ತಿರುವನಂತಪುರ: ಪಿಎಸ್‍ಸಿ ಅಭ್ಯರ್ಥಿಗಳು ತಿರುವನಂತಪುರದ ಸೆಕ್ರಟರಿಯೇಟ್(ಸಚಿವಾಲಯ)ದ ಮುಂದೆ ನಡೆಸುತ್ತಿರುವ ಪ್ರತಿಭಟನೆ ಮುಂದುವರಿಯುತ್ತಿದೆ. ರ್ಯಾಂಕ್ ಹೋಲ್ಡರ್ಸ್ ಪ್ರತಿನಿಧಿಗಳು ಮುಖ್ಯಮಂತ್ರಿ ಕಚೇರಿಯೊಂದಿಗೆ ನಡೆಸಿದ ಮಾತುಕತೆ ವಿಫಲವಾಗಿದೆ ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ.
ಆದರೆ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಸೃಷ್ಟಿ ಸೇರಿದಂತೆ ತಮ್ಮ ಬೇಡಿಕೆಗಳನ್ನು ಅಂಗೀಕರಿಸುವ ಮತ್ತು ಅದು ಸಾಕಾರಗೊಳ್ಳುವವರೆಗೆ ಮುಷ್ಕರ ಮುಂದುವರಿಯುತ್ತದೆ ಎಂದು ಮುಖಂಡರು ಹೇಳಿದ್ದಾರೆ.
ಶುಕ್ರವಾರ ರಾತ್ರಿ 11.30 ಕ್ಕೆ ಮಾತುಕತೆ ಪ್ರಾರಂಭವಾಗಿ ಬೆಳಿಗ್ಗೆ 1.15 ರವರೆಗೆ ಮುಂದುವರೆಯಿತು. ರಾತ್ರಿಯಲ್ಲಿ ನಡೆದ ಚರ್ಚೆಗೆ ಡಿ.ವೈ.ಎಫ್.ಐ. ಮಧ್ಯಸ್ಥಿಕೆ ವಹಿಸಿತ್ತು. ಚರ್ಚೆಯ ವಿಫಲತೆಯ ನಂತರ, ಅಭ್ಯರ್ಥಿಗಳ ಮುಷ್ಕರ ಮತ್ತೆ ಮುಂದುವರಿಯಿತು.