ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಲಸಿಕೆ ಚುರುಕುಗೊಳಿಸಲಾಗುವುದು ಎಂದು ಆರೋಗ್ಯ ಸಚಿವೆ ಕೆ.ಕೆ. ಶೈಲಾಜಾ ತಿಳಿಸಿದ್ದಾರೆ. ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಹಂತದ ಮೊದಲು ಲಸಿಕೆ ನೀಡಲಾಗುವುದು. ಮುಂಚಿತವಾಗಿ ತಿಳಿಸದೆ ಲಸಿಕೆಗೆ ಆಗಮಿಸುವಂತೆ ಇಲ್ಲ ಎಂದು ಸಚಿವೆ ಹೇಳಿರುವರು.
ಕೋವಿಡ್ ವ್ಯಾಕ್ಸಿನೇಷನ್ ನಲ್ಲಿ ಕೇರಳ ಹಿಂದುಳಿದಿದೆ, ಮತ್ತು ನಿಯಂತ್ರಣ ಪ್ರಕ್ರಿಯೆಯಲ್ಲಿ ತುರ್ತುಕ್ರಮ ಯಾಕಿಲ್ಲ ಎಂದು ಕೇಂದ್ರ ಅಧ್ಯಯನ ತಂಡ ಆರೋಗ್ಯ ಸಚಿವೆಯನ್ನು ನಿನ್ನೆಯಷ್ಟೇ ತರಾಟೆಗೆ ತೆಗೆದುಕೊಂಡ ಬೆನ್ನಿಗೆ ಸಚಿವೆಯ ಹೇಳಿಕೆ ಮಹತ್ವಪಡೆದಿದೆ.