HEALTH TIPS

ರಾಜ್ಯದಲ್ಲಿ ಇಂದು 5942 ಮಂದಿಗೆ ಸೋಂಕು-ಕಾಸರಗೋಡು-62 ಮಂದಿಗೆ ಕೋವಿಡ್


             ತಿರುವನಂತಪುರ: ಕೇರಳದಲ್ಲಿ ಇಂದು  5942 ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. ಎರ್ನಾಕುಳಂ 898, ಕೋಝಿಕ್ಕೋಡ್ 696, ಮಲಪ್ಪುರಂ 652, ಕೊಲ್ಲಂ 525, ಕೊಟ್ಟಾಯಂ 512, ಪತ್ತನಂತಿಟ್ಟು 496, ತಿರುವನಂತಪುರ 480, ತ್ರಿಶೂರ್ 448, ಆಲಪ್ಪುಳ 410, ಪಾಲಕ್ಕಾಡ್ 235, ಕಣ್ಣೂರು 182, ವಯನಾಡ್ 179,  ಇಡುಕ್ಕಿ 167, ಕಾಸರಗೋಡು 62 ಎಂಬಂತೆ ಸೋಂಕು ದೃಢಪಡಿಸಲಾಗಿದೆ. 

         ಕಳೆದ 24 ಗಂಟೆಗಳಲ್ಲಿ ಯುಕೆ ಯಿಂದ ಆಗಮಿಸಿದ ಯಾರಿಗೂ ಸೋಂಕು ದೃಢಪಟ್ಟಿಲ್ಲ. ಇತ್ತೀಚೆಗೆ ಯುಕೆಯಿಂದ ಬಂದ 79 ಜನರಿಗೆ ಸೋಂಕು ಖಚಿತಪಡಿಸಲಾಗಿದ್ದು ಈ ಪೈಕಿ 62 ಮಂದಿಗೆ ಋಣಾತ್ಮಕವಾಗಿದೆ. ಒಟ್ಟು 10 ಜನರಿಗೆ ರೂಪಾಂತರಿ ವೈರಸ್ ಇರುವುದು ಪತ್ತೆಯಾಗಿದೆ.

          ಕಳೆದ 24 ಗಂಟೆಗಳಲ್ಲಿ 82,804 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ.7.18. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,00,30,809 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

            ಕಳೆದ 24 ಗಂಟೆಗಳಲ್ಲಿ 16 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ.  ಒಟ್ಟು ಸಾವಿನ ಸಂಖ್ಯೆ 3848 ಕ್ಕೆ ಏರಿಕೆಯಾಗಿದೆ. 

          ಇಂದು, ಸೋಂಕು ಪತ್ತೆಯಾದವರಲ್ಲಿ 98 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 5420 ಮಂದಿ ಜನರಿಗೆ ಸೋಂಕು ತಗುಲಿತು. 394 ಮಂದಿಗೆ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಳಂ 842, ಕೋಝಿಕ್ಕೋಡ್ 677, ಮಲಪ್ಪುರಂ 629, ಕೊಲ್ಲಂ 516, ಕೊಟ್ಟಾಯಂ 461, ಪತ್ತನಂತಿಟ್ಟು 446, ತಿರುವನಂತಪುರ 351, ತ್ರಿಶೂರ್ 435, ಆಲಪ್ಪುಳ 403, ಪಾಲಕ್ಕಾಡ್ 135, ಕಣ್ಣೂರು 139, ವಯನಾಡ್ 173,ಇಡುಕ್ಕಿ 154, ಕಾಸರಗೋಡುಬ 59 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ. 

          ಮೂವತ್ತು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ. ಕಣ್ಣೂರು 7, ಕೋಝಿಕೋಡ್ 5, ಕೊಲ್ಲಂ, ಎರ್ನಾಕುಳಂ 4, ತಿರುವನಂತಪುರ 3, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ 2 ಮತ್ತು ಇಡುಕ್ಕಿ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. 

          ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 6178 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 485, ಕೊಲ್ಲಂ 325, ಪತ್ತನಂತಿಟ್ಟು 400, ಆಲಪ್ಪುಳ 366, ಕೊಟ್ಟಾಯಂ 1050, ಇಡುಕಿ 258, ಎರ್ನಾಕುಳಂ 690, ತ್ರಿಶೂರ್ 451, ಪಾಲಕ್ಕಾಡ್ 252, ಮಲಪ್ಪುರಂ 571, ಕೋಝಿಕೋಡ್ 619, ವಯನಾಡ್ 340, ಕಣ್ಣೂರು 279, ಕಾಸರಗೋಡು 92 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 67,543 ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 8,90,720 ಮಂದಿ ಜನರನ್ನು ಕೋವಿಡ್ ನಿಂದ ಮುಕ್ತಗೊಳಿಸಲಾಗಿದೆ.

         ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,19,050 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,08,113 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 10,937 ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು ಮಂದಿ 1395 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು 13 ಹೊಸ ಹಾಟ್‍ಸ್ಪಾಟ್‍ಗಳಿವೆ. 4 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 434 ಹಾಟ್‍ಸ್ಪಾಟ್‍ಗಳಿವೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries