ಸೋಂಕು ಬಾಧಿತರು:
ಎರ್ನಾಕುಳಂ 811, ಕೊಲ್ಲಂ 689, ಕೋಝಿಕೋಡ್ 652, ಕೊಟ್ಟಾಯಂ 575, ಪತ್ತನಂತಿಟ್ಟು 571, ತ್ರಿಶೂರ್ 540, ತಿರುವನಂತಪುರ 455, ಮಲಪ್ಪುರಂ 421, ಆಲಪ್ಪುಳ 411, ಕಣ್ಣೂರು 213, ವಯನಾಡ್ 201, ಪಾಲಕ್ಕಡ್ 191, ಇಡುಕ್ಕಿ 179, ಕಾಸರಗೋಡು 71 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ ಯು .ಕೆ ಯಿಂದ ಬಂದ ಯಾರಲ್ಲೂ ಸೋಂಕು ದೃಢಿಕರಿಸಿಲ್ಲ. ಇತ್ತೀಚೆಗೆ ಯುಕೆಯಿಂದ ಬಂದ 81 ಜನರಿಗೆ ಸೋಂಕು ಖಚಿತಪಡಿಸಲಾಗಿದೆ. ಈ ಪೈಕಿ 69 ಮಂದಿಗೆ ನಕಾರಾತ್ಮಕವಾಗಿದೆ. ರೂಪಾಂತರಿತ ವೈರಸ್ ಒಟ್ಟು 10 ಜನರಲ್ಲಿ ಖಚಿತಗೊಂಡಿದೆ.
ಕಳೆದ 24 ಗಂಟೆಗಳಲ್ಲಿ 80,106 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ.7.47 ಆಗಿದೆ. ಇಲ್ಲಿಯವರೆಗೆ, ವಾಡಿಕೆಯ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎನ್ಎಟಿ, ಟ್ರುನಾಟ್, ಪಿಒಸಿಟಿಪಿಸಿಆರ್, ರಾಟ್, ಲ್ಯಾಂಪ್ ಮತ್ತು ಆಂಟಿಜೆನ್ ಪರೀಕ್ಷೆ ಸೇರಿದಂತೆ ಒಟ್ಟು 1,02,94,203 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 18 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 3920 ಕ್ಕೆ ಏರಿಕೆಯಾಗಿದೆ. ಆಲಪ್ಪುಳದಲ್ಲಿ ಎನ್‌ಐವಿ ಪರೀಕ್ಷೆಯ ನಂತರ ಸಾವುಗಳು ಸೋಂಕಿನಿಂದವೆಂದು ದೃಡಗೊಂಡಿದೆ.
ಇಂದು, ಸೋಂಕಿಗೊಳಗಾದವರಲ್ಲಿ 96 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 5457 ಜನರಿಗೆ ಸೋಂಕು ತಗುಲಿತು. 386 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಳಂ 748, ಕೊಲ್ಲಂ 677, ಕೋಝಿಕೋಡ್ 622, ಕೊಟ್ಟಾಯಂ 535, ಪತ್ತನಂತಿಟ್ಟು 514, ತ್ರಿಶೂರ್ 524, ತಿರುವನಂತಪುರ 320, ಮಲಪ್ಪುರಂ 395, ಆಲಪ್ಪುಳ 405, ಕಣ್ಣೂರು 188, ವಯನಾಡ್ 195, ಪಾಲಕ್ಕಾಡ್ 109, ಇಡುಕ್ಕಿ163, ಕಾಸರಗೋಡು 62 ಎಂಬಂತೆ ಸಂಪರ್ಕದಿಂದ ಕೋವಿಡ್ ಬಾಧಿಸಿದೆ.
ರೋಗ ಪತ್ತೆಯಾದ 5745 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 354, ಕೊಲ್ಲಂ 738, ಪತ್ತನಂತಿಟ್ಟು 417, ಆಲಪ್ಪುಳ 394, ಕೊಟ್ಟಾಯಂ 234, ಇಡಕ್ಕಿ 385, ಎರ್ನಾಕುಳಂ 766, ತ್ರಿಶೂರ್ 440, ಪಾಲಕ್ಕಾಡ್ 196, ಮಲಪ್ಪುರಂ 318, ಕೊಝಿಕೋಡ್ 829, ವಯನಾಡ್ 315, ಕಣ್ಣೂರು 277, ಕಾಸರಗೋಡು 82 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 64,346 ಜನರಿಗೆ ಈ ರೋಗ ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 9,14,847 ಜನರನ್ನು ಕೋವಿಡ್‌ನಿಂದ ಮುಕ್ತಗೊಳಿಸಲಾಗಿದೆ.