ಕಾಸರಗೋಡು: ಕರ್ನಾಟಕದ ಗಡಿ ಪ್ರದೇಶ ದೇಲಂಪಾಡಿ ಗ್ರಾಮ ಪಂಚಾಯತ್ ನ ಪಳ್ಳತ್ತೂರು ಸೇತುವೆ ಮತ್ತು ಪಳ್ಳತ್ತೂರು-ಕೊಟ್ಯಾಡಿ ರಸ್ತೆಯ ಉದ್ಘಾಟನೆ ಭಾನುವಾರ ಜರಗಿತು.
ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಟನೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಸಚಿವ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ ಕಾಸರಗೋಡು ಜಿಲ್ಲೆಯ ಅಭಿವೃದ್ಧಿ ಚುರುಕಾಗಿದೆ. ಅಂತಾರಾಜ್ಯ ಹೆದ್ದಾರಿ ಮತ್ತು ಸೇತುವೆಗಳ ಅಭಿವೃದ್ಧಿಯೂ ಈ ಯೋಜನೆಯ ಭಾಗಗಳಾಗಿವೆ ಎಂದು ತಿಳಿಸಿದರು.
ಶಾಸಕ ಕೆ.ಕುಂಞÂ್ಞ ರಾಮನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮತ್ತು ಪುತ್ತೂರಿನ ಶಾಸಕ ಸಂಜೀವ ಮಟ್ಟಂತೂರು ಮುಖ್ಯ ಅತಿಥಿಯಾಗಿದ್ದರು. ಕಾರಡ್ಕ ಬ್ಲೋಕ್ ಪಂಚಾಯತ್ ಅಧ್ಯಕ್ಷ ಸಿಜಿ ಮ್ಯಾಥ್ಯೂ, ದೇಲಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನ್ಯಾಯವಾದಿ ಪಿ.ಎ.ಉಷಾ ಮೊದಲಾದವರು ಉಪಸ್ಥಿತರಿದ್ದರು.