ಕೊಚ್ಚಿ: ಇಂದು ಮಂಡಿಸಲ್ಪಡುವ ಕೇಂದ್ರ ಬಜೆಟ್ ನಲ್ಲಿ ರೈಲ್ವೇ ಬಜೆಟ್ ಸಂಬಂಧಿಯಾಗಿ ಕೇರಳಕ್ಕೆ ಹೆಚ್ಚು ನಿರೀಕ್ಷೆಗಳಿವೆ. ದಶಕಗಳ ಬೇಡಿಕೆಯಾದ "ಶಬರಿ ಪಥ"(ಶಬರಿಮಲೆಗೆ ರೈಲು ಸಂಚಾರ ಯೋಜನೆ) ಯೋಜನೆ ಈಬಾರಿಯಾದರೂ ಸಾಫಲ್ಯಗೊಳ್ಳಲಿದೆಯೇ ಎಂಬ ನಿರೀಕ್ಷೆ ಕೇರಳದ್ದಾಗಿದೆ. ಇಂದು ಮಂಡಿಸಲ್ಪಡುವ ಕೇಂದ್ರ ಬಜೆಟ್ ನಿಂದ ರಾಜ್ಯ ಸರ್ಕಾರ ಕಿಪ್ಬಿ ಮೂಲಕ(ಕೇರಳ ಇನ್ಪ್ರಾಸ್ಟ್ರಕ್ಷರ್ ಇನ್ವೆಸ್ಟ್ ಮೆಂಟ್ ಫಂಡ್ ಬೋರ್ಡ್ ) ಮೂಲಕ ಶೇ.50 ರಷ್ಟು ನಿಧಿಯನ್ನು ಕೇಂದ್ರ ರೈಲ್ವೇ ಯೋಜನೆಯೊಂದಿಗೆ ಸಮೀಕರಿಸಿ ಶಬರಿ ಪಥವನ್ನು ಜಾರಿಗೊಳಿಸಲು ಉದ್ದೇಶಿಸಿದೆ.
2020 ರಲ್ಲಿ ಶಬರಿಮಲೆ ರಸ್ತೆ ಯೋಜನೆಗಾಗಿ ಬಜೆಟ್‍ನಲ್ಲಿ ರೂ 1000/ - ಟೋಕನ್ ಮಾತ್ರ ಅನುಮತಿಸಲಾಗಿದೆ. ಯೋಜನೆಯ ಒಟ್ಟು ವೆಚ್ಚ `2815.62 ಕೋಟಿ.ರೂ. ಕ್ಯಾಬಿನೆಟ್ ನಿರ್ಣಯದಂತೆ ರಾಜ್ಯಕ್ಕೆ ಅರ್ಧದಷ್ಟು ವೆಚ್ಚವನ್ನು ಭರಿಸಲು ರೈಲ್ವೆಗೆ ಕೇಳಲಾಗಿದೆ.
ಯೋಜನೆಯಡಿ ಅಂಗಮಾಲಿ-ಅಳುತ ರಸ್ತೆಯ 116 ಕಿ.ಮೀ ನಿರ್ಮಾಣ ಮತ್ತು ನಿರ್ವಹಣೆ ರೈಲ್ವೆಯ ಜವಾಬ್ದಾರಿಯಾಗಿದೆ. ನಿರ್ಮಾಣವು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಆದಾಯವನ್ನು ರಾಜ್ಯ ಮತ್ತು ರೈಲ್ವೆ ನಡುವೆ ಸಮಾನವಾಗಿ ಹಂಚಿಕೊಳ್ಳಲಾಗುವುದು.
ಅಂಗಮಾಲಿಯಿಂದ ಕಾಲಡಿ ವರೆಗೆ ಒಂಬತ್ತು ಕಿಲೋಮೀಟರ್ ರಸ್ತೆ 2010 ರಲ್ಲಿ ನಿರ್ಮಾಣ ಪೂರ್ಣಗೊಂಡಿದೆ. ಚೆಲಮಟ್ಟಂ, ಪೆರುಂಬವೂರ್, ಕೂವಪಟ್ಟಿ, ವೆಂಗೂರ್ ವೆಸ್ಟ್, ರಾಯಲ್ ಮಂಗಲಂ, ಶಾಮನೂರು ಮತ್ತು ಮುವಾಟ್ಟುಪುಳ ಗ್ರಾಮಗಳಲ್ಲಿ ಇನ್ನೂ ಸ್ವಾಧೀನಪಡಿಸಿಕೊಳ್ಳಬೇಕಾದ ಭೂಮಿ ಬಾಕಿಯಿದೆ. ಕಾರ್ಯವಿಧಾನಗಳು ಪೂರ್ಣಗೊಂಡಿವೆ. ರೈಲ್ವೇ ಹಳಿ ಹಾದುಹೋಗುವ ನಿವೇಶನಗಳ ಮಾಲೀಕರು ಭೂಮಿಯನ್ನು ನೀಡಲು ಮುಂದೆ ಬಂದಿದ್ದರೂ ಬದಲಿ ಪರಿಹಾರ ಮೊತ್ತ ನೀಡಲು ರೈಲ್ವೇ ಇಲಾಖೆ ನಿರುತ್ಸಾಹ ಪ್ರಕಟಿಸಿದ್ದರಿಂದ ಈ ಯೋಜನೆ ಹಲವು ವರ್ಷಗಳಿಂದಲೂ ನೆನೆಗುದಿಗೆ ಬಿದ್ದದೆ.