ಮಂಜೇಶ್ವರ: ಅಭಿಮಾನವೆಂದರೆ ಮನಸಿನ ಒಳಗಿನ ಭಾವವಾಗಿದ್ದು ಅದನ್ನು ರೂಢಿಸಿಕೊಂಡ ಮಂಜೇಶ್ವರ ಮಠದ ಭಕ್ತರು ಕ್ಷೇತ್ರದ ಸಾನಿಧ್ಯಕ್ಕೂ ಅಭಿಮಾನತೆಯಿಂದ ಕೆಲಸ ಮಾಡಿ ಸಾರ್ಥಕತೆಯ ಮುನ್ನುಡಿಯನ್ನಿಟ್ಟಿದ್ದಾರೆ ಎಂದು ಶ್ರೀಮತ್ ಜಗದ್ಗುರು ಆನೆಗೊಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ನುಡಿದರು.
ಅವರು ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡ "ಶ್ರೀ ಮಾತಾನುಗೃಹ" ಪುರೋಹಿತರ ವಸತಿಗೃಹವನ್ನು ಸೋಮವಾರ ಬೆಳಗ್ಗೆ ದೀಪ ಬೆಳಗಿಸಿ, ಉದ್ಘಾಟಿಸಿ, ಬಳಿಕ ನಡೆದ ಆಶೀರ್ವಚನ ಕಾರ್ಯಕ್ರಮದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿದರು.
ದೇವಸ್ಥಾನ ಬೆಳಗಿದರೆ ನಮ್ಮ ಮನೆ, ಮನ ಕೂಡ ಬೆಳಗಿದಂತೆ. ಅಮ್ಮನವರ ಸನ್ನಿಧಾನ ಬೆಳಗಿದಂತೆ ನಾವು ಕೂಡಾ ಜೀವನದಲ್ಲಿ ಬೆಳಗುತ್ತೇವೆ. ದೇವರ ಸಾನಿಧ್ಯವಿದ್ದಂತೆ ನಮ್ಮ ಮನದಲ್ಲೂ ಸಾನಿಧ್ಯತೆಯಿದೆ. ಇದು ನಮ್ಮ ಬದುಕಿನ ಕಷ್ಟ ಕಾರ್ಪಣ್ಯಕ್ಕೆ ಅಂತ್ಯ ಹಾಡುತ್ತಾ, ಮನಸಲ್ಲಿ ಭಕ್ತಿಗೆ ಪೂರಕವಾಗತ್ತದೆ ಎಂದು ಅವರು ಶುಭಾಶೀರ್ವಚನವಿತ್ತರು.
ಸಭೆಯ ಅಧ್ಯಕ್ಷತೆಯನ್ನ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಪೆÇೀಳ್ಯ ಉಮೇಶ್ ಆಚಾರ್ಯ ಪುತ್ತೂರು ವಹಿಸಿದ್ದರು. ವೇದಿಕೆಯಲ್ಲಿ
ಕಾರ್ಯಕ್ರಮ ಮುಂಚಿತ ಪೂಜ್ಯ ಗುರುವರ್ಯರಿಗೆ ಕ್ಷೇತ್ರದ ವತಿಯಿಂದ ಪೂರ್ಣ ಕುಂಭ ಭವ್ಯ ಸ್ವಾಗತ ನೀಡಲಾಯಿತು. ಕ್ಷೇತ್ರದ ಮುಂಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ನಾಗ, ಗುಳಿಗ, ಪರಿವಾರ ದೇವರುಗಳ ಕಟ್ಟೆಯ ನಿರ್ಮಾಣ ಹಂತದ ಕಾರ್ಯ ಕಲಾಪವನ್ನು ವೀಕ್ಷಿಸಿದರು. ಬಳಿಕ ಕ್ಷೇತ್ರ ದರ್ಶನಗೈದ ಶ್ರೀ ಗಳು ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣಗೊಂಡ "ಶ್ರೀ ಮಾತಾನುಗ್ರಹ" ಪುರೋಹಿತರ ವಸತಿ ಗೃಹಕ್ಕೆ ಆರತಿ ಬೆಳಗಿ, ಪ್ರವೇಶಗೈದು, ದೀಪ ಬೆಳಗಿಸಿ, ಉದ್ಘಾಟಿಸಿದರು. ಈ ವೇಳೆ ಕ್ಷೇತ್ರದ ತಂತ್ರಿವರೇಣ್ಯ ಉಮೇಶ್ ತಂತ್ರಿ ಮಂಗಳೂರು, ಕ್ಷೇತ್ರದ ಪ್ರಧಾನ ಅರ್ಚಕ ಪುರೋಹಿತ ಪ್ರಕಾಶ್ಚಂದ್ರ ಶೌತ್ರಿ, ಆಡಳಿತ ಸಮಿತಿ ಅಧ್ಯಕ್ಷ ಪೆÇೀಳ್ಯ ಎಂ. ಉಮೇಶ ಆಚಾರ್ಯ ಪುತ್ತೂರು, ಸೇರಿದಂತೆ ಪಧಾಧಿಕಾರಿಗಳು, ಸದಸ್ಯರು, ಶ್ರೀಕಾಳಿಕಾ ಪರಮೇಶ್ವರೀ ವಿಶ್ವಕರ್ಮ ಮಹಿಳಾ ಸಂಘ, ಓಜ ಸಾಹಿತ್ಯ ಕೂಟ, ಶ್ರೀ ಗುರು ಸೇವಾ ಪರಿಷತ್ ನ ಪಧಾಧಿಕಾರಿಗಳು, ಸದಸ್ಯರು, ಉಪಸ್ಥಿತರಿದ್ದರು. ಪೂಜ್ಯ ಗುರುಗಳಿಗೆ ಕ್ಷೇತ್ರದ ವತಿಯಿಂದ ಗುರುಪಾದಪೂಜೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಕಾರ್ಯಕ್ರಮವು ಕೋವಿಡ್ ಮಾನದಂಡಗಳನ್ನ ಪಾಲಿಸಿಕೊಂಡು ಸರಳವಾಗಿ ನಡೆಯಿತು.