪುರ 364, ಕೊಲ್ಲಂ 389, ಪತ್ತನಂತಿಟ್ಟು 851, ಆಲಪ್ಪುಳ 429, ಕೊಟ್ಟಾಯಂ 403, ಇಡುಕ್ಕಿ 134, ಎರ್ನಾಕುಳಂ 597, ತ್ರಿಶೂರ್ 340, ಪಾಲಕ್ಕಾಡ್ 168, ಮಲಪ್ಪುರಂ 315, ಕೋಝಿಕೋಡ್ 708, ವಯನಾಡ್ 178 , ಕಣ್ಣೂರು 216,ಕಾಸರಗೋಡು 101. ಇದರೊಂದಿಗೆ, 60,178 ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 9,56,935 ಮಂದಿ ಈವರೆಗೆ ಕೋವಿಡ್‌ನಿಂದ ಮುಕ್ತರಾಗಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,55,857 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,46,351 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 9506 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಒಟ್ಟು 1131 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು 3 ಹೊಸ ಹಾಟ್‌ಸ್ಪಾಟ್‌ಗಳಿವೆ. 2 ಪ್ರದೇಶಗಳನ್ನು ಹಾಟ್‌ಸ್ಪಾಟ್‌ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 433 ಹಾಟ್‌ಸ್ಪಾಟ್‌ಗಳಿವೆ.