ಕಾಸರಗೋಡು: ಕಾಸರಗೋಡು ಜಿಲ್ಲೆಯ ಎಲ್ಲ ವಲಯಗಳಲ್ಲಿ ರಾಜ್ಯ ಸರಕಾರ ಕಳೆದ 5 ವರ್ಷಗಳ ಕಾಲಾವಧಿಯಲ್ಲಿ ನಡೆಸಿರುವ ಅಭಿವೃದ್ಧಿ ಮತ್ತು ಸಾಧನೆಗಳನ್ನು ವೀಡಿಯೋ ಚಿತ್ರಗಳ ರೂಪದಲ್ಲಿ ಸಾರ್ವಜನಿಕರ ಮುಂದೆ ಪ್ರದರ್ಶಿಸುವಲ್ಲಿ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾಸರಗೋಡು ಜಿಲ್ಲಾ ಕಚೇರಿ ಯಶಸ್ವಿಯಾಗಿದೆ.
ಹಿನ್ನೆಲೆ ಸೌಲಭ್ಯ, ಆರೋಗ್ಯ, ಶಿಕ್ಷಣ, ಕೃಷಿ, ಸಮಾಜ ಕಲ್ಯಾಣ ವಲಯಗಳು, ಎಂಡೋಸಲ್ಫಾನ್ ಸಂತ್ರಸ್ತರ ಪುನಶ್ಚೇತನ, ಭಾಷಾ ಅಲ್ಪಸಂಖ್ಯಾತರ ಕಲ್ಯಾಣ, ಮಹಿಳಾ ಪ್ರಬಲೀಕರಣ..ಹೀಗೆ ಎಲ್ಲ ವಲಯಗಳಲ್ಲೂ ರಾಜ್ಯ ಸರಕಾರ ನಡೆಸಿರುವ ಅಭಿವೃದ್ಧಿಯ ಯಶೋಗಾಥೆಯ ದೃಶ್ಯಾವಳಿಗಳನ್ನು ನೋಟಕರ ಮುಂದೆ ಇಲಾಖೆ ಇಡುತ್ತಿದೆ.
ಪ್ರತಿ ವ್ಯಕ್ತಿಯ ದೈನಂದಿನ ಆಗುಹೋಗುಗಳ ಅಭಿವೃದ್ಧಿಗಾಗಿ ಯೋಜನೆಗಳನ್ನು ಈ ವೀಡಿಯೋ ಚಿತ್ರಪ್ರದರ್ಶನ ಕಾಸರಗೋಡು ಜನತೆಗೆ ನೂತನ ಅಣುಬವವನ್ನು ನೀಡುತ್ತಿದೆ. ಈ ವರೆಗೆ ಸರಕಾರ ನಡೆಸಿರುವ ಅಭಿವೃದ್ಧಿ ಚಟುವಟಿಕೆಗಳನ್ನು ಜನ ನೆನಪಿಡುವ ರೀತಿಯ ಚಿತ್ರೀಕರಣ ಮತ್ತು ಪ್ರಸ್ತುತಿ ಇಲ್ಲಿದೆ. ಜಿಲ್ಲೆಯ 150 ಕೇಂದ್ರಗಳಲ್ಲಿ ಈ ಚಿತ್ರಪ್ರದರ್ಶನ ನಡೆಸಲಾಗುತ್ತಿದೆ.