ಕೊಚ್ಚಿ: ಡಾಲರ್ ವಂಚನೆ ಪ್ರಕರಣದಲ್ಲಿ ಮುಖ್ಯಮಂತ್ರಿಯ ಮಾಜಿ ಕಾರ್ಯದರ್ಶಿ ಎಂ.ಶಿವಶಂಕರ್ ಗೆ ಇಂದು ಜಾಮೀನು ನೀಡಲಾಗಿದೆ. ಜಾಮೀನಿನ ಪತ್ರಗಳನ್ನು ಕಾಕನಾಡ್ ಜಿಲ್ಲಾ ಜೈಲಿನಲ್ಲಿ ನೀಡಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು.
98 ದಿನಗಳ ಜೈಲುವಾಸದ ನಂತರ ಬಿಡುಗಡೆಯಾದ ಶಿವಶಂಕರ್ ಮಾಧ್ಯಮಗಳ ಯಾವುದೇ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲಿಲ್ಲ.
ಅವರು ಜೈಲಿನಿಂದ ತಿರುವನಂತಪುರಕ್ಕೆ ತೆರಳಿದ್ದು, ಸಂಬಂಧಿಕರು ಜೈಲಿನ ಮುಂದೆ ಬೆಳಿಗ್ಗಿನಿಂದಲೇ ಕಾಯುತ್ತಿದ್ದರು.
ಇಂದು ಬೆಳಿಗ್ಗೆ ನ್ಯಾಯಾಲಯವು ಕಠಿಣ ನಿರ್ದೇಶನಗಳೊಂದಿಗೆ ಜಾಮೀನು ನೀಡಿತು. ಶಿವಶಂಕರ್ ಅವರ ಪಾಸ್ ಪೋರ್ಟ್ ನ್ನು ಮುಟ್ಟುಗೋಲು ಹಾಕಲಾಗುವುದು.ಅದಕ್ಕಾಗಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು, ಮತ್ತು ಪ್ರತಿ ಸೋಮವಾರ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ. ಅಲ್ಲದೆ ಎರಡು ಲಕ್ಷ ರೂ.ಗಳ ಎರಡು ಜಾಮೀನುಗಳೊಂದಿಗೆ ನ್ಯಾಯಾಲಯವು ಷರತ್ತುಗಳ ಮೇಲೆ ಜಾಮೀನು ನೀಡಿತು.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಶಿವಶಂಕರ್ ಅವರನ್ನು ಅಕ್ಟೋಬರ್ 28 ರಂದು ಬಂಧಿಸಲಾಗಿತ್ತು. ನಂತರ ಮನಿ ಲಾಂಡರಿಂಗ್ ಮತ್ತು ವಿದೇಶದಲ್ಲಿ ಡಾಲರ್ ಕಳ್ಳಸಾಗಣೆ ಪ್ರಕರಣದಲ್ಲೂ ಆರೋಪ ಕೇಳಿಬಂತು. ಚಿನ್ನ ಕಳ್ಳಸಾಗಣೆ ಪ್ರಕರಣ ಮತ್ತು ಹಣ ವರ್ಗಾವಣೆ ಪ್ರಕರಣದಲ್ಲೂ ಮೇಲೆ ಈ ಹಿಂದೆಯೇ ಜಾಮೀನು ನೀಡಲಾಗಿತ್ತು. ಇದೀಗ ಡಾಲರ್ ಕಳ್ಳಸಾಗಣಿಕೆ ಪ್ರಕರಣದಲ್ಲೂ ಇಂದು ಜಾಮೀನು ಲಭಿಸಿದ್ದರಿಂದ ಬಿಡುಗಡೆಮಾಡಲಾಗಿದೆ.