ಮಂಜೇಶ್ವರ: ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ಹಮ್ಮಿಕೊಂಡ ಯೋಜನೆಯಂತೆ ಎಲ್ಲಾ ಗ್ರಂಥಾಲಯಗಳಲ್ಲಿ ನಡೆಯುವ ಜನಪರ ಅಭಿವೃದ್ದಿ ವಿಜ್ಞಾನೋತ್ಸವ ವಿಚಾರ ಸಂಕಿರಣ ಚಿನಾಲದ ನವಯುವಕ ಕಲಾವೃಂದ ಗ್ರಂಥಾಲಯದಲ್ಲಿ ಲೈಬ್ರರಿ ಉಪಾಧ್ಯಕ್ಷ ಲವಾನಂದ ಎಲಿಯಾಣ ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ವಿಜಯ ಕುಮಾರ್ ಪಾವಳ ಭಾಗವಹಿಸಿ ವಿಷಯ ಮಂಡನೆ ಮಾಡಿದರು. ಕೇರಳ ಯಾವ ರೀತಿಯಲ್ಲಿ ಎಲ್ಲಾ ವಿಭಾಗದಲ್ಲಿ ಅಭಿವೃದ್ದಿ ಹೊಂದುತ್ತಿದೆ, ಸರ್ಕಾರದ ಯೋಜನೆಗಳ ಬಗ್ಗೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಿ. ಕಮಲಾಕ್ಷ ಉದ್ಘಾಟಿಸಿ ಮಾತನಾಡಿದರು. ಮಿಂಜ ಪಂಚಾಯತಿ ಸದಸ್ಯ ಸರಸ್ವತಿ ಎಲಿಯಾಣ, ಜನಾರ್ಧನ ಪೂಜಾರಿ ಅಥಿತಿಗಳಾಗಿ ಭಾಗವಹಿಸಿದರು.
ಗ್ರಂಥಾಲಯ ಸದಸ್ಯ ಬಾಳಪ್ಪ ಬಂಗೇರ, ಬಾಲಕೃಷ್ಣ ಶೆಟ್ಟಿ, ಲೋಕೇಶ ಸಿ, ಚಂದ್ರಾವತಿ ಮತ್ತು ಶಕೀಲಾ ಟೀಚರ್ ಚರ್ಚೆಯಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ಭಾಗವಾಗಿ ರಸ ಪ್ರಶ್ನೆ ಸ್ವರ್ಧೆ ನಡೆಸಲಾಯಿತು.ಗ್ರಂಥಾಲಯ ಕಾರ್ಯದರ್ಶಿ ಸಂದೀಪ್ ಕುಮಾರ್ ಸ್ವಾಗತಿಸಿ , ಗ್ರಂಥಪಾಲಕಿ ಗೀತಾ ವಂದಿಸಿದರು.