ಕಾಸರಗೋಡು: ವಿಧಾನಸಭಾ ಚುನಾವಣೆಯಲ್ಲಿ ಎಂ.ಸಿ. ಖಮರುದ್ದೀನ್ ರಿಗೆ ಮಂಜೇಶ್ವರದಲ್ಲಿ ಸ್ಪರ್ಧಿಸದಿರಲು ಮುಸ್ಲಿಂ ಲೀಗ್ ನಿರ್ಧಾರ ಪ್ರಕಟಿಸಿದೆ. ಅವರ ಬದಲಿಗೆ ಯೂತ್ ಲೀಗ್ ರಾಜ್ಯ ಸಮಿತಿ ಸದಸ್ಯ, ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ. ಅಶ್ರಫ್ ರನ್ನು ಕಣಕ್ಕಿಳಿಸಲು ಲೀಗ್ ನಿರ್ಧರಿಸಿದೆ.
ಆಭರಣ ಹೂಡಿಕೆ ವಂಚನೆ ಪ್ರಕರಣದಲ್ಲಿ ಕಮರುದ್ದೀನ್ ಜೈಲಿಗೆ ಹೋಗಬೇಕಾದ ಸ್ಥಿತಿ ಅನುಭವಿಸಿದ ಖಮರುದ್ದೀನ್ ಅವರನ್ನು ಕಣಕ್ಕಿಳಿಸದಿರಲು ಲೀಗ್ ನೇತಾರರು ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಿದ್ದಾರೆ. ಪಕ್ಷದ ತೀರ್ಮಾನವನ್ನು ಅಂಗೀಕರಿಸಿರುವುದಾಗಿ ಖಮರುದ್ದೀನ್ ತಿಳಿಸಿದ್ದಾರೆ.