ಕಾಸರಗೋಡು: ವಿಧಾನಸಭೆ ಚುನಾವಣೆಯ ಪೂರ್ವಭಾವಿ ಸಿದ್ಧತೆಗಳ ಅಂಗವಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮತ್ತು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಬಿ.ರಾಜೀವ್ ಅವರ ನೇತೃತ್ವದ ತಂಡ ಬುಧವಾರ ಸ್ಟ್ರಾಂಗ್ ರೂಂಗಳಿಗೆ ಮತ್ತು ಚುನಾವಣಾ ಸಾಮಾಗ್ರಿಗಳ ಸ್ವೀಕಾರ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ಸಿದ್ಧತೆಗಳ ಪರಿಶೀಲನೆ ನಡೆಸಿದೆ.
ಕಾಸರಗೋಡು ಸರ್ಕಾರಿ ಕಾಲೇಜು, ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಪೆರಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಪಡನ್ನಕ್ಕಾಡು ನೆಹರೂ ಕಾಲೇಜು, ತ್ರಿಕರಿಪುರ ಸರ್ಕಾರಿ ಪಾಲಿಟೆಕ್ನಿಕ್ ಗಳಿಗೆ ತಂಡ ಬೇಟಿ ನೀಡಿತು. ಸಹಾಯಕ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪ್ರಜೀಷ್ ತೋಟತ್ತಿಲ್, ಡಿ.ವೈ.ಎಸ್.ಪಿ. ಪಿ.ಪಿ.ಸದಾನಂದನ್, ವಿಧಾನಸಭಾ ಕ್ಷೇತ್ರಗಳ ಚುನಾವಣೆ ಅಧಿಕಾರಿಗಳು, ತಹಸೀಲ್ದಾರರು
ಮೊದಲಾದವರು ಜೊತೆಗಿದ್ದರು.