ತಿರುವನಂತಪುರ: ರಾಜ್ಯದಲ್ಲಿ ಕಳೆದ ಅವಧಿಯ ಯುಡಿಎಫ್ ಸರ್ಕಾರ ಜಾರಿಗೆ ತಂದ ವೈದ್ಯಕೀಯ ಕಾಲೇಜುಗಳನ್ನು ಕಡಿತಗೊಳಿಸಿದೆ ಮತ್ತು ಬಡವರಿಗೆ ಅನುಕೂಲವಾಗುವ ಅನೇಕ ಆರೋಗ್ಯ ಯೋಜನೆಗಳನ್ನು ಮೊಟಕುಗೊಳಿಸಿರುವ ಎಡ ಸರ್ಕಾರ ಜನರ ಹಣದಿಂದ ನಕಲಿ ಅಪಪ್ರಚಾರ ನಡೆಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದ್ದಾರೆ. 2500 ಕ್ಕೂ ಹೆಚ್ಚು ಉಚಿತ ಎಂಬಿಬಿಎಸ್ ಸೀಟುಗಳು ಕಳೆದುಹೋಗಿವೆ. ಸ್ವ-ಧನಸಹಾಯದ ವೈದ್ಯಕೀಯ ಶುಲ್ಕಗಳು ತೀವ್ರವಾಗಿ ಏರಿಕೆಯಾಗಿದೆ ಎಂದು ಚಾಂಡಿ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ತಿರುವನಂತಪುರಂನ ಇಂದಿರಾಗಾಂಧಿ ವೈದ್ಯಕೀಯ ಕಾಲೇಜನ್ನು 2015 ರಲ್ಲಿ ನಿರ್ಮಿಸಲಾಯಿತು. ಜೊತೆಗೆ ವೈದ್ಯಕೀಯ ಶಿಕ್ಷಕರನ್ನು ನೇಮಿಸಲಾಗಿತ್ತು. ಮತ್ತು 100 ಸೀಟುಗಳಿಗೆ ವೈದ್ಯಕೀಯ ಮಂಡಳಿಯು ಅನುಮೋದಿಸಿತ್ತು. ಎಡ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಅದು ಮೂಲೆಗುಂಪಾಯಿತು. ಇಡುಕ್ಕಿ ವೈದ್ಯಕೀಯ ಕಾಲೇಜು 2015 ರಲ್ಲಿ ಪ್ರಾರಂಭವಾಯಿತು ಮತ್ತು ತಲಾ 50 ವಿದ್ಯಾರ್ಥಿಗಳಿಗೆ ಕಲಿಕೆಗೆ ಅವಕಾಶ ನೀಡಲು ಸರ್ಕಾರ ನಿರ್ಧರಿಸಿತ್ತು. ಎಡ ಸರ್ಕಾರವು ಹೆಚ್ಚಿನ ಸೌಲಭ್ಯಗಳನ್ನು ಒದಗಿಸದ ಕಾರಣ 2017 ರಲ್ಲಿ ಅದು ವೈದ್ಯಕೀಯ ಮಂಡಳಿಯ ಅನುಮೋದನೆಯನ್ನು ಕಳೆದುಕೊಂಡಿತು.
ಕೊನ್ನಿ, ಕಾಸರಗೋಡು, ವಯನಾಡ್ ಸರ್ಕಾರಿ ವೈದ್ಯಕೀಯ ಕಾಲೇಜುಗಳ ನಿರ್ಮಾಣಕ್ಕಾಗಿ ಸ್ಥಳವನ್ನು ಗುರುತಿಸಲಾಗಿತ್ತು. ನಬಾರ್ಡ್ ಹಣವನ್ನು ಮೀಸಲಿರಿಸಿ ನಿರ್ಮಾಣವನ್ನು ಪ್ರಾರಂಭಿಸಲಾಗಿತ್ತು. ಕೊನ್ನಿ ವೈದ್ಯಕೀಯ ಕಾಲೇಜಿನ ಕೆಲಸವು ಕಳವಳಕಾರಿಯಾಗಿ ಆ ಬಳಿಕ ಸಾಗಿ ಇದೀಗಷ್ಟೇ ಒಪಿ ಇದೀಗ ಪ್ರಾರಂಭವಾಗಿದೆ. ಕಾಸರಗೋಡು ವೈದ್ಯಕೀಯ ಕಾಲೇಜಿನ ಕಾಮಗಾರಿಯನ್ನು ಸುಧೀರ್ಘಕಾಲದವರೆಗೆ ನೆನೆಗುದಿಗೆ ಬೀಳುವಂತೆ ಮಾಡಿ ಇದೀಗ ಕೋವಿಡ್ ಆಸ್ಪತ್ರೆಯಾಗಿಯಷ್ಟೇ ಉಳಿದುಕೊಂಡಿದೆ. ವಯನಾಡ್ ವೈದ್ಯಕೀಯ ಕಾಲೇಜು ಇತ್ತೀಚೆಗೆ ಹೊಸ ಸ್ಥಳವನ್ನು ಗುರುತಿಸಿದೆ. ಹರಿಪ್ಪಾಡ್ ವೈದ್ಯಕೀಯ ಕಾಲೇಜು ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ.
2011 ರಲ್ಲಿ 5 ಸರ್ಕಾರ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟುಗಳ ಸಂಖ್ಯೆ 850 ಆಗಿತ್ತು. 2015 ರಲ್ಲಿ 10 ವೈದ್ಯಕೀಯ ಕಾಲೇಜುಗಳಲ್ಲಿ 1450 ಕ್ಕೆ ಏರಿಕೆಯಾಯಿತು. ತಿರುವನಂತಪುರಂ ಇಂದಿರಾಗಾಂಧಿ ವೈದ್ಯಕೀಯ ಕಾಲೇಜು 100 ಮತ್ತು ಇಡುಕ್ಕಿ 50 ಸೀಟುಗಳನ್ನು ಎಡರಂಗದ ಕಾಲದಲ್ಲಿ ಕಳೆದುಕೊಂಡಿದೆ. ಕೇಂದ್ರ ಸರ್ಕಾರವು ಸೀಟುಗಳ ಸಂಖ್ಯೆಯನ್ನು ಶೇಕಡಾ 10 ರಷ್ಟು ಹೆಚ್ಚಿಸುವುದರೊಂದಿಗೆ, ಈಗ 1555 ಸೀಟುಗಳು ಕೊನೆಗೂ ಉಳಿದುಕೊಂಡಿದೆ. ಇದಲ್ಲದೆ, ಎಡ ಸರ್ಕಾರದಲ್ಲಿ ಒಂದೇ ಒಂದು ಸೀಟನ್ನೂ ಹೊಸತಾಗಿ ಸೇರಿಸಲಾಗಿಲ್ಲ. ಯುಡಿಎಫ್ ಪ್ರಾರಂಭಿಸಿದ ವೈದ್ಯಕೀಯ ಕಾಲೇಜುಗಳು ಸಮಯಕ್ಕೆ ಪೂರ್ಣಗೊಂಡಿದ್ದರೆ, ಕೇರಳಕ್ಕೆ ಪ್ರತಿವರ್ಷ 500 ಸೀಟುಗಳು ಸಿಗುತ್ತಿದ್ದವು.
ಕೊಚ್ಚಿ ಮತ್ತು ಪರಿಯಾರಂ ವೈದ್ಯಕೀಯ ಕಾಲೇಜುಗಳು ಮತ್ತು ಪರಿಪಳ್ಳಿ ವೈದ್ಯಕೀಯ ಕಾಲೇಜನ್ನು ಯುಡಿಎಫ್ ಅವಧಿಯಲ್ಲಿ ವಹಿಸಿಕೊಳ್ಳಲಾಯಿತು. 30 ವರ್ಷಗಳ ನಂತರ ಯುಡಿಎಫ್ ಆಳ್ವಿಕೆಯಲ್ಲಿ ಇಡುಕ್ಕಿ, ಮಂಜೇರಿ ಮತ್ತು ಪಾಲಕ್ಕಾಡ್‍ನಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲಾಯಿತು. ಪಾಲಕ್ಕಾಡ್ ನಲ್ಲಿ ದೇಶದ ಒತ್ತಮೊದಲ ಪರಿಶಿಷ್ಟ ಜಾತಿ ವೈದ್ಯಕೀಯ ಕಾಲೇಜು ಆರಂಭಿಸಲಾಯಿತು. ಆದರೆ ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ಹೊಂದುವ ಯುಡಿಎಫ್ ಗುರಿಯನ್ನು ಎಡ ಸರ್ಕಾರ ವಿಫಲಗೊಳಿಸಿತು.
ಯುಡಿಎಫ್ ಅವಧಿಯಲ್ಲಿ ಸ್ವ-ಹಣಕಾಸು ವೈದ್ಯಕೀಯ ಶುಲ್ಕ 1.5 ಲಕ್ಷ ರೂ. ಆಗಿತ್ತು. ಮತ್ತು ಈಗ ಅದು 7 ಲಕ್ಷ ರೂ.ಆಗಿ ವರ್ಧನೆಗೊಂಡಿದೆ. ಇದನ್ನು 20 ಲಕ್ಷ ಮಾಡುವಂತೆ ಮಾಡಲಾಗಿದೆ. 2500 ಉಚಿತ ಸೀಟುಗಳನ್ನು ಕಳೆದುಕೊಂಡಿರುವುದರಿಂದ, ಅನೇಕ ವಿದ್ಯಾರ್ಥಿಗಳು ಅಧ್ಯಯನ ಮಾಡಲು ಭಾರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಕಾರುಣ್ಯ ಯೋಜನೆ, ಹಿಮೋಫಿಲಿಯಾ ರೋಗಿಗಳಿಗೆ ಉಚಿತ ಜೀವಮಾನದ ಚಿಕಿತ್ಸೆ, ಕಾಕ್ಲಿಯರ್ ಅಳವಡಿಕೆ ಮತ್ತು ಕ್ಯಾನ್ಸರ್ ರೋಗಿಗಳಿಗೆ ಉಚಿತ ಚಿಕಿತ್ಸೆಯಂತಹ ಯುಡಿಎಫ್ ಜಾರಿಗೆ ತಂದ ಅನೇಕ ಯೋಜನೆಗಳನ್ನು ರದ್ದುಪಡಿಸಲಾಗಿದೆ ಎಂದು ಉಮ್ಮನ್ ಚಾಂಡಿ ತೀವ್ರ ವಾಗ್ದಾಳಿಯ ಮೂಲಕ ಎಡರಂಗವನ್ನು ಬೆತ್ತಲುಗೊಳಿಸಿರುವರು.