ಮಂಜೇಶ್ವರ: ಮಂಜೇಶ್ವರ ತಾಲೂಕು ಸರಬರಾಜು ಕಚೇರಿಯ ವ್ಯಾಪ್ತಿಯ ಕೃಷಿ ಉದ್ದೇಶಗಳಿಗಾಗಿ ರೈತರಿಗೆ ನೀಡಲಾಗುವ ಸೀಮೆಎಣ್ಣೆ ಪರವಾನಗಿ ನವೀಕರಣ ಫೆಬ್ರವರಿ 24 ಮತ್ತು 25 ರಂದು ನಡೆಯಲಿದೆ ಎಂದು ತಾಲೂಕು ಪೂರೈಕೆ ಅಧಿಕಾರಿ ತಿಳಿಸಿದ್ದಾರೆ.
ಫೆ.24 ರಂದು ಮಂಜೇಶ್ವರ, ಮೀಂಜ ಮತ್ತು ಪೈವಳಿಕೆ ಪಂಚಾಯಿತಿಗಳ ರೈತರಿಗೆ ಆಯಾ ಕೃಷಿ ಭವನಗಳಲ್ಲಿ ಮತ್ತು ಮಂಗಲ್ಪಾಡಿ ಪಂಚಾಯತಿಗೆ ಉಪ್ಪಳದಲ್ಲಿರುವ ಮಂಜೇಶ್ವರ ತಾಲೂಕು ಪೂರೈಕೆ ಕಚೇರಿಯಲ್ಲಿ ವಿತರಿಸಲಾಗುವುದು.
ಫೆ.25 ರಂದು ಕುಂಬಳೆ, ಪುತ್ತಿಗೆ, ಎಣ್ಮಕಜೆ ಮತ್ತು ವರ್ಕಾಡಿ ಪಂಚಾಯಿತಿಗಳಲ್ಲಿ ಆಯಾ ಕೃಷಿ ಭವನಗಳಲ್ಲಿ ಕೃಷಿ ಪರವಾನಗಿ ನೀಡಲಾಗುವುದು. ವಿತರಣಾ ಸಮಯ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿದೆ. ಮೂಲ ಪರವಾನಗಿ ಹೊಂದಿರುವವರು ನೇರವಾಗಿ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ನ್ನು ಹಾಜರುಪಡಿಸಬೇಕು ಮತ್ತು ಪರವಾನಗಿ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ತಾಲೂಕು ಪೂರೈಕೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.