HEALTH TIPS

ರಾಜ್ಯದಲ್ಲಿ ಇಂದು 4612 ಜನರಿಗೆ ಕೊರೋನಾ-ಕಾಸರಗೋಡು 72 ಮಂದಿಗೆ ಸೋಂಕು

          ತಿರುವನಂತಪುರ: ರಾಜ್ಯದಲ್ಲಿ ಇಂದು 4612 ಜನರಿಗೆ ಕೊರೋನಾ ಖಚಿತಪಡಿಸಲಾಗಿದೆ. ಮಲಪ್ಪುರಂ 630, ಕೊಟ್ಟಾಯಂ 532, ಕೋಝಿಕೋಡ್ 476, ಪತ್ತನಂತಿಟ್ಟು 465, ಎರ್ನಾಕುಳಂ 439, ತ್ರಿಶೂರ್ 377, ಆಲಪ್ಪುಳ 349, ಕೊಲ್ಲಂ 347, ತಿರುವನಂತಪುರ 305, ಪಾಲಕ್ಕಾಡ್ 169, ಕಣ್ಣೂರು 164, ವಯನಾಡ್ 145, ಇಡುಕ್ಕಿ 142, ಕಾಸರಗೋಡು 72 ಎಂಬಂತೆ ಸೋಂಕು ದೃಢಪಡಿಸಲಾಗಿದೆ. 


         ಕಳೆದ 24 ಗಂಟೆಗಳಲ್ಲಿ ಯುಕೆ ಯಿಂದ ಆಗಮಿಸಿದ ಯಾರಲ್ಲೂ ಕೊರೋನಾ ದೃಢೀಕರಿಸಲಾಗಿಲ್ಲ. ಇಲ್ಲಿಯವರೆಗೆ, ಕೊರೋನಾ ಯುಕೆ ಯಿಂದ ಆಗಮಿಸಿದ್ದ 82 ಮಂದಿಗಳಲ್ಲಿ ದೃಢಪಡಿಸಲಾಗಿದೆ. ಈ ಪೈಕಿ 70 ಮಂದಿಯ ಪರೀಕ್ಷಾ ಫಿಲಿತಾಂಶ ಋಣಾತ್ಮಕವಾಗಿದೆ. ಒಟ್ಟು 10 ಜನರಿಗೆ ರೂಪಾಂತರಿ  ವೈರಸ್ ಇರುವುದು ಪತ್ತೆಯಾಗಿದೆ.

            ಕಳೆದ 24 ಗಂಟೆಗಳಲ್ಲಿ 61,843 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ.7.46 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,05,88,079 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

        ಕಳೆದ 24 ಗಂಟೆಗಳಲ್ಲಿ 15 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 3985 ಕ್ಕೆ ಏರಿಕೆಯಾಗಿದೆ. 

        ಇಂದು, ಸೋಂಕು ಪತ್ತೆಯಾದವರಲ್ಲಿ 104 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 4173 ಮಂದಿ ಜನರಿಗೆ ಸೋಂಕು ತಗುಲಿತು. 293 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 601, ಕೊಟ್ಟಾಯಂ 487, ಕೋಝಿಕೋಡ್ 456, ಪತ್ತನಂತಿಟ್ಟು 410, ಎರ್ನಾಕುಳಂ 418, ತ್ರಿಶೂರ್ 369, ಆಲಪ್ಪುಳ 336, ಕೊಲ್ಲಂ 333, ತಿರುವನಂತಪುರ 223, ಪಾಲಕ್ಕಾಡ್ 90, ಕಣ್ಣೂರು 118, ವಯನಾಡ್ 138, ಇಡುಕ್ಕಿ 137, ಕಾಸರಗೋಡು 57 ಎಂಬಂತೆ ಸಂಪರ್ಕದಿಂದ ಸೋಂಕು ಉಂಟಾಗಿದೆ. 

        42 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಕಂಡುಬಂದಿದೆ. ಕೊಟ್ಟಾಯಂ 10, ಕೋಝಿಕೋಡ್ 6, ವಯನಾಡ್ 5, ಕೊಲ್ಲಂ 4, ತಿರುವನಂತಪುರ, ಪತ್ತನಂತಿಟ್ಟು, ಕಣ್ಣೂರು ತಲಾ 3, ಎರ್ನಾಕುಳಂ, ಮಲಪ್ಪುರಂ, ಕಾಸರಗೋಡು ತಲಾ 2, ತ್ರಿಶೂರ್ ಮತ್ತು ಪಾಲಕ್ಕಾಡ್ ತಲಾ 1 ಎಂಬಂತೆ ಸೋಂಕು ಕಂಡುಬಂದಿದೆ.

      ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 4692 ಜನರ ಪರೀಕ್ಷಾ ಫಲಿತಾಂಶಗಳು ಋಣಾತ್ಮಕವಾಗಿವೆ. ತಿರುವನಂತಪುರ 367, ಕೊಲ್ಲಂ 253, ಪತ್ತನಂತಿಟ್ಟು 257, ಆಲಪ್ಪುಳ 413, ಕೊಟ್ಟಾಯಂ 297, ಇಡುಕಿ 211, ಎರ್ನಾಕುಲಂ 640, ತ್ರಿಶೂರ್ 452, ಪಾಲಕ್ಕಾಡ್ 302, ಮಲಪ್ಪುರಂ 315, ಕೋಝಿಕೋಡ್ 639, ವಯನಾಡ್ 217, ಕಣ್ಣೂರು 280, ಕಾಸರಗೋಡು 49 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 63,484 ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 9,36,398 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

        ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,48,669 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,38,545 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 10,124 ಆಸ್ಪತ್ರೆಗಳಲ್ಲಿವೆ. ಒಟ್ಟು 1237 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು 6 ಹೊಸ ಹಾಟ್‍ಸ್ಪಾಟ್‍ಗಳಿವೆ. ಯಾವುದೇ ಪ್ರದೇಶವನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿಲ್ಲ. ಪ್ರಸ್ತುತ ಒಟ್ಟು 460 ಹಾಟ್‍ಸ್ಪಾಟ್‍ಗಳಿವೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries