ಕಾಸರಗೋಡು: ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಯಜ್ಞ ಮೂಲಕ ಕಾಸರಗೋಡು ಜಿಲ್ಲೆಯ 8 ಶಿಕ್ಷಣಾಲಯಗಳೂ ಸಹ ಅಂತಾರಾಷ್ಟ್ರೀಯ ಗುಣಮಟ್ಟಕ್ಕೇರಲಿವೆ. ಕಿಫ್ ಬಿ ನಿಧಿ ಬಳಸಿ 7 ಶಾಲೆಗಳ ಕಟ್ಟಡಗಳು, ಯೋಜನೆ ನಿಧಿ ಬಳಸಿ ನಿರ್ಮಿಸಿರುವ ಶಾಲೆಯೊಂದರ ಕಟ್ಟಡವನ್ನು ಫೆ.6ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಲೋಕಾರ್ಪಣೆ ನಡೆಸುವರು.
ರಾಜ್ಯದ 111 ಶಿಕ್ಷಣಾಲಯಗಳ ಕಟ್ಟಡ ಉದ್ಘಾಟನೆ ನಡೆಸುವುದರ ಜೊತೆಗೆ ಈ ಕಾರ್ಯಕ್ರಮವೂ ಜರುಗಲಿದೆ. ಸಾರ್ವಜನಿಕ ಶಿಕ್ಷಣ ಸಚಿವ ಸಿ.ರವೀಂದ್ರನಾಥ್ ಅಧ್ಯಕ್ಷತೆ ವಹಿಸುವರು. ಹಣಕಸು ಸಚಿವ ಡಾ.ಥಾಮಸ್ ಐಸಕ್ ಪ್ರಧಾನ ಭಾಷಣ ಮಾಡುವರು. ಕಂದಾಯ ಸಚಿವ ಇ.ಚಂದ್ರಶೇಖರನ್, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿರುವರು. ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎಂ.ರಾಜಗೋಪಾಲನ್, ಕೆ.ಕುಂuಟಿಜeಜಿiಟಿeಜ ರಾಮನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಮತ್ತಿತರ ಜನಪ್ರತಿನಿಧಿಗಳು ಉಪಸ್ಥಿತರಿರುವರು. ಆನ್ ಲೈನ್ ರೂಪದಲ್ಲಿ ಜರುಗುವ ಉದ್ಘಾಟನೆ ಸಮಾರಂಭದ ನಂತರ ಪ್ರತಿ ಶಾಲೆಗಳಲ್ಲೂ ಪ್ರತ್ಯೇಕ ಸಭಾ ಕಾರ್ಯಕ್ರಮಗಳೂ ನಡೆಯಲಿವೆ.
ಮಂಜೇಶ್ವರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮೊಗ್ರಾಲ್ ಸರಕಾರಿ ಪೊಕೇಶನಲ್ ಹೈಯರ್ ಸೆಕೆಂಡರಿ ಸಾಲೆ, ಕಾಸರಗೋಡು ವಿಧಾನಸಭೆ ಕ್ಷೇತ್ರದ ತಳಂಗರೆ ಸರಕಾರಿ ಎಂ. ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ, , ಉದುಮಾ ವಿಧಾನಸಭೆ ಕ್ಷೇತ್ರದ ಪೆರಿಯ ಸರಕಾರಿ ಹೈಯರ್ ಸೆಕೆಮಡರಿ ಶಾಲೆ ಸಹಿತ 8 ಶಿಕ್ಷಣಾಲಯಗಳ ಕಟ್ಟಡಗಳು ಈ ವೇಳೆ ಉದ್ಘಾಟನೆಗೊಳ್ಳಲಿವೆ.