HEALTH TIPS

ಸಾಹಿತ್ತಿಕ, ಸಾಂಸ್ಕøತಿಕ ಮತ್ತು ಆಧ್ಯಾತ್ಮಿಮಿಕ ಕ್ಷೇತ್ರದಲ್ಲಿ ಪುರಂದರ ದಾಸರ ಕೊಡುಗೆ ಅನನ್ಯ-ಎಡನೀರು-ಕಾಟುಕುಕ್ಕೆ ಪುರಂದರೋತ್ಸವದಲ್ಲಿ ಅಭಿಮತ

      


       ಪೆರ್ಲ: ಸಾಹಿತ್ಯ ಚಿಂತನೆಗಳ ಭಕ್ತಿಯ ಮೂಲಕ ಮುಕ್ತಿ ಮಾರ್ಗವನ್ನು ತೋರಿಸಿದ ದಾಸ ಶ್ರೇಷ್ಠ ಶ್ರೀ ಪುರಂದರ ದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಮೌಢ್ಯತೆಗಳನ್ನು ತೊಲಗಿಸಿ, ಸಮಾಜಿಕ ಪರಿವರ್ತನೆಯಲ್ಲಿ ಮಹತ್ತರ ಕ್ರಾಂತಿಯನ್ನೇ ಮಾಡಿದ್ದಾರೆ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದರು.

          ಶ್ರೀ ಪುರಂದರ ದಾಸ ಆರಾಧನೋತ್ಸವ ಸಮಿತಿ ಕಾಟುಕುಕ್ಕೆ, ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ಟಸ್ಟ್, ವಿವಿಧ ತಾಲೂಕುಗಳ  ಭಜನಾ ಮಂಡಳಿಗಳ ನೇತೃತ್ವದಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ನಡೆದ 13ನೇ ವರ್ಷದ ಶ್ರೀ ಪುರಂದರದಾಸ ಆರಾಧನೋತ್ಸವ ಮತ್ತು ಶ್ರೀ ಮದ್ಭಾಗವತ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

      ಶ್ರೀ ಪುರಂದರ ದಾಸರು ಸಾಹಿತ್ತಿಕ, ಸಂಸ್ಕೃತಿಕ, ಆಧ್ಯಾತ್ಮಿಮಿಕ ಕ್ಷೇತ್ರದಲ್ಲಿ ಅನನ್ಯ ಕೊಡುಗೆ ನೀಡಿದ್ದಾರೆ.ತಮ್ಮ ಕೀರ್ತನೆಗಳ ಮೂಲಕ ವ್ಯಕ್ತಿಗೆ ಕುಲ ಮುಖ್ಯವಲ್ಲ, ಗುಣ ಮುಖ್ಯ ಎಂಬ ಸಮಾನತೆಯ ಸಂದೇಶ ಸಾರಿದ್ದಾರೆ.ತಮ್ಮ ಚಿಂತನೆಗಳ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ದಾಸರ ಕೀರ್ತನೆಗಳು ಯಶಸ್ಸು ಕಂಡಿದೆ.ದಾಸರ ತತ್ವ, ಧಾರ್ಮಿಕ ಸಂಸ್ಕಾರಗಳ ಬಗ್ಗೆ ಜಾಗೃತಿ ಮೂಡಿಸಬೇಕಾದುದು ಸಾರ್ವಕಾಲಿಕ ಅಗತ್ಯ.ನಿರ್ಮಲ ಭಕ್ತಿಯ ಮೂಲಕ ಮುಕ್ತಿ ಹೊಂದಲು ದಾಸರ ಕಾವ್ಯ ನಮಗೆ ದಾರಿ ದೀಪ.ಪುರಂದರ ವಿಠ್ಠಲ ಅಂಕಿತದ ಅವರ ಕೀರ್ತನೆ, ಇತರ ಕೃತಿಗಳ ಅಧ್ಯಯನದಿಂದ ನಮ್ಮ ಜೀವನ ಪರಮ ಪಾವನವಾಗುವುದು ಎಂದರು.

           ದೇವಳದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣನ್ ಕಾಟುಕುಕ್ಕೆ ಅಧ್ಯಕ್ಷತೆ ವಹಿಸಿದರು.ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಶ್ರೀ ಕ್ಷೇತ್ರ ಧರ್ಮಸ್ಥಳ ರಾಜ್ಯ ಮಟ್ಟದ ಭಜನಾ ತರಬೇತಿ ಕಮ್ಮಟದ ಕುಣಿತ ಭಜನಾ ತರಬೇತಿ ಸಂಪನ್ಮೂಲ ಗುರು ರಮೇಶ್ ಕಲ್ಮಾಡಿ ಅವರನ್ನು ಸನ್ಮಾನಿಸಲಾಯಿತು.

     ಶ್ರೀಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ತು ಕಾರ್ಯದರ್ಶಿ ಜಯರಾಮ ನೆಲ್ಲಿತ್ತಾಯ, ಶ್ರೀ ಮದ್ಭಾಗವತ ಪ್ರಾಚಾರ್ಯ ಬ್ರಹ್ಮಶ್ರೀ ರಾಮ ಭಟ್ ನೀರ್ಚಾಲು, ಎಣ್ಮಕಜೆ ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ, ಶ್ರೀ ಪುರಂದರದಾಸ ಆರಾಧನೋತ್ಸವ ಸಮಿತಿ ಅಧ್ಯಕ್ಷ ಶ್ರೀ ಮಧ್ವಾಧೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆ ಉಪಸ್ಥಿತರಿದ್ದರು.

           ದೇವಳದ ಪ್ರಧಾನ ಅರ್ಚಕ ಮಧುಸೂದನ ಪುಣಿಂಚಿತ್ತಾಯ ಬೇಳಗ್ಗೆ ದೀಪ ಪ್ರಜ್ವಲಿಸುವ ಮೂಲಕ ಶ್ರೀ ಪುರಂದರದಾಸ ಆರಾಧನೋತ್ಸವಕ್ಕೆ ಚಾಲನೆ ನೀಡಿದರು.ಟ್ರಸ್ಟ್ ಗೆ ಒಳಪಟ್ಟು ಭಜನಾ ತರಬೇತಿ ಪಡೆದ ಭಜನಾ ತಂಡಗಳಿಂದ ದಾಸ ಸಂಕೀರ್ತನೆ, ಸಮೂಹ ಗಾಯನ, ಕುಂದಾಪುರ ಮೊವಾಡಿ ಶ್ರೀ ಮಾಣಿ ಸಿದ್ಧಲಿಂಗೇಶ್ವರ ದೇವಸ್ಥಾನದ ನುರಿತ ಭಜನಾ ತಂಡದ ವಿಶೇಷ ಕುಣಿತ ಭಜನಾ ಪ್ರಾತ್ಯಕ್ಷಿಕೆ ನಡೆಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries