ಕುಂಬಳೆ: ಕಾಸರಗೋಡು ಜಿಲ್ಲಾ ಲೈಬ್ರೆರಿ ಕೌನ್ಸಿಲ್ ಆಶ್ರಯದಲ್ಲಿ 2020 - 21ರ ಯೋಜನೆಯನ್ವಯ ಎಲ್ಲಾ ಲೈಬ್ರರಿ ಗಳಲ್ಲಿ ಮತ್ತು, ಜಿಲ್ಲಾ ಮಟ್ಟದಲ್ಲಿ(ಲೈಬ್ರರಿ ಗಳಿಂದ ಆಯ್ಕೆ ಯಾದವರು) ಸಾರ್ವಜನಿಕ ಕನ್ನಡ ವಾಚನ ಸ್ಪರ್ಧೆ(21 ವರ್ಷ ಮೇಲ್ಪಟ್ಟವರಿಗೆ) ಆಯೋಜಿಸಲಾಗಿದೆ.
ವಾಚನ ಸ್ಪರ್ಧೆಗೆ ದಲಿಯನ ಡೋಲು(ಉದಯ ಸಾರಂಗ್), ಅಂಡಮಾನ್ ಕನಸು(ರಹಮತ್ ತರೀಕೆರೆ), ಕಾಗೆ ಮುಟ್ಟಿದ ನೀರು(ಡಾ.ಪುರುಷೋತ್ತಮ ಬಿಳಿಮಲೆ), ಬಾಲ ಮೇಧಾವಿ(ವಿಶ್ವ ಕಥಾಕೋಶ-ನಿರಂಜನ), ಮನದ ಕಜ್ಜಳ(ಟಿ.ಎ.ಎನ್.ಖ0ಡಿಗೆ) ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ.
ಫೆಬ್ರವರಿ 16 ರಂದು ಆಯಾ ಪ್ರದೇಶದ ಅಂಗೀಕೃತ ಲೈಬ್ರೆರಿ ಗಳಲ್ಲಿ ಪೂರ್ವಭಾವೀ ಪರೀಕ್ಷೆ ನಡೆಸಲಾಗುವುದು. ಭಾಗವಹಿಸುವ ಆಸಕ್ತರು ಹೆಸರು ಮೊದಲೇ ನೋಂದಾಯಿಸಿಕೊಂಡು ಇರುವಿಕೆಯನ್ನು ಖಾತರಿಪಡಿಸಿಕೊಳ್ಳಬಹುದು. ಹಾಗೂ ಆಯ್ಕೆಯಾದ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ಫೆಬ್ರವರಿ 21 ರಂದು ನಡೆಯುವ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗೆ ತಾಲೂಕು ಲೈಬ್ರೆರಿ ಕೌನ್ಸಿಲ್ ಕಛೇರಿಗೆ 04998-274776, 9747831801 ಸಂಖ್ಯೆಗೆ ಸಂಪರ್ಕಿಸಲು ಸಂಬಂಧಪಟ್ಟವರು ತಿಳಿಸಿದ್ದಾರೆ.