HEALTH TIPS

ಜನಪರವಾಗಿರುವರು ಕಾಸರಗೋಡು ಜಿಲ್ಲೆಯ ಪೋಲೀಸರು

            ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಪೋಲೀಸ್ ದಳದ ಮುಖಚರ್ಯೆಯೇ ಬದಲಾಗಿದ್ದು, ಪೂರ್ಣರೂಪದಲ್ಲಿ ಜನಪರ ಧೋರಣೆಯೊಂದಿಗೆ ಚಟುವಟಿಕೆ ಮತ್ತು ಯೋಜನೆಗಳ ಸಹಿತ ಆರಕ್ಷಕರು ರಂಗದಲ್ಲಿದ್ದಾರೆ.  

      ಕೋವಿಡ್ ಸೋಂಕಿನ ಆರಂಭದ ಹಂತದಲ್ಲಿ ದೇಶವಿಡೀ ಲಾಕ್ ಡೌನ್ ಆಗಿದ್ದ ವೇಳೆ ಅತ್ಯಂತ ಜಾಗರೂಕತೆಯೊಂದಿಗೆ, ಜನತೆಯೊಂದಿಗೆ ಮಾದರಿ ರೂಪದಲ್ಲಿ ಕಾಸರಗೋಡು ಜಿಲ್ಲೆಯ ಪೆÇಲೀಸರು ಚಟುವಟಿಕೆ ನಡೆಸಿರುವುದು ಈ ಮಾತಿಗೆ ನಿದರ್ಶನವಾಗಿದೆ. ಮನೆಗಳಿಗೇ ಸೀಮಿತವಾಗಿದ್ದ ಮಂದಿಗೆ ಅನಿವಾರ್ಯ ಸಾಮಾಗ್ರಿಗಳನ್ನು, ಔಷಧಗಳನ್ನು ಒದಗಿಸುವ ನಿಟ್ಟಿನಲ್ಲಿ "ಅಂರತಂ" ಟೆಲಿ ಪ್ಲಾಟ್ ಫಾರಂ ಗೆ ಚಾಲನೆ ನೀಡಿ ಕಾಸರಗೋಡಿನ ಪೆÇಲೀಸರು ಇತರ ಕಡೆಗಳಿಗೆ ಮಾದರಿಯಾಗಿದ್ದರು. ಕೋವಿಡ್ ರೋಗಿಗಳ ಬಗ್ಗೆ ನಿಗಾ ಇರಿಸುವ, ನಿಗಾದಲ್ಲಿರುವ ಬಗ್ಗೆ ಖಚಿತ ಮೂಡಿಸುವ ನಿಟ್ಟಿನಲ್ಲಿ ಬೈಕ್ ಗಸ್ತು ಸಹಿತ ಕ್ರಮಗಳನ್ನು ಇಲ್ಲಿನ ಪೆÇಲೀಸರು ಅನುಷ್ಠಾನಗೊಳಿಸಿದ್ದರು. ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ

        ಐ.ಜಿ.ವಿಜಯ್ ಸಾಕರೆ ಅವರ ನೇತೃತ್ವದಲ್ಲಿ ಜಾರಿಗೊಳಿಸಿದ್ದ ಟ್ರಪಲ್ ಲಾಕ್ ಡೌನ್ , ಡ್ರೋನ್ ನಿಗಾ ಸಹಿತ ಕ್ರಮಗಳು ನಂತರದ ದಿನಗಳಲ್ಲಿ ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಣೆಗೊಂಡಿತ್ತು. 

          ದಕ್ಷತೆ ಖಚಿತತೆಗೆ ಲೀಗಲ್ ಸೆಲ್ :

   ಕೇಸುಗಳ ತನಿಖೆಯಲ್ಲಿ ದಕ್ಷತೆ ಖಚಿತತೆ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಪೆÇಲೀಸ್ ಕೇಂದ್ರದಲ್ಲಿ ಜಿಲ್ಲಾ ಪೆÇಲೀಸ್ ಲೀಗಲ್ ಸೆಲ್ ಚಟುವಟಿಕೆ ನಡೆಸುತ್ತಿದೆ. ಎಲ್ಲ ಕೇಸುಗಳಲ್ಲೂ ನ್ಯಾಯಾಲಯದಲ್ಲಿ ಚಾರ್ಜು ನೀಡಿಕೆಗೆ ಮುನ್ನ ಕೇಸಿನ ಬಗ್ಗೆ ಸಮಗ್ರ ಅಧ್ಯಯನ ನಡೆಸಿ, ಲೋಪದೋಷಗಳಿದ್ದಲ್ಲಿ ತಿದ್ದುಪಡಿ ನಡೆಸಿ ಕಾನೂನು ಪಾಲನೆಯಲ್ಲಿ ಅರ್ಹರಾಗಿರುವ ಸಿಬ್ಬದಿಯನ್ನು ಅಳವಡಿಸಿಕೊಂಡು ಲೀಗಲ್ ಸೆಲ್ ರಚಿಸಲಾಗಿದೆ ಎಂದು ಜಿಲ್ಲಾ ಪೆÇಲೀಸ್ವರಿಷ್ಠಾಧಿಕಾರಿ ಡಿ.ಶಿಲ್ಪಾ ತಿಳಿಸಿದರು. ಕಳೆದ ವರ್ಷ ಜಿಲ್ಲಾ ಪೆÇಲೀಸ್ ಕೇಂದ್ರದಲ್ಲಿ ಸ್ಥಾಪಿಸಲಾದ ಜನಮೈತ್ರಿ ರೂಂ, ಪೆÇಲೀಸ್ ತರಬೇತಿ ಕೇಂದ್ರ ಮೊದಲಾದವುಗಳು ಪೆÇಲೀಸ್ ಇಲಾಖೆಗೆ ಸಾಧನೆಗಳೆನಿಸಿದುವು. 

       ಸಹೃದಯ, ಪೆÇನ್ ಪುಲರಿ ಮತ್ತು ಕೆಪ್ಸ್ ಯೋಜನೆಗಳು:

      ಸಾಮಾಜಿಕ- ಜಾನಾಂಗೀಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕರ ನಡುವೆ ಸೌಹಾರ್ದಯುತ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಯುವಜನ ಸಂಘ-ಸಮಸ್ತೆಗಳ ಸಹಕಾರದೊಂದಿಗೆ "ಸಹೃದಯ" ಯೋಜನೆ ರಚಿಸಿ ಜಾರಿಗೊಳಿಸಲಾಗಿದೆ. ಮಕ್ಕಳಲ್ಲಿ ಧಾರ್ಮಿಕ ಸಾಮರಸ್ಯ, ಏಕತೆ, ಮಾನವೀಯ ಮೌಲ್ಯ ಬೆಳೆಸುವ ನಿಟ್ಟಿನಲ್ಲಿ "ಪೆÇನ್ ಪುಲರಿ" ಯೋಜನೆ ರಚಿಸಿ ಅನುಷ್ಠಾನಗೊಳಿಸಲಾಗಿದೆ. ಸದ್ರಿ 24 ಸರಕಾರಿ ಶಾಲೆಗಳಲ್ಲಿ, 9 ಅನುದಾನಿತ ಶಾಲೆಗಳಲ್ಲಿ ಸುಮಾರು 1200 ವಿದ್ಯಾರ್ಥಿಗಳನ್ನು ಅಳವಡಿಸಿ 37 ಪೆÇನ್ ಪುಲರಿ ಕ್ಲಬ್ ಗಳು ಚಟುವಟಿಕೆ ನಡೆಸುತ್ತಿವೆ. "ಕಾಸರಗೋಡು ಪೆÇನ್ ಪುಲರಿ" ಯ ಫೇಸ್ ಬುಕ್ ಏಕತೆಯ ಸಂದೇಶಗಳು ಜನಜನಿತವಾಗಿವೆ.

         ಶಾಲಾ ಮಕ್ಕಳನ್ನು ಸಾಮಾಜಿಕ ವಿರೋಧಿಗಳ, ಮಾದಕ ದ್ರವ್ಯ ಮಾಫಿಯಾ, ಲೈಂಗಿಕ ಮಾಫಿಯಾಗಳ ಕರಾಳ ಕೈಗಳಿಂದ ಸಂರಕ್ಷಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಮತ್ತು ಹೆತ್ತವರಿಗೆ ಜಾಗೃತಿ ಮೂಡಿಸುವ ನಿಟ್ಟಿನ್ಲಲಿ ಹೊಸದುರ್ಗ ಪೆÇಲೀಸರು ಆರಮಭಿಸಿರುವ ಕೆಪ್ಸ್ ಯೋಜನೆ, ಲಾಕ್ ಡೌನ್ ಅವಧಿಯಲ್ಲಿ ಮನೆಗಳಲ್ಲೇ ಸೀಮಿತಗೊಂಡು ಮಾನಸಿಕ ಸಂಘರ್ಷಕ್ಕೀಡಾಗುವ ಮಕ್ಕಳನ್ನು ಪತ್ತೆ ಮಾಡಿ ಅವರಲ್ಲಿ ಮೂಡಬಹುದಾದ ಅಪರಾಧ, ಆತ್ಮಹತ್ಯೆ ಸಹಿತ ವಿವಿಧ ರೀತಿಯ ಕೃತ್ಯಗಳಿಂದ ಸಂರಕ್ಷಿಸುವ ನಿಟ್ಟಿನಲ್ಲಿ" ಪ್ರತ್ಯಾಷ(ನಿರೀಕ್ಷೆ)" ಎಂಬ ಯೋಜನೆ ಜನಪರ ಪರಿಣಾಮ ನೀಡಿದೆ.

            ಶಿಶು ಸೌಹಾರ್ದ ನೀತಿಯೊಂದಿಗೆ 6 ಠಾಣೆಗಳು:

      ಕಾಸರಗೋಡು ಜಿಲ್ಲೆಯ 6 ಪೋಲೀಸ್ ಠಾಣೆಗಳು ಇಂದು ಶಿಶು ಸೌಹಾರ್ದ ನೀತಿಯೊಂದಿಗೆ ಚಟುವಟಿಕೆ ನಡೆಸುತ್ತಿವೆ. ಮಂಜೇಶ್ವರ, ಕಾಸರಗೋಡು, ಬದಿಯಡ್ಕ, ನೀಲೇಶ್ವರ, ರಾಜಪುರಂ, ಆದೂರು ಠಾನೆಗಳಿಉ ಈ ನೀತಿ ಹೊಂದಿವೆ.

      ವಿವಿಧ ಅಗತ್ಯಗಳಿಗಾಗಿ ಹೆತ್ತವರೊಂದಿಗೆ ಆಗಮಿಸುವ ಮಕ್ಕಳು ಯಾವುದೇ ಭೀತಿ, ಸಂಕೋಚಗಳಿಲ್ಲದೆ ಠಾಣೆಗಳಲ್ಲಿ ವ್ವಹರಿಸುವ ನಿಟ್ಟಿನಲ್ಲಿ ಟೀವಿ, ಕಥೆಪುಸ್ತಕಗಳು, ಚಿತ್ರ ರಚನೆಗೆ ಬೇಕಾದ ಸಾಮಾಗ್ರಿಗಳು ಇತ್ಯಾದಿಗಳು ಈ ಠಾಣೆಗಳಲ್ಲಿ ಸಜ್ಜುಗೊಂಡಿವೆ.  

                     ಸೈಬರ್ ಪೋಲೀಸ್ ಠಾಣೆ: 

     ಜಿಲ್ಲಾ ಪೋಲೀಸ್ ಕೇಂದ್ರದ ಕಟ್ಟಡದಲ್ಲಿ ಸೈಬರ್ ಪೆÇಲೀಸ್ ಠಾಣೆ ಚಟುವಟಿಕೆ ನಡೆಸುತ್ತಿದೆ. ಮೊಬೈಲ್ ದುರುಪಯೋಗ, ಬಾಂಕಿಂಗ್, ಆನ್ ಲೈನ್ ವಂಚನೆಗಳು ಇತ್ಯಾದಿಗಳನ್ನು ಸಮಗ್ರ ವಾಗಿ ತನಿಖೆ ನಡೆಸಲು, ಕ್ರಮ ಕೈಗೊಳ್ಳಲು ಸೈಬರ್ ಪೋಲೀಸ್ ಠಾಣೆ ಸಜ್ಜಾಗಿದೆ. 

            ಮುಖಚರ್ಯೆ ಬದಲಿಸಿಕೊಂಡ ಬೇಕಲ ಠಾಣೆ

       ರಾಜ್ಯದ ಪ್ರತಿ ಜಿಲ್ಲೆಯಲ್ಲಿ ತಲಾ ಒಂದು ಠಾಣೆಯ ನವೀಕರಣ ಯೋಜನೆಯ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಬೇಕಲ ಪೆÇಲೀಸ್ ಠಾಣೆ ನವೀಕರಣಗೊಂಡಿದೆ. ಸೋಫಾ ಸೆಟ್ ಗಳು, ಇಂಟೀರಿಯರ್ ವರ್ಕ್ ನಡೆಸಲಾದ ಲಾಬಿ, ಅತ್ಯಾಧುನಿಕ ರೀತಿ ನವೀಕರಣಗೊಂಡ ಕಡತ, ಕಂಪ್ಯೂಟರ್, ಸ್ಟೇಷನ್ ಹೌಸ್  ಕಚೇರಿ, ಕ್ರೈಂ ಎಸ್.ಐ ಸಹಿತ ಅಧಿಕಾರಿಗಳ ಕೊಠಡಿಗಳು, ಲಾಕಪ್, ಮಹಿಳಾ ಹೆಲ್ಪ್ ಡೆಸ್ಕ್ ಪ್ರತ್ಯೇಕ ಕೌಂಟರ್, ಟೀವಿ, ವಾಟರ್ ಪ್ಯೂರಿಫಯರ್, ಅಂಗಳದಲ್ಲಿ ಇಂಟರ್ ಲಾಕ್ ಸಹಿತ ಆಧುನಿಕ ಸೌಲಭ್ಯಗಳು ಇಲ್ಲಿವೆ.  

                   ವಿದ್ಯಾರ್ಥಿ ಪೆÇಲೀಸ್ ಕೆಡೆಟ್: 

     ಶಿಕ್ಷಣ, ಅಬಕಾರಿ, ಅರಣ್ಯ, ಪಂಚಾಯತ್ ಇಲಾಖೆಗಳ ಸಹಕಾರದೊಂದಿಗೆ ರಚಿಸಿ ಜಾರಿಗೊಳಿಸಿರುವ "ವಿದ್ಯಾರ್ಥಿ ಪೆÇಲೀಸ್ ಕೆಡೆಟ್" ಯೋಜನೆ 2021 ರಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ಸದ್ರಿ 1449 ಜ್ಯೂನಿಯರ್ ಕೆಡೆಟ್ ಗಳು ಯೋಜನೆಯಲ್ಲಿ ಸದಸ್ಯರಾಗಿದ್ದಾರೆ. ಯೋಜನೆಗೆ ಸಂಬಂಧಪಟ್ಟ ಪೆÇಲೀಸ್ ಠಾಣೆಗಳಿಂದ 62 ಮಂದಿ ಶಿಕ್ಷಕರು(ಸಮುದಾಯ ಪೆÇಲೀಸ್ ಅಧಿಕಾರಿ, ಸಹಾಯಕ ಸಮುದಾಯ ಪೆÇಲೀಸ್ ಅಧಿಕಾರಿ)ಡ್ರಿಲ್ ಶಿಕ್ಷಕರು, ಸಹಾಯಕ ಡ್ರಿಲ್ ಶಿಕ್ಷಕರು ಚಟುವಟಿಕೆ ನಡೆಸುತ್ತಿದ್ದಾರೆ. ಯೋಜನೆಯ ಅಂಗವಾಗಿ ರಕ್ತದಾನ ಶಿಬಿರಗಳು, ಸಸಿ ನೆಡುವಿಕೆ, ಮಾದಕ ದ್ರವ್ಯ ವಿರುದ್ಧ ಶಿಬಿರಗಳು, ಶುಚೀಕರಣ ಇತ್ಯಾದಿ ನಡೆಸಲಾಗುತ್ತಿದೆ. ಲಾಕ್ ಡೌನ್ ಅವಧಿಯಲ್ಲಿ "ಒರು ವಯರೂಟ್ಟಂ(ಒಂದು ಹೊಟ್ಟೆಗೆ ಭೋಜನ)" ಶಿಬಿರದ ಅಂಗವಾಗಿ 3410 ಆಹಾರ ಕಿಟ್ ಗಳನ್ನು ವಿತರಣೆ ನಡೆಸಲಾಗಿದೆ. ಆನ್ ಲೈನ್ ಕಲಿಕೆ ಸೌಲಭ್ಯಗಳಿಗಾಗಿ ಟೀವಿ, ಲಾಪ್ ಟಾಪ್, ಮೊಬೈಲ್ ವಿತರಣೆಯನ್ನೂ ನಡೆಸಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries