ಕೊಚ್ಚಿ: ತೊಪುಂಪಡಿ ಬಂದರಿನ ಅಭಿವೃದ್ಧಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಮಂಡಿಸಲಾದ ಮುಂಗಡಪತ್ರದಲ್ಲಿ ಕೇಂದ್ರ ನೆರವು ಘೋಷಿಸಿರುವರು. ಐದು ಮೀನುಗಾರಿಕೆ ಬಂದರುಗಳ ಅಭಿವೃದ್ಧಿಯ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಮೀನುಗಾರಿಕೆ ಬಂದರುಗಳು ಮತ್ತು ಮೀನುಗಾರಿಕೆ ಕೇಂದ್ರಗಳಲ್ಲಿ ದೊಡ್ಡ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿರುವರು.
ಕೊಚ್ಚಿಯಲ್ಲದೆ, ಚೆನ್ನೈ, ವಿಶಾಖಪಟ್ಟಣಂ, ಪ್ಯಾರದೀಪ್ ಮತ್ತು ಪೆಟ್ವಾಗಟ್ ಬಂದರುಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಹೊಂದಿದ್ದಾರೆ. ಮೀನುಗಾರಿಕಾ ಬಂದರುಗಳನ್ನು ವಾಣಿಜ್ಯ ಬಂದರುಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಆದರೆ ಯೋಜನೆಗಾಗಿ ನಿಗದಿಪಡಿಸಿದ ಮೊತ್ತದ ಬಗ್ಗೆ ಬಜೆಟ್ ಪ್ರಕಟಣೆಯಲ್ಲಿ ಯಾವುದೇ ಮಾಹಿತಿ ಇರಲಿಲ್ಲ.
500 ದೋಣಿಗಳಲ್ಲಿ ಪ್ರತಿದಿನ ಸುಮಾರು 250 ಟನ್ ಮೀನುಗಳು ಕೊಚ್ಚಿ ಮೀನುಗಾರಿಕೆ ಬಂದರನ್ನು ತಲುಪುತ್ತವೆ. ಆದಾಗ್ಯೂ, 1928 ರಲ್ಲಿ ಸ್ಥಾಪನೆಯಾದ ಈ ಬಂದರು ಮೂಲಸೌಕರ್ಯಗಳ ಕೊರತೆಯಿಂದಾಗಿ ತನ್ನ ಸಾಮಥ್ರ್ಯದಲ್ಲಿ ಶೇಕಡಾ 20 ರಿಂದ 25 ರಷ್ಟು ನಷ್ಟವಾಗುತ್ತಿದೆ ಎಂದು ವರದಿಯಾಗಿದೆ. ಇದಲ್ಲದೆ, ಕಳಪೆ ನೈರ್ಮಲ್ಯ ಮತ್ತು ಮಾನವಶಕ್ತಿಯ ಕೊರತೆಯು ಬಂದರಿನ ದಕ್ಷತೆಯ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿಯೇ ಕೇಂದ್ರ ಸರ್ಕಾರ ಯೋಜನಾ ಅನುಷ್ಠಾನಕ್ಕೆ ಆಶಿಸಿದೆ.
ಈ ಹಿನ್ನೆಲೆಯಲ್ಲಿ ಬಂದರಿನ ಅಭಿವೃದ್ಧಿಗೆ 140 ಕೋಟಿ ರೂ.ಗಳ ಯೋಜನೆಯನ್ನು ಜಾರಿಗೆ ತರಲು ಕಳೆದ ವರ್ಷ ಒಪ್ಪಂದ ಮಾಡಿಕೊಳ್ಳಲಾಯಿತು. ಈ ನಿಟ್ಟಿನಲ್ಲಿ ಬಂದರು ಟ್ರಸ್ಟ್ ಸಮುದ್ರಾಹಾರ ರಫ್ತು ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಪ್ರತ್ಯೇಕ ಏಜೆನ್ಸಿಯನ್ನು ಸ್ಥಾಪಿಸಿ ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ಹಣ ಪಡೆಯಲಾಗುವುದು.