ಕಾಸರಗೋಡು: ಜಿಲ್ಲೆಯಲ್ಲಿ ಭಾನುವಾರ ನಡೆದ ಪಲ್ಸ್ ಪೋಲಿಯೋ ಅಭಿಯಾನದಲ್ಲಿ 97494ಮಂದಿ ಮಕ್ಕಳಿಗೆ ಪೋಲಿಯೋ ಔಷಧ ನೀಡಲಾಗಿದೆ. ಪೋಲಿಯೋ ಬಿಂದು ಸ್ವೀಕರಿಸಿದವರಲ್ಲಿ 394ಮಂದಿ ಅತಿಥಿ ರಾಜ್ಯದ ನಿವಾಸಿಗಳ ಮಕ್ಕಳಾಗಿದ್ದಾರೆ.
ಅಂಗನವಾಡಿಗಳು, ಶಾಲೆಗಳು, ಆರೋಗ್ಯ ಕೇಂದ್ರಗಳು,ಬಸ್ ಸ್ಟಾಂಡ್ ಗಳು, ರೈಲು ನಿಲ್ದಾಣಗಳು ಒಳಗೊಂಡಂತೆ 1250ಕೇಂದ್ರಗಳಲ್ಲಿ ಪೋಲಿಯೋ ಔಷಧ ವಿತರಣೆ ನಡೆಸಲಾಗಿದೆ. ಕೋವಿಡ್ ಮುಗ್ಗಟ್ಟಿನ ನಡುವೆಯೂ ಜಿಲ್ಲೆಯಲ್ಲಿ ಶೇ. 83ರಷ್ಟು ಸಾಧನೆ ನಡೆಸಲಾಗಿದ್ದು, ಆರೋಗ್ಯ, ಸ್ಥಳೀಯಾಡಳಿತ ಸಹಿತ ವಿವಿಧ ಇಲಾಖೆಗಳು ಹಾಗೂ ಅಧಿಕಾರಿಗಳು, ಸಾರ್ವಜನಿಕರ ಸಹಕಾರದಿಂದ ಸಾಧ್ಯವಾಗಿದೆ. ಪೋಲಿಯೋ ಲಸಿಕೆ ನೀಡಲು ಬಾಕಿಯಿರುವ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಪೋಲಿಯೋ ಹನಿ ವಿತರಿಸಲಾಗುವುದು. ಈ ಬಗ್ಗೆ ಮಾಹಿತಿಗಾಗಿ ಸನಿಹದ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸುವಂತೆ ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ಡಾ. ಎ.ವಿ ರಾಮದಾಸ್ ತಿಳಿಸಿದ್ದಾರೆ.