ಕಾಸರಗೋಡು: ಉದ್ಯೋಗ ನೈಪುಣ್ಯ ಇಲಾಖೆ ವತಿಯಿಂದ ಸರ್ಕಾರಿ-ಖಾಸಗಿ ಐ.ಟಿ.ಐ.ಗಳಿಂದ ಉದ್ಯೋಗ ತರಬೇತಿ ಪೂರ್ಣಗೊಳಿಸಿದ ಟ್ರೈನಿಗಳಿಗಾಗಿ 'ಸ್ಪೆಕ್ಟ್ರಂ ಉದ್ಯೋಗ ಮೇಳ'ಕಾಸರಗೋಡು ಸರ್ಕಾರಿ ಐ.ಟಿ.ಐ.ಯಲ್ಲಿ ಜರುಗಿತು. 375 ಮಂದಿ ಉದ್ಯೋಗಾರ್ಥಿಗಳು ಮತ್ತು ರಾಜ್ಯದ ಒಳಗಿನ ಮತ್ತು ಹೊರಗಿನ 30 ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದುವು.
ಶಾಸಕ ಎನ್.ಎ.ನೆಲ್ಲಿಕುನ್ನು ಮೇಳ ಉದ್ಘಾಟಿಸಿದರು. ಕಾಸರಗೋಡು ನಗರಸಭೆ ಅಧ್ಯಕ್ಷ ನ್ಯಾಯವಾದಿ ವಿ.ಎಂ.ಮುನೀರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉದ್ಯೋಗಾಧಿಕಾರಿ ಧನಲಕ್ಷ್ಮಿ ಅಮ್ಮಾಟ್ಟಿ ಉಪಸ್ಥಿತರಿದ್ದರು. ಕಾಸರಗೋಡು ಸರ್ಕಾರಿ ಐ.ಟಿ.ಐ. ಪ್ರಾಂಶುಪಾಲ ಟಿ.ಪಿ.ಮಧು ಸ್ವಾಗತಿಸಿದರು. ಸೀತಾಂಗೋಳಿ ಐ.ಟಿ.ಐ. ಪ್ರಾಂಶುಪಾಲ ಕೃಷ್ಣನ್ ನಂಬೂದಿರಿ ವಂದಿಸಿದರು.