HEALTH TIPS

ಅನುದಾನಿತ ಶಾಲಾ ಶಿಕ್ಷಕರು ಇನ್ನು ಸ್ಪರ್ಧಿಸಲು ಅವಕಾಶವಿಲ್ಲ-ಮಹತ್ತರ ತೀರ್ಪು ನೀಡಿದ ಹೈಕೋರ್ಟ್

         

        ತಿರುವನಂತಪುರ: ಅನುದಾನಿತ ಶಾಲಾ ಶಿಕ್ಷಕರು ಇನ್ನು ಮುಂದಿನ ದಿನಗಳಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಶಿಕ್ಷಕರಿಗೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದಿರುವ ನ್ಯಾಯಾಲಯ ಈವರೆಗೆ ಇದ್ದ ಈ ಬಗೆಗಿನ ಕಾನೂನನ್ನು ಹೈಕೋರ್ಟ್ ರದ್ದುಪಡಿಸಿದೆ. 


        ಶಿಕ್ಷಕರು ಮತದಾನ ಪ್ರಕ್ರಿಯೆಗಳಲ್ಲಿ ಸ್ಪರ್ಧಿಸುವುದು ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆಯಾಗಿದೆ ಎಂಬ ಅಂಶವನ್ನು ಉಲ್ಲೇಖಿಸಿ ನ್ಯಾಯಾಲಯ ಈ ತೀರ್ಪನ್ನು ನಿನ್ನೆ ಘೋಶಿಸಿದೆ. ಕಳೆದ ಹತ್ತು ವರ್ಷಗಳಿಂದ ಹೈಕೋರ್ಟ್ ನ ಪರಿಗಣನೆಯಲ್ಲಿದ್ದ ದೂರಿಗೆ ಸಂಬಂಧಿಸಿ ಮುಖ್ಯ ನ್ಯಾಯಮೂರ್ತಿ ಅಧ್ಯಕ್ಷರಾಗಿರುವ ವಿಭಾಗೀಯ ಪೀಠ ನಿನ್ನೆ ಈ ಬಗೆಗಿನ ನಿರ್ಣಾಯಕ ತೀರ್ಪು ನೀಡಿತು. 

       ಹೈಕೋರ್ಟ್ 1951 ರ ವಿಧಾನಸಭಾ ಕಾಯ್ದೆಯ ಪರವಾಗಿ ತೀರ್ಪು ನೀಡಿತು. ಈ ಮೂಲಕ ಸ್ಥಳೀಯಾಡಳಿತ ಚುನಾವಣೆ ಸಂಸ್ಥೆಗಳ ಚುನಾವಣೆಯಲ್ಲೂ ಅನುದಾನಿತ ಶಾಲಾ ಶಿಕ್ಷಕರು ಸ್ಪರ್ಧಾಳುಗಳಾಗುವಂತಿಲ್ಲ. 

       ಪ್ರಸ್ತುತ ಚುನಾಯಿತರಾಗಿರುವ ಪ್ರತಿನಿಧಿಗಳಿಗೆ ಅನ್ವಯಿಸದು ಎಂದು ಮುಖ್ಯ ನ್ಯಾಯಮೂರ್ತಿ ತಮ್ಮ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries