ತಿರುವನಂತಪುರ: ರಾಜ್ಯದಲ್ಲಿ ಇಂದು 5610 ಮಂದಿಗೆ ಕೋವಿಡ್ ದೃಢಪಡಿಸಲಾಗಿದೆ. ಇದರೊಂದಿಗೆ ಪ್ರಸ್ತುತ 67,795 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 5131 ಜನರಿಗೆ ಸೋಂಕು ಸಂಪರ್ಕದಿಂದ ಉಂಟಾಗಿದೆ. 350 ಮಂದಿ ಜನರಿಗೆ ಸಂಪರ್ಕ ಮೂಲ ಪತ್ತೆಯಾಗಿಲ್ಲ. 91931 ಮಾದರಿಗಳನ್ನು ಪರಿಶೀಲಿಸಲಾಯಿತು. 6653 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೋವಿಡ್ ಸೋಂಕಿನಿಂದ ಇಂದು 19 ಜನರು ಸಾವನ್ನಪ್ಪಿದ್ದಾರೆ.
ಹೊಸ ಸೋಂಕಿತರಲ್ಲಿ ಇಳಿಮುಖ:
ಒಂದು ವಾರದೊಳಗೆ ಪ್ರಕರಣಗಳ ಸಂಖ್ಯೆ ಶೇಕಡಾ ಐದ ರಷ್ಟು ಇಳಿದಿದೆ. ಇದೇ ವೇಳೆ ತಪಾಸಣೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಇಂದು ಪರೀಕ್ಷೆಗಳ ಸಂಖ್ಯೆ 90,000 ದಾಟಿದೆ. ಕಳೆದ 24 ಗಂಟೆಗಳಲ್ಲಿ 91931 ಮಾದರಿಗಳನ್ನು ಪರೀಕ್ಷಿಸಲಾಯಿತು.
ಜಿಲ್ಲಾವಾರು ವಿವರ:
ಎರ್ನಾಕುಳಂ 714, ಕೋಝಿಕೋಡ್ 706, ಮಲಪ್ಪುರಂ 605, ಪತ್ತನಂತಿಟ್ಟು 521, ತ್ರಿಶೂರ್ 495, ಕೊಟ್ಟಾಯಂ 458, ತಿರುವನಂತಪುರ 444, ಕೊಲ್ಲಂ 391, ಆಲಪ್ಪುಳ 310, ಕಣ್ಣೂರು 253, ಇಡುಕ್ಕಿ 232, ಪಾಲಕ್ಕಾಡ್ 219, ವಯನಾಡ್ 163, ಕಾಸರಗೋಡು 99 ಎಂಬಂತೆ ಪಾಸಿಟಿವ್ ಆಗಿದೆ.
ಕೋವಿಡ್ ರೂಪಾಂತರಿ ವೈರಸ್ ವಿವರ:
ಕಳೆದ 24 ಗಂಟೆಗಳಲ್ಲಿ ಯುಕೆ ಯಿಂದ ಆಗಮಿಸಿದ ಯಾರೊಬ್ಬರಲ್ಲೂ ಕೋವಿಡ್ ದೃಢಪಟ್ಟಿಲ್ಲ. ಆದರೆ ಯುಕೆ ಯಿಂದ ಆಗಮಿಸಿದ 78 ಜನರಿಗೆ ಈವರೆಗೆ ಸೋಂಕು ಖಚಿತವಾಗಿದೆ. ಈ ಪೈಕಿ 62 ಮಂದಿಗೆ ಋಣಾತ್ಮಕವಾಗಿದೆ. ಒಟ್ಟು 10 ಜನರಿಗೆ ರೂಪಾಂತರಿತ ವೈರಸ್ ಇರುವುದು ಪತ್ತೆಯಾಗಿದೆ.
ದಾಖಲೆ ಪರಿಶೀಲನೆ
ಕಳೆದ 24 ಗಂಟೆಗಳಲ್ಲಿ 91,931 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ.6.10 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 99,48,005 ಮಾದರಿಗಳನ್ನು ಈವರೆಗೆ ಪರೀಕ್ಷೆಗೆ ಕಳುಹಿಸಲಾಗಿದೆ.
ಕೋವಿಡ್ ಮರಣಗಳು:
ಇಂದು 19 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 3832 ಕ್ಕೆ ಏರಿಕೆಯಾಗಿದೆ.
ಸಂಪರ್ಕ ಸೋಂಕು:
ಸಂಪರ್ಕದ ಮೂಲಕ 5131 ಜನರಿಗೆ ಸೋಂಕು ತಗುಲಿತು. 350 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಳಂ 687, ಕೋಝಿಕೋಡ್ 688, ಮಲಪ್ಪುರಂ 577, ಪತ್ತನಂತಿಟ್ಟು 478, ತ್ರಿಶೂರ್ 485, ಕೊಟ್ಟಾಯಂ 421, ತಿರುವನಂತಪುರ 332, ಕೊಲ್ಲಂ 383, ಆಲಪ್ಪುಳ 301, ಕಣ್ಣೂರು 209, ಇಡುಕ್ಕಿ 218, ಪಾಲಕ್ಕಾಡ್ 108, ವಯನಾಡ್ 154, ಕಾಸರಗೋಡು 90 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
28 ಆರೋಗ್ಯ ಕಾರ್ಯಕರ್ತರಿಗೆ ಸೋಂಕು:
ಇಂದು ರಾಜ್ಯಾದ್ಯಂತ 28 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಇಡುಕ್ಕಿ 7, ಎರ್ನಾಕುಳಂ, ಕಣ್ಣೂರು ತಲಾ 4, ಪತ್ತನಂತಿಟ್ಟು, ಪಾಲಕ್ಕಾಡ್, ಕೋಝಿಕ್ಕೋಡ್, ವಯನಾಡ್ ತಲಾ 2, ತಿರುವನಂತಪುರ, ಕೊಲ್ಲಂ, ಆಲಪ್ಪುಳ, ತ್ರಿಶೂರ್ ಮತ್ತು ಮಲಪ್ಪುರಂ ತಲಾ 1 ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ.
ರೋಗ ಮುಕ್ತ:
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 6653 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 416, ಕೊಲ್ಲಂ 781, ಪತ್ತನಂತಿಟ್ಟು 467, ಆಲಪ್ಪುಳ 594, ಕೊಟ್ಟಾಯಂ 466, ಇಡಕ್ಕಿ 330, ಎರ್ನಾಕುಳಂ 802, ತ್ರಿಶೂರ್ 494, ಪಾಲಕ್ಕಾಡ್ 203, ಮಲಪ್ಪುರಂ 538, ಕೊಝಿಕೋಡ್ 809, ವಯನಾಡ್ 354, ಕಣ್ಣೂರು 354, ಕಾಸರಗೋಡು 45 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 67,795 ಮಂದಿ ಜನರಿಗೆ ಸೋಂಕು ಈವರೆಗೆ ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 8,84,542 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ನಿರೀಕ್ಷಣೆಯಲ್ಲಿರುವವರು:
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,15,653 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,04,693 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 10,960 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಸುಮಾರು 1540 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು 34 ಹೊಸ ಹಾಟ್‍ಸ್ಪಾಟ್‍ಗಳಿವೆ. 2 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 425 ಹಾಟ್‍ಸ್ಪಾಟ್‍ಗಳಿವೆ.