ನವದೆಹಲಿ: ನ್ಯಾಯಾಲಯದ ವಿಚಾರಣೆಯ ವಿಡಿಯೋ ಕಾನ್ಫರೆನ್ಸ್ ಲಿಂಕ್‌ಗಳನ್ನು ಹಂಚಿಕೊಳ್ಲಲು ಇನ್ನು ಮುಂದೆ ವಾಟ್ಸಾಪ್ ಗುಂಪುಗಳನ್ನು ಬಳಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನೋಂದಾವಣೆ ಶನಿವಾರ ತಿಳಿಸಿದೆ.
ವಾಟ್ಸಾಪ್ ಬದಲಿಗೆ,ನೋಂದಾಯಿತ ಇಮೇಲ್ ಐಡಿಗಳಲ್ಲಿ ಮತ್ತು ಸಂಬಂಧಪಟ್ಟ ವಕೀಲರ ನೋಂದಾಯಿತ ಮೊಬೈಲ್ ಸಂಖ್ಯೆಗಳು, ರೆಕಾರ್ಡ್ ಮತ್ತು ಪಾರ್ಟಿ-ಇನ್-ಪರ್ಶನ್ ನಲ್ಲಿ ಸುಪ್ರೀಂ ಕೋರ್ಟ್ ವಿಡಿಯೋ ಕಾನ್ಫರೆನ್ಸ್ ಲಿಂಕ್‌ಗಳನ್ನು ಹಂಚಿಕೊಳ್ಲಲಾಗುತ್ತದೆ ಎಂದು ನೋಂದಾವಣೆ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಹೊಸದಾಗಿ ಅಧಿಸೂಚಿಸಲಾದ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು, 2021 (ಐಟಿ ನಿಯಮಗಳು, 2021) ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. "ವಕೀಲರು-ಆನ್-ರೆಕಾರ್ಡ್ / ಪಾರ್ಟಿ-ಇನ್-ಪರ್ಸನ್ಸ್‌ನ ಮಾಹಿತಿಗಾಗಿ, ಅವರ ವಿಷಯಗಳ ವಿಚಾರಣೆಗೆ ವಿಸಿ ಲಿಂಕ್‌ಗಳನ್ನು ಹಂಚಿಕೊಳ್ಳಲು ವಾಟ್ಸಾಪ್‌ನಲ್ಲಿ ಗುಂಪುಗಳ ರಚನೆಯನ್ನು ನಿರ್ಬಂಧಿಸಲಾಗಿದೆ / ಸರ್ಕಾರವು ಹೊರಡಿಸಿದ ಹೊಸ ಮಾರ್ಗಸೂಚಿಗಳು ಅಥವಾ ನಿಬಂಧನೆಗಳ ಕಾರಣದಿಂದಾಗಿ ನಿರ್ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ. ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳು ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಸಂಬಂಧಿಸಿದ ಸರ್ಕಾರದ ಹೊಸ ಮಾರ್ಗಸೂಚಿಯನ್ವಯ ಈ ಬದಲಾವಣೆ ಮಾಡಲಾಗಿದೆ. ಮಾರ್ಚ್ 1, 2021ರ ನಂತರ ಈ ಹೊಸ ನಿಯಮ ಜಾರಿಗೆ ಬರಲಿದೆ.
ಸೋಶಿಯಲ್ ಮೀಡಿಯಾ ಸಂಸ್ಥೆಗಳಾದ ಫೇಸ್‌ಬುಕ್ ಮತ್ತು ಟ್ವಿಟರ್‌ಗಳಿಗೆ ಮತ್ತು ಒಟಿಟಿ ಪ್ಲೇಯರ್‌ಗಳಿಗೆ ಸರ್ಕಾರ ಹೊಸ ಮಾರ್ಗಸೂಚಿ ನಿಯಮಗಳನ್ನು ಪ್ರಕಟಿಸಿದೆ. ದೇಶದ ಸಾರ್ವಭೌಮತ್ವಕ್ಕೆ ವಿರುದ್ಧವಾದ ಸಂದೇಶದ ಮೂಲವನ್ನು ಗುರುತಿಸಲು ಟ್ವಿಟರ್ ಮತ್ತು ವಾಟ್ಸಾಪ್ ನಂತಹ ಪ್ಲಾಟ್‌ಫಾರ್ಮ್‌ಗಳಿಗೆ ಮಾರ್ಗಸೂಚಿಗಳು ಕಡ್ಡಾಯಗೊಂಡಿದೆ.