ಕಾಸರಗೋಡು: ಕಯ್ಯೂರು ಸರಕಾರಿ ಐ.ಟಿ.ಐ.ಯನ್ನು ಕಿಫ್ ಬಿ ಯೋಜನೆಯಲ್ಲಿ ಅಳವಡಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲಾಗುವುದು ಎಂದು ಅಬಕಾರಿ ಸಚಿವ ಟಿ.ಪಿ.ರಾಮಕೃಷ್ಣನ್ ತಿಳಿಸಿದರು.
ಈ ಸಂಬಂಧ ನಿರ್ಮಾಣ ಚಟುವಟಿಕೆಗಳಿಗೆ ಚಾಲನೆ ಮತ್ತು ಸಂಸ್ಥೆಯ ವಿದ್ಯಾರ್ಥಿಗಳಿಗೆ ಮತ್ತು ಮಹಿಳಾ ಸಿಬ್ಬಂದಿಗಾಗಿ ನಿರ್ಮಿಸಲಾದ ವಿಶ್ರಾಂತಿ ಕೇಂದ್ರದ ಉದ್ಘಾಟನೆ ನಡೆಸಿ ಅವರು ಮಾತನಾಡಿದರು.
ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಕಯ್ಯೂರು-ಚೀಮೇನಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಪಿ.ವತ್ಸಲನ್, ಉಪಾಧ್ಯಕ್ಷೆ ಎಂ.ಶಾಂತಾ, ನೀಲೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಪಿ.ಬಿ.ಷೀಬಾ, ಕಾಸರಗೋಡು ನೋಡೆಲ್ ಐ.ಟಿ.ಐ. ಪ್ರಾಂಶುಪಾಲ ಟಿ.ಪಿ.ಮಧು ಮೊದಲಾದವರು ಉಪಸ್ಥಿತರಿದ್ದರು.