HEALTH TIPS

5 ವರ್ಷದ ಅವಧಿಯಲ್ಲಿ 2 ಲಕ್ಷ ಮಂದಿಗೆ ಭೂಹಕ್ಕು ಪತ್ರ ವಿತರಣೆ- ಮುಖ್ಯಮಂತ್ರಿ: ಕಾಸರಗೋಡು ಜಿಲ್ಲೆಯಲ್ಲಿ 9312 ಮಂದಿಗೆ ಭೂಹಕ್ಕು ಪತ್ರ ವಿತರಣೆ

      

          ಕಾಸರಗೋಡು: ಕಳೆದ 5 ವರ್ಷದ ಅವಧಿಯಲ್ಲಿ 2 ಲಕ್ಷ ಮಂದಿಗೆ ಭೂಹಕ್ಕು ಪತ್ರ ವಿತರಣೆ ಮಾಡಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ 9312 ಮಂದಿಗೆ ಭೂಹಕ್ಕು ಪತ್ರ ವಿತರಣೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು. 

           ರಾಜ್ಯ ಸರಕಾರದ ನೂರು ದಿನಗಳ ಕ್ರಿಯಾ ಯೋಜನೆಯ ಅಂಗವಾಗಿ ಕಂದಾಯ ಇಲಾಖೆ ಪೂರ್ತಿಗೊಳಿಸಲಿರುವ ಯೋಜನೆಗಳ ಉದ್ಘಾಟನೆ ಮತ್ತು 13,320 ಮಂದಿಗೆ ಭೂಹಕ್ಕು ಪತ್ರ ವಿತರಣೆ ಸಮಾರಂಭವನ್ನು ಸೋಮವಾರ ಆನ್ ಲೈನ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. 

       ಸೋಮವಾರ ಕಾಸರಗೋಡು ಜಿಲ್ಲೆಯಲ್ಲಿ 492 ಮಂದಿಗೆ ಭೂಹಕ್ಕು ಪತ್ರ ವಿತರಣೆ ನಡೆಸಲಾಗಿದೆ. ಇದರಲ್ಲಿ 296 ಎಲ್.ಟಿ. ಭೂಹಕ್ಕು ಪತ್ರಗಳು, 196 ಎಲ್.ಎ.ಭೂಹಕ್ಕು ಪತ್ರಗಳಾಗಿವೆ. ಸ್ಮಾರ್ಟ್ ವಿಲ್ಲೇಜ್ ಆಫೀಸ್ ಯೋಜನೆಯ ಅಂಗವಾಗಿ ರೀಬಿಲ್ಡ್ ಕೇರಳ ಯೋಜನೆಯಲ್ಲಿ ಅಳವಡಿಸಿ ಮಧೂರು, ಬಂದಡ್ಕ, ಎಡನಾಡು, ಮೀಂಜ, ಉದುಮಾ, ಕುತ್ತಿಕೋಲು, ಪಡನ್ನ, ಪಿಲಿಕೋಡ್, ಪಾಲಾವಯಲ್ ಗ್ರಾಮ ಕಚೇಋಇಗಳ ಉದ್ಘಾಟನೆ ಈ ಸಮಾರಂಭ ಅಂಗವಾಗಿ ಈ ವೇಳೆ ಜರುಗಿತು. 

        ಕಾಸರಗೋಡು ಜಿಲ್ಲಾಧಿಕಾರಿ ಸಬಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಸಮಾರಂಭದಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಭೂಹಕ್ಕು ಪತ್ರ ವಿತರಣೆ ನಡೆಸಿದರು. ಉಪಜಿಲ್ಲಾಧಿಕಾರಿ ಡಿ.ಆರ್. ಮೇಘಶ್ರೀ, ಹೆಚ್ಚುವರಿ ದಂಡನಾಧಿಕಾರಿ ಅತುಲ್ ಎಸ್. ನಾಥ್, ತಹಸೀಲ್ದಾರರು ಉಪಸ್ಥಿತರಿದ್ದರು. 

            ಉದುಮಾ ಗ್ರಾಮ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಕೆ.ಕುಂuಟಿಜeಜಿiಟಿeಜರಾಮನ್ ಶಿಲಾಫಲಕ ಅನಾವರಣಗೊಳಿಸಿದರು. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎ.ಜಯತಿಲಕ್ ಸ್ವಾಗತಿಸಿದರು. ಭೂಕಂದಾಯ ಕಮೀಷನರ್ ಕೆ.ಬಿಜು ವಂದಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries