ಕಾಸರಗೋಡು: ದ.ಕ ಜಿಲ್ಲೆ ಪ್ರವೇಶಿಸಲು ಕೋವಿಡ್ ತಪಾಸಣಾ ವರದಿ ಕಡ್ಡಾಯಗೊಳಿಸಿದ ಸರ್ಕಾರದ ಧೊರಣೆಗೆ ಕಾಸರಗೋಡು ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ದ.ಕ ಜಿಲ್ಲೆ ಪ್ರವೇಶಿಸುವ ನಾಲ್ಕು ಚೆಕ್‍ಪೊಸ್ಟ್ ಹೊರತುಪಡಿಸಿ ಇತರೆಡೆ ಮುಚ್ಚಲಾಗಿದ್ದು, ಇದರಿಂದ ಪ್ರಯಾಣಿಕರು ಪರದಾಡಬೇಕಾಯಿತು. ಉಭಯ ಜಿಲ್ಲೆಗಳಿಗೆ ಸಂಚರಿಸುವ ಬಸ್‍ಗಳಲ್ಲಿ ಪ್ರಯಣಿಕರ ಸಂಖ್ಯೆ ಗಣನೀಯವಗಿ ಕಡಿಮೆಯಿತ್ತು.
ದ.ಕ ಜಿಲ್ಲೆ ಪ್ರವೆಶಕ್ಕೆ ಕೋವಿಡ್ ತಪಾಸಣೆ ವರದಿ ಕಡ್ಡಾಯಗೊಳಿಸಿರುವ ಕ್ರಮವನ್ನು ಪುನರ್‍ಪರಿಶೀಲಿಸುವಂತೆ ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಶ್ರೀಕಾಂತ್ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಪತ್ರದ ಮೂಲಕ ಒತ್ತಾಯಿಸಿದ್ದಾರೆ. ಶಿಕ್ಷಣ, ಉದ್ಯೊಗ, ಆಸ್ಪತ್ರೆಗಳಿಗೆ ತೆರಳುವವರಿಗೆ ಸಮಸ್ಯೆ ತಂಡೊಡ್ಡುತ್ತಿದೆ. ಪರೀಕ್ಷೆ ಬರೆಯಲು ದ.ಕ ಜಿಲ್ಲೆಯ ವಿವಿಧ ಕಾಲೇಜುಗಲಿಗೆ ತೆರಳುವವರು ಆತಂಕಕ್ಕೊಳಗಾಗಿದ್ದಾರೆ. ಈ ಬಗ್ಗೆ ಸರ್ಕಾರ ಮಧ್ಯ ಪ್ರವೇಶಿಸಿ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವಂತೆ ಪತ್ರದಲ್ಲಿ ಶ್ರೀಕಾಂತ್ ಒತ್ತಾಯಿಸಿದ್ದಾರೆ.