ತೃಶೂರ್: ಗುರುವಾಯೂರ್ ದೇವಾಲಯ ಉತ್ಸವದಲ್ಲಿ ಈ ಬಾರಿ ಯಾವುದೇ ಪ್ರಸಾದ ವಿತರಣೆ ಇರುವುದಿಲ್ಲ. ಬದಲಾಗಿ, ಪ್ರಸಾದ ಸ್ವರೂಪದಲ್ಲಿ ಕಿಟ್‍ಗಳನ್ನು ವಿತರಿಸಲು ದೇವಸ್ವಂ ಮಂಡಳಿ ನಿರ್ಧರಿಸಿದೆ.
ಕೋವಿಡ್ ಹಿನ್ನೆಲೆಯಲ್ಲಿ ಗುರುವಾಯೂರ್ ದೇವಾಲಯ ಉತ್ಸವದಲ್ಲಿ ಹಲವು ನಿಯಂತ್ರಿತ ಬದಲಾವಣೆಗಳಿರಲಿವೆ. ಜಾತ್ರೆಯ ಸಂದರ್ಭ ಎಲ್ಲರಿಗೂ ಆಹಾರ ಕಿಟ್ ಗಳನ್ನು ಒದಗಿಸಲು ದೇವಸ್ವಂ ಮಂಡಲೀ ಪ್ರಾಯೋಜಕರನ್ನು ಹುಡುಕುವರು. ಕಿಟ್‍ನಲ್ಲಿ 5 ಕೆಜಿ ಅಕ್ಕಿ, 1 ಕೆಜಿ ಮುತ್ತು ಬಾರ್ಲಿ, 1 ಕೆಜಿ ತೆಂಗಿನ ಎಣ್ಣೆ, 1 ಕೆಜಿ ಬೆಲ್ಲ, 1 ಪ್ಯಾಕೆಟ್ ಹಪ್ಪಳ, 1 ಪ್ಯಾಕೆಟ್ ಉಪ್ಪು ಮತ್ತು 1 ತೆಂಗಿನಕಾಯಿ ಇರಲಿದೆ. ಹಬ್ಬದ ಮೊದಲು ನಡೆಯುವ ಸಮಾರಂಭಗಳು 16 ರಂದು ಪ್ರಾರಂಭವಾಗಲಿವೆ 24 ರಂದು ಮಧ್ಯಾಹ್ನ 3 ಗಂಟೆಗೆ ಆನೆ ಓಟ ಮತ್ತು ಜಾತ್ರೆಯ ಧ್ವಜಾರೋಹಣ ನಡೆಯಲಿದೆ.
ಆರು ತಿಂಗಳ ಪೂರ್ವಭಾವಿಯಾಗಿ ದೇವಾಲಯದಲ್ಲಿ ವಿವಾಹವನ್ನು ಕಾಯ್ದಿರಿಸಲು ಸಾಧ್ಯವಾಗುವಂತೆ ಮಂಡಳಿಯು ನಿರ್ಧರಿಸಿದೆ. ಪ್ರಸ್ತುತ, ಬುಕಿಂಗ್ ನ್ನು ಎರಡು ತಿಂಗಳ ಮುಂಚಿತವಾಗಿ ಮಾತ್ರ ಅನುಮತಿಸಲಾಗಿದೆ.