HEALTH TIPS

ಬದಲಾಗುತ್ತಾ ಭಾರತ-ವಾರದಲ್ಲಿ ಕೇವಲ 4 ದಿನ ಕೆಲಸಕ್ಕೆ ಅವಕಾಶ: ಕೇಂದ್ರ ಕಾರ್ಮಿಕ ನೀತಿಯಲ್ಲಿ ಪ್ರಸ್ತಾವನೆ

       ನವದೆಹಲಿ: ದಿನಕ್ಕೆ 8 ತಾಸಿನಂತೆ ವಾರದ 6 ದಿನದ ಕಲಸದ ಬದಲು ದಿನಕ್ಕೆ 12 ತಾಸಿನಂತೆ ವಾರಕ್ಕೆ ನಾಲ್ಕೇ ದಿನ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡುವ ಕಾನೂನನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. 


      ಕೇಂದ್ರ ಕಾರ್ಮಿಕ ಸಚಿವಾಲಯ ನೂತನ ಕಾರ್ಮಿಕ ಸಂಹಿತೆ ಜಾರಿ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು, ಅದರನ್ವಯ ಕಂಪನಿಗಳು ನೌಕರರ ಕೆಲಸದ ದಿನವನ್ನು ವಾರಕ್ಕೆ 4 ದಿನಕ್ಕೆ ಇಳಿಸುವುದಕ್ಕೆ ಅವಕಾಶ ನೀಡಲಾಗಿದೆ. ಆದರೆ, ಕೆಲಸದ ಅವಧಿ ವಾರದಲ್ಲಿ 48 ಗಂಟೆ ಹಾಗೆಯೇ ಇರಲಿದೆ ಎನ್ನಲಾಗಿದೆ.

     ಇದೇ ವೇಳೆ ಕಂಪನಿಗಳು ವಿಮಾನ ಸೌಲಭ್ಯದ ಮೂಲಕ ನೌಕರರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು ಎಂಬುದೂ ಪ್ರಸ್ತಾವನೆಯಲ್ಲಿದ್ದು, ಕಂಪನಿಗಳು ಉದ್ಯೋಗಿಗಳ ಸಮ್ಮತಿಯ ಮೇರೆಗೆ ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಿಸಿಕೊಳ್ಳಬಹುದು. ವಾರದಲ್ಲಿ 3 ದಿನ ವೇತನ ಸಹಿತ ರಜೆಯನ್ನು  ನೀಡಬೇಕು. ಕೆಲಸದ ದಿನಗಳಲ್ಲಿ ಹೊಂದಾಣಿಕೆ ಮಾಡಲು ಕಂಪನಿಗಳಿಗೆ ಅವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ. 

     ಈ ಕುರಿತು ಮಾಹಿತಿ ನೀಡಿರುವ ಕಾರ್ಮಿಕ ಸಚಿವಾಲಯ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು, ಕೆಲಸದ ದಿನಗಳಲ್ಲಿನ ಒತ್ತಡ ಸಡಿಲಗೊಳಿಸಲು ಪ್ರಯತ್ನ ಮಾಡಲಾಗುತ್ತಿದೆ. ಹಲವು ಕಂಪನಿಗಳು ವಾರದಲ್ಲಿ 4 ದಿನಗಳ ಕೆಲಸಕ್ಕೆ ಸಮ್ಮತಿ ನೀಡಿವೆ. ಮತ್ತೆ ಕೆಲವು ಸಂಸ್ಥೆಗಳು ವಾರದಲ್ಲಿ 5 ದಿನಗಳ ಕರ್ತವ್ಯಕ್ಕೆ  ಒಲವು ತೋರಿವೆ ಎಂದು ಹೇಳಿದ್ದಾರೆ. 

     ಈ ಕುರಿತ ಕರಡಿನ ಕುರಿತು ಜನವರಿಯಲ್ಲಿ ವಿವಿಧ ರಾಜ್ಯಗಳಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಕಾರ್ಮಿಕ ನೀತಿಗಳಿಗೆ ಇದೀಗ ಅಂತಿಮ ರೂಪ ನೀಡಲಾಗುತ್ತಿದೆ. ವಿವಿಧ ರಾಜ್ಯಗಳೊಂದಿಗೆ ಹೊಸ ನೀತಿಗಳು ಕುರಿತು ಮಾತುಕತೆ ನಡೆಸಲಾಗಿದೆ. ಬಹುತೇಕ ರಾಜ್ಯಗಳು ನೂತನ ನೀತಿಗಳನ್ನು ದೃಢೀಕರಿಸುತ್ತಿವೆ.  ಉತ್ತರಪ್ರದೇಶ, ಪಂಜಾಬ್, ಮಧ್ಯಪ್ರದೇಶದಂತಹ ರಾಜ್ಯಗಳು ಫೆ.10ರೊಳಗೆ ತಮ್ಮ ಅಭಿಪ್ರಾಯ ಸಲ್ಲಿಸಲಿವೆ ಎಂದು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries