ತಿರುವನಂತಪುರ: ರಾಜ್ಯದ ಚಲನಚಿತ್ರ ಮಂದಿರಗಳಲ್ಲಿ ಸೆಕೆಂಡ್ ಶೋಗೆ ಅನುಮತಿ ಇಲ್ಲದಿರುವುದರಿಂದ ಚಿತ್ರೋದ್ಯಮ ತೀವ್ರ ಬಿಕ್ಕಟ್ಟಿನಲ್ಲಿ ಸಿಲುಕಿರುವ ಕಾರಣ ಚಿತ್ರಮಂದಿರಗಳಲ್ಲಿ ಸೆಕೆಂಡ್ ಶೋ ನಡೆಸಲು ಅನುಮತಿ ಕೋರಿ ಫಿಲ್ಮ್ ಚೇಂಬರ್ ಮುಖ್ಯಮಂತ್ರಿಗೆ ಪತ್ರ ಸಲ್ಲಿಸಿದೆ. ಪತ್ರದಲ್ಲಿ, ಮನರಂಜನಾ ತೆರಿಗೆ ವಿನಾಯಿತಿಯನ್ನು ಮಾರ್ಚ್ 31 ಮೀರಿ ವಿಸ್ತರಿಸಬೇಕೆಂದು ಚೇಂಬರ್ ಒತ್ತಾಯಿಸಿದೆ.
ಸೆಕೆಂಡ್ ಶೋ ಹೆಚ್ಚಾಗಿ ಕೌಟುಂಬಿಕ ವೀಕ್ಷಕರು ಪ್ರದರ್ಶನ ನೋಡಲು ಬಳಸುವ ಸಮಯವಾಗಿರುತ್ತದೆ. ಆರಂಭದಿಂದಲೂ, ಕೋವಿಡ್ ಪೆÇ್ರೀಟೋಕಾಲ್ ಅನ್ನು ಅನುಸರಿಸಲು ಕನಿಷ್ಠ 50 ಪ್ರತಿಶತದಷ್ಟು ಜನರಿಗೆ ಅವಕಾಶ ನೀಡಬೇಕೆಂದು ಸಂಸ್ಥೆಗಳು ಒತ್ತಾಯಿಸಿದ್ದವು. ಆದರೆ ನಿರ್ಬಂಧಗಳು ಅಗತ್ಯವೆಂದು ಆರೋಗ್ಯ ಇಲಾಖೆ ಹೇಳಿದೆ.
ಇಲ್ಲಿಯವರೆಗೆ ಬಿಡುಗಡೆಯಾದ ಚಿತ್ರಗಳಿಗೆ ಸಂಗ್ರಹದ ಭಾರೀ ಕೊರತೆ ಇದೆ ಎಂದು ಫಿಲ್ಮ್ ಚೇಂಬರ್ ಮತ್ತು ನಿರ್ಮಾಪಕರು ಹೇಳುತ್ತಾರೆ. ಇಂದುÉ ನಿಗದಿಯಾಗಿದ್ದ ಎಲ್ಲಾ ಬಿಡುಗಡೆಗಳನ್ನು ಸಾಮೂಹಿಕವಾಗಿ ಮುಂದೂಡಲಾಗಿದೆ.
ಇದರೊಂದಿಗೆ, ಮಮ್ಮುಟ್ಟಿ ಅಭಿನಯದ ಚಲನಚಿತ್ರ ದಿ ಪ್ರೀಸ್ಟ್ ಬಿಡುಗಡೆಯೊಂದಿಗೆ ಗೊಂದಲ ಮುಂದುವರೆದಿದೆ.