HEALTH TIPS

ರಾಜ್ಯದಲ್ಲಿ ಇಂದು 5214 ಮಂದಿಗೆ ಕೋವಿಡ್-ಕಾಸರಗೋಡು 112 ಮಂದಿಗೆ ಸೋಂಕು ದೃಢ


       ತಿರುವನಂತಪುರ: ರಾಜ್ಯದಲ್ಲಿ ಇಂದು 5214 ಜನರಿಗೆ ಕೋವಿಡ್  ಖಚಿತಪಡಿಸಲಾಗಿದೆ. ಎರ್ನಾಕುಳಂ 615, ಕೊಲ್ಲಂ 586, ಕೊಟ್ಟಾಯಂ 555, ತ್ರಿಶೂರ್ 498, 
ಪತ್ತನಂತಿಟ್ಟು  496, ಕೋಝಿಕೋಡ್ 477, ತಿರುವನಂತಪುರ 455, ಮಲಪ್ಪುರಂ 449, ಆಲಪ್ಪುಳ 338, ಕಣ್ಣೂರು 273, ಪಾಲಕ್ಕಾಡ್ 186, ಕಾಸರಗೋಡು 112, ಇಡುಕ್ಕಿ  100, ವಯನಾಡ್ 74 ಎಂಬಂತೆ ಸೋಂಕು ಬಾಧಿಸಿದೆ.


       ಕಳೆದ 24 ಗಂಟೆಗಳಲ್ಲಿ ಯುಕೆ ಯಿಂದ  ಆಗಮಿಸಿದ  
ಯಾರಿಗೂ ಸೋಂಕು ಉಂಟಾಗಿಲ್ಲ. ಇತ್ತೀಚೆಗೆ ಯುಕೆಯಿಂದ ಬಂದ 81 ಜನರಿಗೆ ಸೋಂಕು ಖಚಿತಪಡಿಸಲಾಗಿತ್ತು. ಈ ಪೈಕಿ 69 ಮಂದಿಗಳ ಪರೀಕ್ಷೆಗಳಲ್ಲಿ ನಕಾರಾತ್ಮಕವಾಗಿದೆ. ಒಟ್ಟು 10 ಜನರಿಗೆ ರೂಪಾಂತರಿ ವೈರಸ್ ಇರುವುದು ಪತ್ತೆಯಾಗಿದೆ.
       ಕಳೆದ 24 ಗಂಟೆಗಳಲ್ಲಿ 69,844 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ.7.47 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,02,14,097 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
       ಕಳೆದ 24 ಗಂಟೆಗಳಲ್ಲಿ  19 ಮಂದಿ ಕೋವಿಡ್ ಕಾರಣ 
ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 3902 ಕ್ಕೆ ಏರಿಕೆಯಾಗಿದೆ. 
      ಇಂದು, ಸೋಂಕು ರೋಗನಿರ್ಣಯ ಮಾಡಿದವರಲ್ಲಿ 61 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 4788 ಜನರಿಗೆ ಸೋಂಕು ತಗುಲಿತು. 336 ಮಂದಿಯ  ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಲಂ 580, ಕೊಲ್ಲಂ 580, ಕೊಟ್ಟಾಯಂ 512, ತ್ರಿಶೂರ್ 485, ಪತ್ತನಂತಿಟ್ಟು 451, ಕೋಝಿಕೋಡ್ 460, ತಿರುವನಂತಪುರ 366, ಮಲಪ್ಪುರಂ 428, ಆಲಪ್ಪುಳ 334, ಕಣ್ಣೂರು 233, ಪಾಲಕ್ಕಾಡ್ 92, ಕಾಸರಗೋಡು 100, ಇಡುಕ್ಕಿ  100 ಎಂಬಂತೆ ಸಂಪರ್ಕದಿಂದ ಸೋಂಕು ಉಂಟಾಗಿದೆ.
       29 ಆರೋಗ್ಯ ಕಾರ್ಯಕರ್ತರಿಗೆ ಇಂದು     ಸೋಂಕು ಕಂಡುಬಂದಿದೆೆ. 
ಎರ್ನಾಕುಳಂ 6, ತಿರುವನಂತಪುರ, ಕೋಝಿಕೋಡ್, ತ್ರಿಶೂರ್ ತಲಾ 4, ಪತ್ತನಂತಿಟ್ಟ 3, ಕೊಲ್ಲಂ, ಕಣ್ಣೂರು ತಲಾ 2, ಇಡುಕಿ, ಪಾಲಕ್ಕಾಡ್, ವಯನಾಡ್ ಮತ್ತು ಕಾಸರಗೋಡು ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.
          ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 6475 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 422, ಕೊಲ್ಲಂ 317, ಪತ್ತನಂತಿಟ್ಟು 423, ಆಲಪ್ಪುಳ 279, ಕೊಟ್ಟಾಯಂ 1194, ಇಡುಕ್ಕಿ 388, ಎರ್ನಾಕುಳಂ 605, ತ್ರಿಶೂರ್ 506, ಪಾಲಕ್ಕಾಡ್ 201, ಮಲಪ್ಪುರಂ 645, ಕೋಝಿಕೋಡ್ 797, ವಯನಾಡ್ 266, ಕಣ್ಣೂರು 263, ಕಾಸರಗೋಡು 169 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ, 64,131 ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 9,09,102 ಮಂದಿ ಈವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.
         ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,33,664 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,23,434 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 10,230 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 1179 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು 10 ಹೊಸ ಹಾಟ್‍ಸ್ಪಾಟ್‍ಗಳಿವೆ. 3 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 459 ಹಾಟ್‍ಸ್ಪಾಟ್‍ಗಳಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries