ನವದೆಹಲಿ: ಕಾಂಗ್ರೆಸ್ ವಿಪಕ್ಷ ನಾಯಕ ಗುಲಾಮ್ ನಬಿ ಆಜಾದ್ ತಮ್ಮ ವಿದಾಯದ ಭಾಷಣದಲ್ಲಿ ಭಾವುಕರಾಗಿದ್ದು ಭಾರತೀಯ ಮುಸ್ಲಿಂ ಆಗಿರುವುದಕ್ಕೆ ಹೆಮ್ಮೆಯಿದೆ. ಪಾಕಿಸ್ತಾನಕ್ಕೆ ತೆರಳದ ಅದೃಷ್ಠವಂತರಲ್ಲಿ ನಾನು ಒಬ್ಬನು ಎಂದು ಹೇಳಿದ್ದಾರೆ.
ಪಾಕಿಸ್ತಾನದಲ್ಲಿನ ಪರಿಸ್ಥಿತಿಗಳ ಬಗ್ಗೆ ಓದಿದಾಗ ನಾನು ಭಾರತದಲ್ಲಿ ಭಾರತೀಯ ಮುಸ್ಲಿಂನಾಗಿರುವುದಕ್ಕೆ ಹೆಮ್ಮೆಯಿದೆ. ಇನ್ನು ರಾಜಕೀಯವಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನನಗೆ ಜನರು ಪ್ರೀತಿ ದೊರೆತಿದೆ ಎಂದು ಹೇಳಿದ್ದಾರೆ.
ಗುಲಾಮ್ ನಬಿ ಆಜಾದ್ ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಜಾದ್ ಬಗ್ಗೆ ಪ್ರಸ್ತಾಪಿಸಿ ಭಾವುಕರಾದರು. ಅಲ್ಲದೆ 2005ರಲ್ಲಿ ಕಾಶ್ಮೀರದಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿ ಕುರಿತು ಮಾತನಾಡಿದ್ದ ಮೋದಿ ಭಯೋತ್ಪಾದಕ ದಾಳಿಯಿಂದಾಗಿ ಗುಜರಾತ್‍ನ ಜನರು ಕಾಶ್ಮೀರದಲ್ಲಿ ಸಿಲುಕಿಕೊಂಡಾಗ ಆಜಾದ್ ಮತ್ತು ಪ್ರಣಬ್ ಮುಖರ್ಜಿ ಅವರ ಪ್ರಯತ್ನಗಳನ್ನು ನಾನು ಎಂದಿಗೂ ಮರೆಯುವುದಿಲ್ಲ. ಗುಲಾಂ ನಬಿ ಆಜಾದ್ ಅವರು ನಿರಂತರವಾಗಿ ಪಾಲೋ ಅಪ್ ಮಾಡುತ್ತಿದ್ದರು. ತಮ್ಮದೇ ಕುಟುಂಬದ ಸದಸ್ಯರೇ ಸಿಲುಕಿಕೊಂಡಿದ್ದಾರೆ ಎಂಬ ರೀತಿ ಅವರು ಚಡಪಡಿಸಿ ಕೆಲಸ ಮಾಡಿದ್ದರು ಎಂದು ಆಜಾದ್ ಅವರನ್ನು ಮೋದಿ ಹಾಡಿ ಹೊಗಳಿದ್ದರು.
ನಂತರ ಮಾತನಾಡಿದ ಆಜಾದ್ 2005ರಲ್ಲಿ ತಾವು ಜಮ್ಮು-ಕಾಶ್ಮೀದ ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯನ್ನು ನೆನಪಿಸಿಕೊಂಡು ಭಾವುಕರಾದರು. ದೇಶದಲ್ಲಿ ಭಯೋತ್ಪಾದನೆ ನಿರ್ಣಾಮವಾಗಬೇಕು ಎಂದು ಅಲ್ಲಾ ನನ್ನು ಪ್ರಾರ್ಥಿಸುತ್ತೇನೆ ಎಂದರು.
ಸಂಸದ ಬಿನೋಯ್ ವಿಶ್ವಂ ಪ್ರತಿಕ್ರಿಯಿಸಿದ್ದು ಪ್ರಧಾನಿ ಮೋದಿಯನ್ನು ವೈಯುಕ್ತಿಕವಾಗಿ ಭೇಟಿಮಾಡಲು ಬಯಸುತ್ತೇನೆ ಎಂದಿರುವರು.