ತಿರುವನಂತಪುರ: ನಿಯೋಜಿತ ಚಾಲಕನ ಬದಲುಬೇರೊಬ್ಬ ಚಾಲಕ ಬಸ್ ಕಾರ್ಯನಿರ್ವಹಿಸಿದ ಕೇರಳ ಸಾರಿಗೆ ಬಸ್ ನ ಚಾಲಕನನ್ನು ವಿಜಿಲೆನ್ಸ್ ಬಂಧಿಸಿದೆ. ತಿರುವನಂತಪುರಂ-ಮಂಗಳೂರು ಸ್ಕ್ಯಾನಿಯಾ ಬಸ್ ಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಚಾಲಕನ ಹೆಸರಲ್ಲಿ ಮತ್ತೊಬ್ಬ ಉದ್ಯೋಗಿ ಕರ್ತವ್ಯದಲ್ಲಿರುವುದನ್ನು ಗಮನಿಸಿ ವಿಜಿಲೆನ್ಸ್ ಕ್ರಮ ಕೈಗೊಂಡಿದೆ.
ಪ್ರಯಾಣದ ವೇಳೆ ಮದ್ಯಂತರ ಅವಧಿಯ ಸಂಚಾರದ ವೇಳೆ ಆಂತರಿಕ ವಿಜಿಲೆನ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಕರ್ತವ್ಯದಲ್ಲಿದ್ದ ಚಾಲಕ ಸಂದೀಪ್ ಮದ್ಯ ಸೇವಿಸಿದ್ದು, ಈ ಕಾರಣ ಕರ್ತವ್ಯ ಮುಗಿಸಿ ತೆರಳುತ್ತಿದ್ದ ಸಂದೀಪ್ ಎಂಬ ಚಾಲಕ ಬಸ್ ಚಲಾಯಿಸುತ್ತಿದ್ದನೆಂದು ವಿಜಿಲೆನ್ಸ್ ತಿಳಿಸಿದೆ. ಕರ್ತವ್ಯಲೋಪಗೈದ ಉದ್ಯೋಗಿಗಳನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಸಿಎಂಡಿ ನಿರ್ದೇಶನ ನೀಡಿದರು. ಕೆಎಸ್‍ಆರ್‍ಟಿಸಿ ವಿಜಿಲೆನ್ಸ್‍ನ ಕಾರ್ಯನಿರ್ವಾಹಕ ನಿರ್ದೇಶಕರು ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಲಿದ್ದಾರೆ.