ಕೊಚ್ಚಿ: ಕೇರಳ ಸರ್ಕಾರದ ಅಧೀನದಲ್ಲಿರುವ ಸಾರ್ವಜನಿಕ ವಲಯದ ಕೇರಳ ಎಲೆಕ್ಟ್ರಿಕಲ್ ಮತ್ತು ಅಲೈಡ್ ಎಂಜಿನಿಯರಿಂಗ್ ಕಂಪನಿಯ (ಕೆಇಎಲ್) ವಿದ್ಯುತ್ ಪರಿವರ್ತಕ ಉತ್ಪಾದನಾ ಘಟಕವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಫೆಬ್ರವರಿ 9 ರಂದು ಬೆಳಿಗ್ಗೆ 11.30 ಕ್ಕೆ ಮಾಮಲಾದಲ್ಲಿ ಉದ್ಘಾಟಿಸಲಿದ್ದಾರೆ.
ಕೈಗಾರಿಕಾ ಸಚಿವ ಇ.ಪಿ. ಜಯರಾಜನ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿದ್ಯುತ್ ಸಚಿವ ಎಂ.ಎಂ.ಮಣಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹೊಸ ಸ್ಥಾವರ ಮುಂದೆ ಸ್ಥಾಪಿಸಲಾದ ಎಲೆಕ್ಟ್ರಿಕ್ ವೆಹಿಕಲ್ ಚಾಜಿರ್ಂಗ್ ಸ್ಟೇಷನ್ ಉದ್ಘಾಟನೆಯೂ ಸಮಾರಂಭದಲ್ಲಿ ನಡೆಯಲಿದೆ.
ರಾಜ್ಯ ಸರ್ಕಾರವು ಮಂಜೂರು ಮಾಡಿದ 12.5 ಕೋಟಿ ವೆಚ್ಚದಲ್ಲಿ ವಿದ್ಯುತ್ ಪರಿವರ್ತಕ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದೆ. ಕೆಲ್ ಇತಿಹಾಸದಲ್ಲಿ ಈ ಯೋಜನೆ ಒಂದು ಪ್ರಮುಖ ಮೈಲಿಗಲ್ಲು ಮತ್ತು 10 ಎಂ.ವಿ.ಎ. ವರೆಗಿನ ಸಾಮಥ್ರ್ಯದೊಂದಿಗೆ ಟ್ರಾನ್ಸ್‍ಫಾರ್ಮರ್‍ಗಳನ್ನು ಉತ್ಪಾದಿಸಬಲ್ಲದು ಎಂದು ಕೆಲ್ ಎಂ.ಡಿ ಕರ್ನಲ್ ಶಾಜಿ ಎಂ. ವರ್ಗೀಸ್ ಹೇಳಿರುವರು.
ಸ್ಥಾವರದಲ್ಲಿ ವಿದ್ಯುತ್ ಪರಿವರ್ತಕಗಳ ಪರೀಕ್ಷಾ ನಿರ್ಮಾಣ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಮಾಹಿತಿ ಅವರು ನೀಡಿದರು. ಸ್ಥಾವರವು ವಾರ್ಷಿಕವಾಗಿ 1500 ಎಂ.ವಿ.ಎ. ಉತ್ಪಾದನಾ ಸಾಮಥ್ರ್ಯವನ್ನು ಹೊಂದಿದೆ. ಮಾಮಲಾದಲ್ಲಿನ ಸ್ಥಾವರದಿಂದ 47 ಕೋಟಿ ರೂ. ವಹಿವಾಟು ಮತ್ತು 2.53 ಕೋಟಿ ರೂ.ಲಾಭ ನಿರೀಕ್ಷಿಸಲಾಗಿದೆ.
ಎಲೆಕ್ಟ್ರಿಕ್ ವಾಹನಗಳಿಗೆ ಚಾಜಿರ್ಂಗ್ ಘಟಕಗಳ ನಿರ್ಮಾಣದ ಪ್ರಾರಂಭದ ಭಾಗವಾಗಿ ಕಂಪನಿಯು ಪವರ್ ಟ್ರಾನ್ಸ್‍ಫಾರ್ಮರ್ ಪ್ಲಾಂಟ್ ಬಳಿ ಕೊಚ್ಚಿ-ಧನುಷ್ಕೋಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಚಾಜಿರ್ಂಗ್ ಸ್ಟೇಷನ್ ಸ್ಥಾಪಿಸಿದೆ. ಎರ್ನಾಕುಳಂನಿಂದ ಮುವಾಟ್ಟುಪುಳ, ಕೊದಮಂಗಲಂ, ಇಡುಕಿ ಮತ್ತು ಮುನ್ನಾರ್‍ಗೆ ಪ್ರಯಾಣಿಸುವ ವಾಹನಗಳಿಗೆ ಚಾಜಿರ್ಂಗ್ ನಿಲ್ದಾಣವನ್ನು ಬಳಸಲಾಗುತ್ತದೆ ಎಂದು ವರ್ಗೀಸ್ ಹೇಳಿರುವರು.
ಜನರಲ್ಲಿ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಜಾಗೃತಿ ಹೆಚ್ಚುತ್ತಿರುವುದರಿಂದ ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳು ರಸ್ತೆಗಳಿಗಿಳಿಯಲಿದೆ ಎಂದು ಆಶಿಸಲಾಗಿದೆ ಎಂದು ಅವರು ಹೇಳಿದರು.
ವಿದ್ಯುತ್ ಪರಿವರ್ತಕ ಘಟಕದ ಪಕ್ಕದಲ್ಲಿರುವ ಟ್ರಾನ್ಸ್‍ಫಾರ್ಮರ್‍ಗಳು, ಇತರ ವಿದ್ಯುತ್ ಉಪಕರಣಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಪರೀಕ್ಷೆ ಮತ್ತು ಪ್ರಮಾಣೀಕರಣಕ್ಕಾಗಿ ಎನ್.ಎ.ಬಿ.ಎಲ್. ಅನುಮೋದಿತ ಲ್ಯಾಬ್ ಅನ್ನು ಸ್ಥಾಪಿಸಲು ಕಂಪನಿಯು ಯೋಜಿಸಿದೆ. ಯೋಜನೆಯ ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಲ್ಯಾಬ್‍ನ ಸಾಕ್ಷಾತ್ಕಾರದೊಂದಿಗೆ, ರಾಜ್ಯದಲ್ಲಿ ಟ್ರಾನ್ಸ್‍ಫಾರ್ಮರ್ ಮತ್ತು ಇತರ ವಿದ್ಯುತ್ ಉಪಕರಣಗಳ ತಯಾರಕರು ಇತರ ರಾಜ್ಯಗಳಲ್ಲಿನ ಲ್ಯಾಬ್‍ಗಳನ್ನು ಅವಲಂಬಿಸಬೇಕಾಗಿಲ್ಲ.