ಕಾಸರಗೋಡು: ಕಾಸರಗೋಡು ಜಿಲ್ಲೆಯ ಜಲಸಂರಕ್ಷಣೆ ಚಟುವಟಿಕೆಗಳು ಸ್ಥಳೀಯ ನಿವಾಸಿಗಳ, ಜೀವಜಾಲಗಳಿಗೆ ಕೇಡು ತರದು ರೀತಿ ಮಾತ್ರ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಲಸಂರಕ್ಷಣೆ ಚಟುವಟಿಕೆಗಳ ಜಾರಿ ಸಂಬಂಧ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಲಾಶಯಗಳ ಪುನಶ್ಚೇತನ ಚಟುವಟಿಕೆಗಳನ್ನು ನಡೆಸುವ ವೇಳೆ ಜಲಶಯಗಳಲ್ಲಿ, ತಟಗಳಲ್ಲಿರುವ ಸಸ್ಯಗಳು, ಹುಲ್ಲು ವಿಭಾಗಗಳು, ಮೀನುಗಳ ಸಹಿತ ಜಲಜನ್ಯ ಜೀವಿಗಳು, ಸ್ಥಳೀಯ ನಿವಾಸಿಗಳು ಮೊದಲಾದವರಿಗೆ ತೊಂದರೆಯಾಗಕೂಡದು ಎಂದವರು ತಿಳಿಸಿದರು.
ಎಂಜಿ.ಎಲ್.ಆರ್.ಇ.ಜಿ.ಎ. ಮೂಲಕ ನಡೆಸಲಾಗುವ ಕೆಲವು ಚಟುವಟಿಕೆಗಳು ಹಾದಿಬದಿಗಳ ಕೆಲವು ಖಾಸಗಿ ವ್ಯಕ್ತಿಗಳ ಜಾಗಗಳ ಸಸ್ಯಗಳನ್ನು, ಹುಲ್ಲುಗಳನ್ನು ಇತ್ಯಾದಿಗಳನನು ತೆರವುಗೊಳಿಸಲಾಗುತ್ತಿದೆ. ಇಂಥಾ ಕ್ರಮಗಳನ್ನು ನಡೆಸಕೂಡದು. ಈ ರೀತಿ ಕ್ರಮಗಳು ಎಲ್ಲಾದರೂ ನಡೆದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇಂಥಾ ಕೃತ್ಯಗಳ ಬಗ್ಗೆ ನಿಗಾ ಇರಿಸಲು ವಿಶೇಷ ಟಾಸ್ಕ್ ಫೆÇೀರ್ಸ್ ಒಂದನ್ನು ನೇಮಿಸಲಾಗುವುದು ಎಂದವರು ತಿಳಿಸಿದರು.
650ಕ್ಕೂ ಅಧಿಕ ಜಲಾಶಯಗಳಲ್ಲಿ ಶಾಶ್ವತ, ಅರೆ ಶಾಶ್ವತ, ತಾತ್ಕಾಲಿಕ ಜಲಸಂರಕ್ಷಣೆ ನಿರ್ಮಾಣಗಳನ್ನು ನಡೆಸುವ ಮೂಲಕ ಕಾಸರಗೋಡು ಜಿಲ್ಲೆಯ ಜಲಕ್ಷಾಮ ಪರಿಹಾರಕ್ಕೆ ಶಾಶ್ವತ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆ ತಿಳಿಸಿದೆ. ತ್ರಿಸ್ತರ ಪಂಚಾಯತ್ ಗಳು, ನೀರಾವರಿ ಇಲಾಖೆ, ಮಣ್ಣು-ಜಲಸಂರಕ್ಷಣೆ ಇಲಾಖೆ, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್, ಪಂಚಾಯತ್ ಗ್ರಾಮಾಭಿವೃಧ್ಧಿ ಇಲಾಖೆ ಇತ್ಯಾದಿಗಳ ಏಕೀಕರಣದೊಂದಿಗೆ ಜಿಲ್ಲೆಯ ಜಲಸಂರಕ್ಷಣೆ ಚಟುವಟಿಕೆಗಳಿಗೆ ರೂಪುರೇಷೆ , ಕ್ರಿಯಾ ಯೋಜನೆ ಸಿದ್ಧಗೊಳಿಸಲಾಗುವುದು ಎಂದು ಸಭೆ ತಿಳಿಸಿದೆ.
ಬಾಂಬೂ(ಬಿದಿರು) ಕಾಪಿಟಲ್ ಯೋಜನೆ 2021-22 ವರ್ಷದಲ್ಲೂ ಮುಂದುವರಿಯಲಿದೆ. ಮಂಜೇಶ್ವರ, ಕಾಸರಗೋಡು, ಕಾರಡ್ಕ ಬ್ಲೋಕ್ ಗಳ ಪ್ರತಿ ಪಂಚಾಯತ್ ಗಳಲ್ಲಿ ಅಗತ್ಯವಿರುವ ಬಿದಿರು ಸಸಿಗಳನ್ನು ಉತ್ಪಾದಿಸಲು ನರ್ಸರಿಗಳ ಚಟುವಟಿಕೆಗಳನ್ನು ಶೀಘ್ರದಲ್ಲೇ ಆರಂಭಿಸುವಂತೆ ಎಂ.ಜಿ.ಎಲ್.ಆರ್.ಇ.ಜಿ.ಎಸ್.ಗೆ ಸಭೆ ಹೊಣೆ ನೀಡಿದೆ. ಜಿಲ್ಲೆಯ ಪ್ರತ್ಯೇಕ ಹಿನ್ನೆಲೆ ಮನಗಂಡು ಪುನಶ್ಚೇತನ ಚಟುವಟಿಕೆಗಳನ್ನು ನಡೆಸಲು, ಜಲಾಶಯಗಳಲ್ಲಿ ಗರಿಷ್ಠ ಪ್ರಮಾಣದ ಜಲ ಸಂಗ್ರಹ ಚಟುವಟಿಕೆ ನಡೆಸಲಾಗುವುದು ಎಂದು ತಿಳಿಸಲಾಯಿತು.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್, ಯೋಜನೆ ನಿರ್ದೇಶಕ ಪಿ.ಎ.ಯು.ಪ್ರದೀಪನ್, ಪಂಚಾಯತ್ ಸಹಾಯಕ ನಿರ್ದೇಶಕ ಜೈಸನ್ ಮ್ಯಾಥ್ಯೂ, ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಕಿರು ನೀರಾವರಿ ಕಾರ್ಯಕಾರಿ ಇಂಜಿನಿಯರ್, ಗ್ರಾಮ ಪಂಚಾಯತ್ ಗಳ ಎಂ.ಜಿ.ಎಲ್.ಆರ್.ಜಿ.ಎ. ಇಂಜಿನಿಯರ್ ಗಳು ಮೊದಲಾದರು ಉಪಸ್ಥಿತರಿದ್ದರು.