ತಿರುವನಂತಪುರ: ಕೇರಳದಲ್ಲಿ ಇಂದು 4650 ಜನರಿಗೆ ಕೋವಿಡ್ ದೃಢಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕೋಝಿಕೋಡ್ 602, ಎರ್ನಾಕುಳಂ 564, ಮಲಪ್ಪುರಂ 529, ತ್ರಿಶೂರ್ 503, ಕೊಲ್ಲಂ 444, ಆಲಪ್ಪುಳ 382, ತಿರುವನಂತಪುರ 328, ಪತ್ತನಂತಿಟ್ಟು 317, ಕೊಟ್ಟಾಯಂ 267, ಪಾಲಕ್ಕಾಡ್ 193, ಕಣ್ಣೂರು 176, ವಯನಾಡು 143, ಕಾಸರಗೋಡು 124, ಇಡುಕ್ಕಿ 78ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ ಯುಕೆ ಯಿಂದ ಆಗಮಿಸಿದ ಯಾರಲ್ಲೂ ಸೋಂಕು ದೃಢೀಕರಿಸಿಲ್ಲ. ಆದರೆ ಇತ್ತೀಚೆಗೆ ಯುಕೆಯಿಂದ ಬಂದ 86 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈ ಪೈಕಿ 72 ಮಂದಿಯ ಪರೀಕ್ಷೆಯ ಫಲಿತಾಂಶ ನಕಾರಾತ್ಮಕವಾಗಿದೆ. ಒಟ್ಟು 10 ಜನರಿಗೆ ರೂಪಾಂತರಿ ವೈರಸ್ ಇರುವುದು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 65,968 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ 7.05 ಶೇ ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಐ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,09,72,895 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 13 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 4,074 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 76 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 4253 ಮಂದಿ ಜನರಿಗೆ ಸೋಂಕು ತಗುಲಿತು. 295 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೋಝಿಕೋಡ್ 590, ಎರ್ನಾಕುಳಂ 532, ಮಲಪ್ಪುರಂ 513, ತ್ರಿಶೂರ್ 489, ಕೊಲ್ಲಂ 438, ಆಲಪ್ಪುಳ 378, ತಿರುವನಂತಪುರ 208, ಪತ್ತನಂತಿಟ್ಟು 288, ಕೊಟ್ಟಾಯಂ 252, ಪಾಲಕ್ಕಾಡ್ 111, ಕಣ್ಣೂರು 137, ವಯನಾಡ್ 135, ಕಾಸರಗೋಡು 107, ಇಡುಕ್ಕಿ 75 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು 26 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಕಂಡುಬಂದಿದೆ. ಕಣ್ಣೂರು, ಕಾಸರಗೋಡು ತಲಾ 4, ತಿರುವನಂತಪುರ, ಕೊಲ್ಲಂ, ಎರ್ನಾಕುಳಂ, ತ್ರಿಶೂರ್ ತಲಾ 3, ಪತ್ತನಂತಿಟ್ಟು, ಕೋಝಿಕೋಡ್ ತಲಾ 2, ಇಡುಕಿ ಮತ್ತು ವಯನಾಡ್ ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಕಂಡುಬಂದಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 5841 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 459, ಕೊಲ್ಲಂ 780, ಪತ್ತನಂತಿಟ್ಟು 550, ಆಲಪ್ಪುಳ 361, ಕೊಟ್ಟಾಯಂ 539, ಇಡುಕಿ 263, ಎರ್ನಾಕುಳಂ 658, ತ್ರಿಶೂರ್ 404, ಪಾಲಕ್ಕಾಡ್ 164, ಮಲಪ್ಪುರಂ 596, ಕೊಝಿಕೋಡ್ 659, ವಯನಾಡ್ 151, ಕಣ್ಣೂರು 217, ಕಾಸರಗೋಡು 40 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 58,606 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 9,67,630 ಮಂದಿ ಈವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.