ತಿರುವನಂತಪುರ: ಲೋಕಸೇವಾ ಆಯೋಗದ ಪರೀಕ್ಷಾ ಪಟ್ಟಿಗಳನ್ನು ಪ್ರಕಟಿಸದಿರುವುದನ್ನು ಪ್ರತಿಭಟಿಸಿ ಸರ್ಕಾರಕ್ಕೆ ಎದುರಾಗಿ ಅಭ್ಯರ್ಥಿಗಳು ಕಳೆದ ಹಲವು ದಿನಗಳಿಂದ ಸೆಕ್ರಟರಿಯೇಟ್ ಮುಂದೆ ನಡೆಸುತ್ತಿದ್ದ ಪ್ರತಿಭಟನೆಗೆ ಶುಕ್ರವಾರ ಕೊನೆಗೂ ತಾರ್ಕಿಕ ಅಂತ್ಯ ಹಾಡಲಾಗಿದೆ.
ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ನಡೆಸಿದ ಸಂಧಾನ ಪ್ರಕ್ರಿಯೆ ಯಶಸ್ವಿಯಾಗಿದ್ದು, ಪ್ರತಿಭಟನೆ
ಕೇರಳದ ರಾಜ್ಯಪಾಲ ï ಖಾನ್ ಮತ್ತು ಮುಷ್ಕರ ಅಭ್ಯರ್ಥಿಗಳ ಪ್ರತಿನಿಧಿಗಳ ನಡುವಿನ ಸಭೆ ಮುಕ್ತಾಯಗೊಂಡಿಯಿಂದ ಹಿಂದೆ ಸರಿಯಲು ನಿರ್ಧರಿಸಲಾಗಿದೆ.
ಎಲ್ಲಾ ಅಗತ್ಯಗಳನ್ನು ಸಹಾನುಭೂತಿಯಿಂದ ಪರಿಹರಿಸಲಾಗುವುದು ಎಂದು ರಾಜ್ಯಪಾಲರು ಭರವಸೆ ನೀಡಿದ್ದಾರೆ. ಎಲ್ಲಾ ಸಮಸ್ಯೆಗಳು ರಾಜ್ಯಪಾಲರಿಗೆ ಮನವರಿಕೆ ಮಾಡಲಾಗಿದೆ ಮತ್ತು ಧನಾತ್ಮನಕ ಪರಿಹಾರದ ಭರವಸೆ ನೀಡಿರುವರೆಂದು ಉದ್ಯೋಗಾರ್ಥಿಗಳ ಹೋರಾಟ ಸಮಿತಿ ಮುಖಂಡರು ಹೇಳಿರುವರು.
ಬಿಜೆಪಿ ಮುಖಂಡ ಶೋಭಾ ಸುರೇಂದ್ರನ್ ಅಭ್ಯರ್ಥಿಗಳ ಪರವಾಗಿ 48 ಗಂಟೆಗಳ ಉಪವಾಸವನ್ನು ಕೈಗೊಂಡಿದ್ದರು. ಶೋಭಾ ಸುರೇಂದ್ರನ್ ಅವರ ಒತ್ತಡದಿಂದ ಅಭ್ಯರ್ಥಿಗಳು ರಾಜ್ಯಪಾಲರನ್ನು ಭೇಟಿ ಮಾಡಲು ಸಾಧ್ಯವಾಯಿತು.
ಮುಷ್ಕರವನ್ನು ಬೆಂಬಲಿಸಿ ಬಂದವರೆಲ್ಲರನ್ನೂ ಸಮಾನವಾಗಿ ಕಾಣಲಾಗಿದೆ. ಡಿವೈಎಫ್‍ಐ ಚರ್ಚೆಗೆ ಮಧ್ಯಸ್ಥಿಕೆ ವಹಿಸಿತ್ತು. ಆದರೆ ಆ ಬಳಿಕ ಶೋಭಾ ಸುರೇಂದ್ರನ್ ಅವರು ರಾಜ್ಯಪಾಲರನ್ನು ಭೇಟಿಯಾಗಲು ಅವಕಾಶ ಕಲ್ಪಿಸಿದ್ದರಿಂದ ಸಹಕರಿಸಿರುವುದಾಗಿ ಮುಖಂಡರು ತಿಳಿಸಿದರು.