ತಿರುವನಂತಪುರ: ಯುಎಇ ಕಾನ್ಸುಲೇಟ್ ನ ಮಾಜಿ ಗನ್ ಮ್ಯಾನ್ ನಾಪತ್ತೆಯಾಗಿರುವರೆಂದು ಸಂಬಂಧಿಕರು ದೂರಿದ್ದಾರೆ. ತುಂಬಾ ಪೋಲೀಸರಿಗೆ ದೂರು ನೀಡಲಾಗಿದೆ. ಜಯಗೋಶ್ ತನ್ನ ಪತ್ನಿಯನ್ನು ಮಂಗಳವಾರ ಉದ್ಯೋಗ ನಿರ್ವಹಿಸುವಲ್ಲಿಗೆ ಕರೆದೊಯ್ದಿದ್ದ. ಬಳಿಕ ಅವರು ಕಣ್ಮರೆಯಾದರು. ಜಯಗೋಶ್ ಅವರ ಸ್ಕೂಟರ್ ವಿವರಗಳನ್ನು ಪೋಲೀಸರು ದಾಖಲಿಸಿದ್ದಾರೆ.
ಜಯಗೋಶ್ ಅವರು ತೀವ್ರ ಮಾನಸಿಕ ತೊಂದರೆಯಲ್ಲಿದ್ದಾರೆ ಮತ್ತು ವಿವಾದಗಳಿಂದ ದೂರವಿರುತ್ತಾರೆ ಎಂದು ತಿಳಿಸುವ ಪತ್ರ ಪೋಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ. ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಜಯಗೋಶ್ ನಾಪತ್ತೆಯಾಗುವುದು ಇದು ಎರಡನೇ ಬಾರಿಯಾಗಿದೆ.
ಜಯಗೋಶ್ ಅವರು ಜುಲೈ 16 ರ ರಾತ್ರಿ ಚಿನ್ನ ಕಳ್ಳಸಾಗಣೆ ತನಿಖೆಯ ವೇಳೆ ನಾಪತ್ತೆಯಾಗಿದ್ದರು. ಆದರೆ ಮರುದಿನ ಅವರ ಮನೆಯ ಸಮೀಪ ಪೆÇದೆಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.