ತಿರುವನಂತಪುರ: ಕೇರಳದ ಪ್ರಸಿದ್ದ ಉತ್ಸವಗಳಲ್ಲಿ ಒಂದಾದ ಅಟ್ಟುಕ್ಕಾಲ್ ಪೆÇಂಗಾಲ ಉತ್ಸವ ಈಬಾರಿ ಸಾಂಕೇತಿಕವಾಗಿ ಮಾತ್ರ ನಡೆಯಲಿದೆ. ದೇವಾಲಯದ ಬಳಿ ಪಂಡಾರ ಒಲೆಗಳಲ್ಲಿ ಒಂದೇ ಒಂದು ಪೆÇಂಗಾಲಾ ಸಾಂಕೇತಿಕವಾಗಿ ಇರಿಸಲಾಗುವುದು. ಭಕ್ತರು ತಮ್ಮ ಮನೆಗಳಲ್ಲಿ ಪೆÇಂಗಾಲ ಇರಿಸಿ ಸಂಭ್ರಮಿಸಲು ದೇವಾಲಯ ಟ್ರಸ್ಟ್ ಸರ್ಕಾರದ ನಿರ್ದೇಶಾನುಸಾರ ಹೊಸ ತೀರ್ಮಾನ ಕೈಗೊಂಡಿದೆ.
ಅಟ್ಟುಕ್ಕಾಲ್ ದೇವಾಲಯದ ಟ್ರಸ್ಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆನ್ ಲೈನ್ ನೋಂದಣಿ ಮೂಲಕ ಭಕ್ತರು ದೇವಾಲಯಕ್ಕೆ ಭೇಟಿ ನೀಡಲು ಈ ಹಿಂದೆ ನಿರ್ಧರಿಸಲಾಗಿತ್ತು ಆದರೆ ನಂತರ ನಿರ್ಧಾರವನ್ನು ಬದಲಾಯಿಸಲಾಯಿತು.