ಕಾಸರಗೋಡು: ಕಾಸರಗೋಡನ್ನು ಕಾರ್ಬನ್ ನ್ಯೂಟ್ರಲ್ ಜಿಲ್ಲೆಯಾಗಿಸುವ ಉದ್ದೇಶದಿಂದ ಜಾರಿಗೊಳಿಸುವ ಸೀ ಪಾರ್ ಯೂ ಯೋಜನೆಯ ಪಳ್ಳಿಕ್ಕರೆ ಗ್ರಾಮ ಪಂಚಾಯತ್ ಮಟ್ಟದ ಉದ್ಘಾಟನೆ ಸೋಮವಾರ ಜರುಗಿತು.
ಕಾಞಂಗಾಡ್ ಬ್ಲೋಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಕುಮಾರನ್ ಅಧ್ಯಕ್ಷತೆ ವಹಿಸಿದ್ದರು. ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ. ಸುಬ್ರಹ್ಮಣ್ಯನ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಸದಸ್ಯರಾದ ಶೋಭನಾ ಟಿ. ಪ್ರಸೀದಾ ಕೆ., ರೀಜಾ ರಾಜೇಶ್, ಉದುಮಾ ಸರಕಾರಿ ಕಾಲೇಜಿನ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ವಿದ್ಯಾ ಕೆ. ಉಪಸ್ಥಿತರಿದ್ದರು.