ತಿರುವನಂತಪುರ: ದೀರ್ಘಕಾಲ ಸೇವೆಯಿಂದ ಹೊರಗುಳಿದಿದ್ದ ರಾಜು ನಾರಾಯಣ ಸ್ವಾಮಿ ಅವರನ್ನು ಮತ್ತೆ ಐ.ಎ.ಎಸ್.ನಲ್ಲಿ ನೇಮಿಸಲಾಗಿದೆ. ಸಂಸದೀಯ ವ್ಯವಹಾರಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ರಾಜುನಾರಾಯಣ ಸ್ವಾಮಿ 1991 ರ ಕೇಡರ್ ಐ.ಎ.ಎಸ್ ಅಧಿಕಾರಿ. ಆಡಳಿತಾತ್ಮಕ ಸುಧಾರಣೆಗಳ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ತೆಂಗು ಅಭಿವೃದ್ಧಿ ಮಂಡಳಿಗೆ ಡೆಪ್ಯುಟೇಷನ್‍ಗೆ ತೆರಳಿದ್ದರು. 2019 ರ ಮಾರ್ಚ್‍ನಲ್ಲಿ ಕೇಂದ್ರ ಸರ್ಕಾರ ತೆಂಗು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹುದ್ದೆಯಿಂದ ರಾಜುನಾರಾಯಣ ಸ್ವಾಮಿಯನ್ನು ತೆಗೆದುಹಾಕಿತು. ಡೆಪ್ಯುಟೇಶನ್ ಅವಧಿ ಮುಗಿದಿದೆ ಮತ್ತು ಅವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ತಿಳಿಸಿತ್ತು. ಆದರೆ 1 ವರ್ಷದ ನಂತರ ರಾಜುನಾರಾಯಣಸ್ವಾಮಿ ಮತ್ತೆ ರಾಜ್ಯ ಸರ್ಕಾರದ ಹುದ್ದೆಗಳಿಗೆ ಮರಳಲು ವಿಸಮ್ಮತಿಸಿದ್ದರು. ತೆಂಗು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹುದ್ದೆಯಿಂದ ಅಮಾನತುಗೊಳಿಸಿದ್ದರ ವಿರುದ್ಧ ನ್ಯಾಯಾಲಯ ಮತ್ತು ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ ಪ್ರಕರಣ ಇರುವುದರಿಂದ ತಾನು ಸೇವೆಗೆ ಮರಳುವುದಿಲ್ಲ ಎಂದು ರಾಜನಾರಾಯಣ ಸ್ವಾಮಿ ಹೇಳಿದ್ದರು. ಪ್ರಕರಣಗಳು ಮುಗಿದ ಕಾರಣ ಸೇವೆಗೆ ಹಿಂತಿರುಗಿರುವರು.
ಕಾಸರಗೋಡು ಮರೆಯುದೆಂತು:
ದಶಕಗಳ ಹಿಂದೆ ಕಾಸರಗೋಡು ಜಿಲ್ಲಾಧಿಕಾರಿಯಾಗಿದ್ದ ರಾಜು ನಾರಾಯಣ ಸ್ವಾಮಿ ತಮ್ಮ ಕ್ರಿಯಾತ್ಮಕ ಆಡಳಿತ, ಜನಪರ ಧೋರಣೆ ಮತ್ತು ಸತ್ಯಸಂಧತೆಯಿಂದ ಚಿರಪರಿಚಿತರಾಗಿದ್ದರು. ವಶೀಲಿಗೆ ಜಗ್ಗದ ಅವರನ್ನು ಕ್ಷುಲ್ಲಕ ರಾಜಕೀಯ ಕಾರಣಗಳಿಂದ ಕಾಸರಗೋಡಿನಿಂದ ಎತ್ತಂಗಡಿ ಮಾಡಲಾಗಿತ್ತು.