ಪೆರ್ಲ: ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಹಾಗೂ ಟ್ರಸ್ಟ್‍ಗೆ ಒಳಪಟ್ಟ ಮಂಗಳೂರು,ಬಂಟ್ವಾಳ,ಪುತ್ತೂರು,ಸುಳ್ಯ,ಮಂಜೇಶ್ವರ,ಕಾಸರಗೋಡು ತಾಲೂಕುಗಳ ಭಜನಾ ಮಂಡಳಿಗಳ ಸಹಕಾರರದೊಂದಿಗೆ ಶ್ರೀ ಪುರಂದರದಾಸ ಆರಾಧನೋತ್ಸವ ಮತ್ತು ಶ್ರೀ ಮದ್ಭಾಗವತ ಸಪ್ತಾಹ ಜ್ಞಾನಯಜ್ಞ ಫೆ. 05 ರಿಂದ 11 ರವರೆಗೆ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನ ದಲ್ಲಿ ನಡೆಯಲಿದೆ.
ಫೆ. 04 ರಂದು ಗುರುವಾರ ಸಂಜೆ 5.30ಕ್ಕೆ ಶ್ರೀಮದ್ ಭಾಗವತ ಮಹಾತ್ಮ್ಯೆ ಪಾರಾಯಣ ನಡೆಯಲಿದೆ. 05 ರಂದು ಬೆಳಗ್ಗೆ 6.30 ಕ್ಕೆ ಕಾಟುಕುಕ್ಕೆ ದೇವಳದ ಪ್ರಧಾನ ಅರ್ಚಕ ಮಧುಸೂದನ ಪುಣಿಚಿತ್ತಾಯ ದೀಪ ಪ್ರಜ್ವಲಿಸಿ ಚಾಲನೆ ನೀಡುವರು. 6.45 ರಿಂದ ಭಾಗವತರೂಪೀ ಶ್ರೀ ಕೃಷ್ಣಪೂಜೆ, 7.30 ಕ್ಕೆ ಶ್ರೀ ಮದ್ಭಾಗವತ ಪಾರಾಯಣ ಪ್ರಾರಂಭ, ಮಧ್ಯಾಹ್ನ 12.30 ಕ್ಕೆ ನ್ಯೆವೇದ್ಯ, ಮಂಗಳಾರತಿ 12.45 ಕ್ಕೆ ಪ್ರವಚನ ಹಾಗೂ ಸಭಾದೀಪ ಪ್ರಜ್ವಲನೆ ನಡೆಯಲಿದ್ದು ಧಾರ್ಮಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ ನಿರ್ವಹಿಸುವರು. 1 ರಿಂದ 2ರ ವರೆಗೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಿಳಾ ಭಜನಾ ಮಂಡಳಿ ಕಾಟುಕುಕ್ಕೆ ಇವರಿಂದ ಭಜನೆ, ಅಪರಾಹ್ನ 2 ರಿಂದ ಪ್ರವಚನ ಪ್ರಾರಂಭ, ಸಂಜೆ 4 ಕ್ಕೆ ಕೀರ್ತನೆಗಳು, ಮಂಗಳಾರತಿ ನಡೆಯಲಿದೆ. ಫೆ. 6 ರಂದು ಬೆಳಿಗ್ಗೆ 6.30 ಕ್ಕೆ ಭಾಗವತ ಪೂಜೆ, 7 ಕ್ಕೆ ಪಾರಾಯಣ ಪ್ರಾರಂಭ, 12.30 ಕ್ಕೆ ನೈವೇದ್ಯ, ಮಂಗಳಾರತಿ, 1 ರಿಂದ 2 ರ ವರೆಗೆ ಈಶ್ವರದಾಸ ಕೊಪ್ಪೆಸರ ಅವರಿಂದ ಹರಿಕಥೆ, 2 ಕ್ಕೆ ಪ್ರವಚನ ಆರಂಭ, ಸಂಜೆ 4 ರಿಂದ ಕೀರ್ತನೆಗಳು, ಮಂಗಳಾರತಿ, 07 ರಂದು ಬೆಳಿಗ್ಗೆ 6.30 ಕ್ಕೆ ಭಾಗವತ ಪೂಜೆ, 7 ಕ್ಕೆ ಪಾರಾಯಣ ಆರಂಭ, 12.30 ಕ್ಕೆ ನ್ಯೇವೇದ್ಯ ,ಮಂಗಳಾರತಿ, 1 ರಿಂದ 2 ರ ವರೆಗೆ ಶ್ರೀ ಸುಬ್ರಹ್ಮಣ್ಯೇಶ್ವರ ವನಿತಾ ಭಜನಾ ಮಂಡಳಿ ಕಾಟುಕುಕ್ಕೆ ತಂಡದವರಿಂದ ಹರಿಕಥೆ, 2 ರಿಂದ ಪ್ರವಚನ, 4 ಕ್ಕೆ ಕೀರ್ತನೆಗಳು, ಮಂಗಳಾರತಿ ನಡೆಯಲಿದೆ. 8 ರಂದು ಬೆಳಿಗ್ಗೆ 6.30 ಕ್ಕೆ ಭಾಗವತ ಪೂಜೆ, 7 ಕ್ಕೆ ಪಾರಾಯಣ ಪ್ರಾರಂಭ, 12.30 ಕ್ಕೆ ನೈವೇದ್ಯ, ಮಂಗಳಾರತಿ, 1 ರಿಂದ 2 ರವರೆಗೆ ಭಜನೆ, 2 ರಿಂದ ಪ್ರವಚನ, ಸಂಜೆ 4 ಕ್ಕೆ ಕೀರ್ತನೆಗಳು, ಮಂಗಳಾರತಿ ನಡೆಯಲಿದೆ. ಫೆ.11 ರಂದು ಶ್ರೀ ಪುರಂದರದಾಸ ಆರಾಧನೋತ್ಸವದ ಅಂಗವಾಗಿ ಬೆಳಿಗ್ಗೆ 8.30 ಕ್ಕೆ ದಾಸ ಸಂಕೀರ್ತನೆ, 10.45 ಕ್ಕೆ ಸಮೂಹ ಗಾಯನ, 11 ಕ್ಕೆ ಸಭಾ ಕಾರ್ಯಕ್ರಮದಲ್ಲಿ ಶ್ರೀಮದ್‍ಜಗದ್ಗುರು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ಆಶೀರ್ವಚನ ನೀಡುವರು.