ಕುಂಬಳೆ: ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ಒಂಬತ್ತನೇ ಮತ್ತು ಹತ್ತನೇಯ ಸೇವಾ ಕಾರ್ಯವು ತಲಪಾಡಿ ಸಮೀಪದ ತೂಮಿನಾಡಿನ ಮಕ್ಕಳಿಲ್ಲದ, ಅಶಕ್ತ ವೃದ್ಧ ದಂಪತಿಗಳಾದ ರಾಮಣ್ಣ ಸಪಲ್ಯ ಮತ್ತು ಲೀಲಾವತಿ ಎಂಬುವವರಿಗೆ ಮತ್ತು ಕುಂಬಳೆ ಸಮೀಪದ ಮುಜುಂಗಾವು ನಿವಾಸಿ ಎಲುಬು ಸವೆತ ರೋಗದಿಂದ ಬಳಲುತ್ತಿರುವ ಯೋಗಿಶ್ ಕುಲಾಲ್ ಎಂಬುವವರಿಗೆ ನಿತ್ಯೋಪಯೋಗಿ ಸಾಮಗ್ರಿಗಳನ್ನು ಹಸ್ತಾಂತರಿಸುವ ಮೂಲಕ ಜರಗಿತು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಕುಂಬಳೆ ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ (ಅಭಿವೃದ್ಧಿ) ಪ್ರೇಮಲತಾ, ಗ್ರಾಮ ಪಂಚಾಯತಿ ಸದಸ್ಯೆ ಸುಲೋಚನ, ಬಿಜೆಪಿ ನೇತಾರೆ ಮೋಹಿನಿ ಪದ್ಮನಾಭ, ಜ್ಯೋತಿಶ್ರೀ ತೂಮಿನಾಡು, ವಿಜಯ್ ಕುಮಾರ್ ತೂಮಿನಾಡು, ಮಮತಾ ವಿಜಯ್ ಕುಮಾರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಸಲಹೆಗಾರ ರಾಧಾಕೃಷ್ಣ ಮಾನ್ಯ, ಸಂಸ್ಥಾಪಕ ಅಧ್ಯಕ್ಷ ಮನೋಜ್ ಕುಲಾಲ್ ಕೊಡಕ್ಕಲ್, ಸಂಸ್ಥಾಪಕ ಉಪಾಧ್ಯಕ್ಷ ವಂಶಿ ಪಂಡಿತ್ ಮಂಗಳೂರು, ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಶೆಟ್ಟಿ ಸೋಮೇಶ್ವರ, ಸಂಸ್ಥಾಪಕರು, ಟೀಮ್ ಮಂಜುಶ್ರೀ ಕುಡ್ಲ ತಂಡದ ಅಧ್ಯಕ್ಷ ಚಂದ್ರೇಶ್ ಮಾನ್ಯ, ಉಪಾಧ್ಯಕ್ಷ ರಮೇಶ್ ಕುಲಾಲ್ ನಾರಾಯಣಮಂಗಲ, ಕಾರ್ಯದರ್ಶಿ ವಿಕೇಶ್ ಕುಲಾಲ್, ಪ್ರಚಾರ ಸಮಿತಿ ಅಧ್ಯಕ್ಷ ರಜನೀಶ್ ಅಶ್ವ, ಸಚಿನ್(ಬಜಿರೆ) ವೇಣೂರು ಮುಂತಾದವರು ಉಪಸ್ಥಿತರಿರದ್ದರು.