ಕುಂಬಳೆ : ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ 2020-21 ನೇ ಯೋಜನೆಯ ಭಾಗವಾಗಿ ಕಾಸರಗೋಡು ಜಿಲ್ಲೆಯಿಂದ ಅಂಗೀಕೃತ ಲೈಬ್ರರಿ ಗಳಿಂದ ಆಯ್ಕೆಯಾದ ಸ್ಪರ್ಧಾಳುಗಳಿಗೆ ಜಿಲ್ಲಾ ಮಟ್ಟದ ಸ್ಪರ್ಧೆ ಇತ್ತೀಚೆಗೆ ಕುಂಬಳೆ ಸರ್ಕಾರಿ ಹೈಸ್ಕೂಲಿನಲ್ಲಿ ನಡೆಯಿತು.
ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಅಬ್ದುಲ್ಲಾ ಕೆ ರವರ ಅಧ್ಯಕ್ಷತೆಯಲ್ಲಿ, ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಅಹ್ಮದ್ ಹುಸೈನ್ ಪಿ.ಕೆ. ಉದ್ಘಾಟಿಸಿ ಮಾತನಾಡಿ ವಿವಿಧ ವಿಭಾಗದ ಪುಸ್ತಕಗಳನ್ನು ಆಯ್ಕೆ ಮಾಡಿ ಅದರಿಂದ ಪ್ರಶ್ನೆ ಗಳನ್ನು ಕೇಳಿ ಸ್ಪರ್ಧೆ ಆಯೋಜಿಸುವುದರಿಂದ ಪುಸ್ತಕ ಓದುಗರ ಸಂಖ್ಯೆ ಹೆಚ್ಚಿಸಲು ಸಾಧ್ಯವಿದೆ. ಜೊತೆಗೆ ಇಂದಿನ ಅಂತರ್ಜಾಲ ಯುಗದಲ್ಲಿ ಈ ರೀತಿಯ ವಾಚನ ಸ್ಪರ್ಧೆಯಿಂದ ಸಾರ್ವಜನಿಕರಲ್ಲಿ ಓದುವ ಹವ್ಯಾಸ ಅಭಿವೃದ್ದಿಗೊಳ್ಳುತ್ತದೆ. ಇದಕ್ಕಾಗಿ ಕಾಸರಗೋಡಿನ ಕನ್ನಡಿಗರಿಗೆ ರಾಜ್ಯ ಲೈಬ್ರರಿ ಕೌನ್ಸಿಲ್ ನೀಡಿರುವ ಪ್ರೋತ್ಸಹ ಸ್ವಾಗತಾರ್ಹವೆಂದು ತಿಳಿಸಿದರು.
ಸ್ಫರ್ಧೆಯಲ್ಲಿ ವಿವಿಧ ವಿಭಾಗದಲ್ಲಿ ಹಿರಿಯರು ಕಿರಿಯರು ಭಾಗವಹಿಸಿರುವುದು ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಯೋಜನೆಯ ಯಶಸ್ವಿಗೆ ಕಾರಣವಾಯಿತು.
ಕಾರ್ಯಕ್ರಮದಲ್ಲಿ ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಕಮಲಾಕ್ಷ ಡಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಶ್ರೀಕುಮಾರಿ ಟೀಚರ್ ,ಹರಿಣಾಕ್ಷಿ, ರವೀಂದ್ರ ಉಪಸ್ಥಿತರಿದ್ದರು. ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯ ವನಿತಾ ಆರ್ ಶೆಟ್ಟಿ ವಂದಿಸಿದರು.