HEALTH TIPS

ಕೇರಳದ ಮೊದಲ ಎದೆ ಹಾಲು ಬ್ಯಾಂಕ್ ಫೆಬ್ರವರಿ 5 ರಂದು ಎರ್ನಾಕುಲಂ ಜನರಲ್ ಆಸ್ಪತ್ರೆಯಲ್ಲಿ ಆರಂಭ

                       

       ಕೊಚ್ಚಿ: ಎರ್ನಾಕುಳಂ ಜನರಲ್ ಆಸ್ಪತ್ರೆಯಲ್ಲಿ ಫೆಬ್ರವರಿ 5 ರಿಂದ ರಾಜ್ಯದ ಮೊದಲ ಎದೆ ಹಾಲು ಬ್ಯಾಂಕ್ ಕಾರ್ಯನಿರ್ವಹಿಸಲು ಪ್ರಾರಂಭಿಸಲಿದೆ. 'ನೆಕ್ಟಾರ್ ಆಫ್ ಲೈಫ್' ಹೆಸರಿನ ಯೋಜನೆಯ ಉದ್ಘಾಟನೆ ಫೆಬ್ರವರಿ 5 ರಂದು ಮಧ್ಯಾಹ್ನ 3 ಗಂಟೆಗೆ ಆಸ್ಪತ್ರೆಯಲ್ಲಿ ನಡೆಯಲಿದೆ. ವೀಡಿಯೊ ಕಾನ್ಫರೆನ್ಸ್ ಮೂಲಕ ಆರೋಗ್ಯ ಸಚಿವೆ ಕೆ.ಕೆ.ಶೈಲಜ ಉದ್ಘಾಟಿಸಿ ಚಾಲನೆ ನೀಡುವರು. 

          ರೋಟರಿ ಕ್ಲಬ್ ಆಫ್ ಕೊಚ್ಚಿನ್ ಗ್ಲೋಬಲ್ ಸಹಯೋಗದೊಂದಿಗೆ ಸ್ಥಾಪಿಸಲಾದ ಸ್ಥನ್ಯ ಮಿಲ್ಕ್ ಬ್ಯಾಂಕ್ ರೋಟರಿ ಡಿಸ್ಟ್ರಿಕ್ಟ್ 3201, ಮಾಜಿ ಗವರ್ನರ್ ಮಾಧವ್ ಚಂದ್ರನ್ ಅವರ ಕನಸಿನ ಕೂಸು. ತಾಯಂದಿರ ಮರಣ, ಸೋಂಕು ಅಥವಾ ಎದೆಹಾಲು ಕೊರತೆಯಿಂದಾಗಿ ಹಾಲುಣಿಸದ ನವಜಾತ ಶಿಶುಗಳಿಗೆ ಎದೆ ಹಾಲು ಖಾತರಿಪಡಿಸುವ ಉದ್ದೇಶದಿಂದ ಅತ್ಯಾಧುನಿಕ ಎದೆ ಹಾಲು ಬ್ಯಾಂಕ್ ಅನ್ನು ಸ್ಥಾಪಿಸಲಾಗಿದೆ.

          ಎದೆ ಹಾಲು ಬ್ಯಾಂಕಿನ ಕಲ್ಪನೆ 32 ವರ್ಷಗಳ ಹಿಂದೆ ಭಾರತಕ್ಕೆ ಬಂದಿತು. ಆದರೆ ಕೆಲವು ಕಾರಣಗಳಿಂದ ಇದುವರೆಗೆ ಕೇರಳದಲ್ಲಿ ಜಾರಿಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿಯೇ ರೋಟರಿ ಕ್ಲಬ್ ಎರ್ನಾಕುಳಂ ಮತ್ತು ಕೇರಳದ ತ್ರಿಶೂರ್ ಜುಬಿಲಿ ಮೆಡಿಕಲ್ ಮಿಷನ್ ಆಸ್ಪತ್ರೆಯಲ್ಲಿ ಎರಡು ಎದೆ ಹಾಲು ಬ್ಯಾಂಕುಗಳನ್ನು ಸ್ಥಾಪಿಸುವ ಯೋಜನೆ ಇರಿಸಲಾಯಿತೆಂದು ಮಾಧವ್ ಚಂದ್ರನ್ ಹೇಳಿದ್ದಾರೆ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಹಾಲು ಸಂಗ್ರಹಣೆ, ವಿತರಣೆಗೆ ಸಂಬಂಧಿಸಿದ ಎಲ್ಲಾ ಸುರಕ್ಷತಾ ಮಾನದಂಡಗಳು ಮತ್ತು ಕಾರ್ಯವಿಧಾನಗಳನ್ನು ಖಚಿತಪಡಿಸಲಾಗಿದೆ ಎಂದು ಅವರು ಹೇಳಿದರು. ಸಂಗ್ರಹಿಸಿದ ಹಾಲನ್ನು ಯಾವುದೇ ಹಾನಿಯಾಗದಂತೆ 6 ತಿಂಗಳವರೆಗೆ ಬ್ಯಾಂಕಿನಲ್ಲಿ ಸಂಗ್ರಹಿಸಬಹುದು.

          ಜನರಲ್ ಆಸ್ಪತ್ರೆಯ ನವಜಾತ ತೀವ್ರ ನಿಗಾ ಘಟಕಕ್ಕೆ ದಾಖಲಾದ ಶಿಶುಗಳಿಗೆ ಮಾತ್ರ ಸ್ತನ್ಯಪಾನವನ್ನು ಆರಂಭದಲ್ಲಿ ಉಚಿತವಾಗಿ ನೀಡಲಾಗುತ್ತದೆ. ನಂತರ ಹಾಲು ಸಂಗ್ರಹಣೆ ಮತ್ತು ವಿತರಣೆಗಾಗಿ ಆಸ್ಪತ್ರೆಗಳ ಜಾಲವನ್ನು ಸ್ಥಾಪಿಸುವ ಯೋಜನೆ ಇದೆ. 

        ಜನರಲ್ ಆಸ್ಪತ್ರೆಯಲ್ಲಿ ಪ್ರತಿವರ್ಷ ಸುಮಾರು 3600 ಶಿಶುಗಳು ಜನಿಸುತ್ತವೆ. ಈ ಪೈಕಿ 600 ರಿಂದ 1000 ಮಕ್ಕಳನ್ನು ತೀವ್ರ ನಿಗಾ ಘಟಕಕ್ಕೆ ವಿವಿಧ ಕಾರಣಗಳಿಗೆ ದಾಖಲಿಸಲಾಗುತ್ತಿದೆ ಎಂದು ಗ್ಲೋಬಲ್ ಕೊಚ್ಚಿನ್ ನ ಡಾ. ಪಾಲ್ ಹೇಳಿರುವರು. "ಸ್ತನ್ಯಪಾನ ಮಾಡುವ ತಾಯಂದಿರಿಗೆ ನವಜಾತ ಶಿಶುಗಳ ಜೀವ ಉಳಿಸುವ ಮಹತ್ತರ ಕಾರ್ಯದಲ್ಲಿ ಪಾಲ್ಗೊಳ್ಳಲು ಪೆÇ್ರೀತ್ಸಾಹಿಸಲಾಗುತ್ತದೆ" ಎಂದು ಅವರು ಹೇಳಿದರು ಪಾಲ್ ಹೇಳಿರುವರು. 

         ಪಾಶ್ಚರೀಕರಣ ಘಟಕ, ರೆಫ್ರಿಜರೇಟರ್‍ಗಳು, ಡೀಪ್ ಫ್ರೀಜರ್‍ಗಳು, ಆಸ್ಪತ್ರೆಯ ದರ್ಜೆಯ ಸ್ತನ ಪಂಪ್, ಆರ್‍ಒ ಸ್ಥಾವರ, ಕ್ರಿಮಿನಾಶಕ ಉಪಕರಣಗಳು ಮತ್ತು ಕಂಪ್ಯೂಟರ್‍ಗಳೊಂದಿಗೆ ಸ್ತನ ಹಾಲು ಬ್ಯಾಂಕ್ ಅನ್ನು 35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ರೋಟರಿ ಕ್ಲಬ್ ಆಫ್ ಕೊಚ್ಚಿನ್ ಗ್ಲೋಬಲ್ ಗೆ ಎದೆಹಾಲು ಬ್ಯಾಂಕ್ ಸ್ಥಾಪಿಸಲು ರಾಜ್ಯ ಆರೋಗ್ಯ ಇಲಾಖೆ ನಡುವೆ ಕಳೆದ ವರ್ಷ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದ್ದರೂ, ಕೋವಿಡ್ ವಿಸ್ತರಣೆಯಿಂದಾಗಿ ಯೋಜನೆ ವಿಳಂಬವಾಯಿತು.

          ಸ್ತನ್ಯಪಾನ ನೀಡುವ ತಾಯಂದಿರಿಗೆ ನೆಮ್ಮದಿ ನೀಡಲು ಎದೆ ಹಾಲು ಬ್ಯಾಂಕ್ ವಿನ್ಯಸಿಸಲಾಗಿದೆ  ಎಂದು ಯೋಜನಾ ಸಂಯೋಜಕ ಎ.ಬಿ. ಎಲಿಯಾಸ್ ಹೇಳಿದರು. ಐಎಂಎ ಮತ್ತು ಇಂಡಿಯನ್ ಅಸೋಸಿಯೇಷನ್ ಆಫ್ ಪೀಡಿಯಾಟ್ರಿಶಿಯನ್ಸ್ (ಐಎಪಿ) ಸ್ತನ ಹಾಲು ಬ್ಯಾಂಕ್ ನಡೆಸಲು ತರಬೇತಿ ಪಡೆದ ಶುಶ್ರೂಷಾ ಸಿಬ್ಬಂದಿಯನ್ನು ನೇಮಿಸಿಕೊಂಡಿದೆ.

         ಇದು ಕೇರಳಕ್ಕೆ ಒಂದು ನವೀನ ಕಲ್ಪನೆಯಾಗಿರುವುದರಿಂದ, ಅದರ ಅಗತ್ಯತೆ ಮತ್ತು ಸುರಕ್ಷತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಒಂದು ಏಕೀಕೃತ ಪ್ರಯತ್ನ ಇರಬೇಕು. ಇನ್ನರ್ ವ್ಹೀಲ್ ಕ್ಲಬ್‍ನ ಆಶಾ ಸುನಿಲ್ ಮಾತನಾಡಿ, ಇನ್ನರ್ ವ್ಹೀಲ್ ಕ್ಲಬ್‍ನ ಸದಸ್ಯರು ಎದೆ ಹಾಲು ದಾನದ ಮಹತ್ವವನ್ನು ತಿಳಿಸುವ ನೋಟಿಸ್‍ಗಳನ್ನು ವಿತರಿಸುವ ಮೂಲಕ ಮತ್ತು ನಕ್ಷತ್ರಗಳನ್ನು ಒಳಗೊಂಡ ಹೋಡಿರ್ಂಗ್ ಮತ್ತು ಪೆÇೀಸ್ಟರ್‍ಗಳನ್ನು ಬಳಸುವ ಮೂಲಕ ಜಾಗೃತಿ ಅಭಿಯಾನವನ್ನು ಮುನ್ನಡೆಸಲಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries